ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೀದರ್: ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಮಳಖೇಡ ಗ್ರಾಮದ ಅಂಬಾ ಭವಾನಿ ದೇವಸ್ಥಾನದಲ್ಲಿ ನೂತನ ನವದುರ್ಗಾ ಮೂರ್ತಿ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಿತು.
ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಭವಾನಿ ಮಂದಿರಕ್ಕೆ ಭೇಟಿ ನೀಡಿ ಭವಾನಿ ಮಾತೆಯ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್, ತಾಯಿ ಭವಾನಿ ಮಾತೆ ಎಲ್ಲರನ್ನೂ ಚನ್ನಾಗಿ ಕಾಪಾಡಲಿ, ರೈತರಿಗೆ ಉತ್ತಮ ಮಳೆ, ಬೆಳೆ ನೀಡಲಿ. ಕೊರೊನಾ ರೋಗ ಆದಷ್ಟು ಬೇಗ ಇಲ್ಲವಾಗಲಿ. ನಾಡಿನ ಜನತೆ ಸುಖ, ಶಾಂತಿ, ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಭವಾನಿ ಮಾತೆಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಜಗನ್ನಾಥ್ ಮಹಾರಾಜಾ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಗದೇವಿ, ಅನಿಲ್ ಕುಮಾರ್ ಬಂಗೂರೆ, ಮುಖಂಡ ರಾಘವೇಂದ್ರ ಮನ್ನಾಎಖೇಳ್ಳಿ, ಮಲ್ಲಪ್ಪ ಮನ್ನಾಎಖೇಳ್ಳಿ, ಶಂಕರ್ ಮನ್ನಾಎಖೇಳ್ಳಿ, ಪಾಂಡಪ್ಪ ನಿಡವಂಚಾ, ದೇವಸ್ಥಾನ ಸಮಿತಿ ಮುಖಂಡರು, ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post