ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರಿಗೆ ಮುಖ್ಯವಾಗಿ ಮೂಲ ಸೌಕರ್ಯಗಳಾದ ನಿವೇಶನ, ವಸತಿ ಕಲ್ಪಸಿಕೊಡಬೇಕು ಎಂದು ಹಿರಿಯೂರಿನ ಕೊಡಿಹಳ್ಳಿಮಠದ ಷಡಾಕ್ಷರ ಮುನಿ ಸ್ವಾಮೀಜಿ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ವಿಜಯ ಸಂಕಲ್ಪ ವಾರ್ಷಿಕ ಸಮಾರಂಭ ಮತ್ತು ಸರದಾರ ಮಾಸ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಿಕೆಗಳು ಇಂದು ಅಳಿವಿನಂಚಿಗೆ ಬಂದು ತಲುಪುತ್ತಿವೆ. ಮುಖ್ಯವಾಗಿ ರಾಜಕಾರಣಿಗಳು, ಅಧಿಕಾರಿಗಳು ಪತ್ರಕರ್ತರ ಬಗ್ಗೆ ಗಮನ ಹರಿಸಬೇಕಿದೆ. ಪತ್ರಿಕಾ ಪ್ರಚಾರಕ್ಕೆ ಬಳಸಿಕೊಂಡು ಸುಮ್ಮನಾದರೆ ಸಾಲದು ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸಬೇಕು. ಸಮಸ್ಯೆಗಳನ್ನು ಬೆಳಕಿಗೆ ತರುವ ಪತ್ರಕರ್ತರ ಬದುಕು ಕತ್ತಲಿನಲ್ಲಿ ಕಳೆಯುವಂತಾಗಬಾರದು. ಪತ್ರಕರ್ತರಿಗೆ ನಿವೇಶನ, ಪತ್ರಿಕಾ ಭವನ, ಸಮುದಾಯ ಭವನ ಹಾಗೂ ಇತರೆ ಮೂಲಸೌಕರ್ಯಗಳು ಸಿಗುವಂತಾಗಬೇಕು ಎಂದರು.
ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಕಂದಿಕೆರೆ ಸುರೇಶಬಾಬು ಮಾತನಾಡಿ, ಮೊದಲು ಶಾಲೆಯಲ್ಲಿ ಮೊಬೈಲ್ ಬಳಕೆ ಮಾಡಿದರೆ ಶಾಲೆಯಿಂದ ಹೊರಗೆ ಕಳುಹಿಸುತ್ತಿದ್ದರು. ಆದರೆ ಇಂದು ಎಲ್‌ಕೆಜಿ-ಯುಕೆಜಿ ಯಿಂದ ಹಿಡಿದು ಕಾಲೇಜ್‌ನವರೆಗೂ ಮೊಬೈಲ್ ಬಳಸದಿದ್ದರೆ ಹೊರಗೆ ಕಳುಹಿಸುವಂತ ಕಾಲ ಬಂದಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಪುಸ್ತಕಗಳು ಹೋಗಿ ಮೊಬೈಲ್ ಬಂತು ಎನ್ನುವ ಹಾಗೆ ಇಂದು ಯಾರೂ ಗ್ರಂಥಾಲಯಗಳಿಗೆ ಹೋಗುತ್ತಿಲ್ಲ. ಇತಿಹಾಸ, ಕವಿ ಪರಿಚಯ, ವಿಜ್ಞಾನಕ್ಕೆ ಸಂಭಧಿಸಿದ ವಿಷಯ, ರಾಜಕೀಯ ಪ್ರತಿಯೊಂದು ಮೊಬೈಲ್‌ನಲ್ಲೆ ಸಿಗುವುದರಿಂದ ಯಾರೂ ಪತ್ರಿಕೆಗಳನ್ನು ಓದುವ ಕಡೆ ಗಮನ ಕೊಡುತ್ತಿಲ್ಲ. ಬೆಳಗಾದರೆ ಪತ್ರಿಕೆ ಕಡೆ ಒಂದು ನೋಟ ಬೀರುವ ಕಾಲವಿತ್ತು. ಆದರೆ ಬೆಳಗಾದರೆ ಮೊಬೈಲ್ ನೋಡುವ ಕಾಲವಾಗಿ ಈಗ ಬದಲಾಗಿ ಮಾರ್ಪಟ್ಟಿದೆ. ಪತ್ರಿಕೆ ಓದುಗರಿಲ್ಲದೆ ಪತ್ರಿಕೆಗಳು ಮತ್ತು ಪತ್ರಕರ್ತ ಬದುಕು ಕಷ್ಟವಾಗುತ್ತಿದೆ ಎಂದು ಹೇಳಿದರು.
ನಗರ ಸಭೆ ಅಧ್ಯಕ್ಷೆ ಜಿ.ಬಿ. ಜಯಲಕ್ಷ್ಮಿ ಮಾತನಾಡಿ, ನಿರಂತವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ನಗರಸಭೆಯಿಂದ ನಿವೇಶನ ಮತ್ತು ಲ್ಯಾಪ್ ಟ್ಯಾಪ್ ನೀಡುವ ಭರವಸೆ ನೀಡಿದರು.
ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಎಚ್. ಲಕ್ಷ್ಮಣ್, ಮಾತನಾಡಿ, ಕತ್ತಿಯ ನಡಿಗೆ ಮೇಲೆ ಬರವಣಿಗೆ ಬದುಕು ನಮ್ಮದು. ಸ್ವಲ್ಪ ತಪ್ಪಿದರೂ ಅಪಾಯ ಖಂಡಿತ. ಪತ್ರಿಕಾ ಧರ್ಮ ಉಳಿಸಿಕೊಂಡು ಸಮಾಜದ ಕೊಳಕನ್ನು ಬಯಲಿಗೆ ಹೊರಗೆಳೆಯವ ಪತ್ರಕರ್ತ ಜೀವಕ್ಕೆ ಭದ್ರತೆ ಜೊತೆಗೆ ಮೂಲಸೌಕರ್ಯಗಳ ಕೊರೆತೆ ಎದ್ದು ಕಾಣುತ್ತಿದೆ. ಪತ್ರಕರ್ತರಿಗೆ ದಿನ ನಿತ್ಯ ಸುದ್ದಿಯನ್ನು ಹುಡುಕುವುದನ್ನು ಬಿಟ್ಟರೆ ಬೇರೆ ಯಾವ ಕೆಲಸ ಗೊತ್ತಿರುವುದಿಲ್ಲ. ಕೆಲಸದ ಜೊತೆಗೆ ಜೀವನ ಸಾಗಿಸುವುದು ದುಸ್ತರವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ. ಪ್ರಕಾಶ ಮೂರ್ತಿ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್. ಸಮರ್ಥರಾಯ್ ಮಾತನಾಡಿದರು.
ಈ ಸಮಯದಲ್ಲಿ ವಿಜಯಸಂಕಲ್ಪ ದಿನಪತ್ರಿಕೆ ಸಂಪಾದಕ ದ್ಯಾಮರಾಜ್, ಸರದಾರ ಮಾಸ ಪತ್ರಿಕೆಯ ಸಂಪಾದಕ ಮಂಜುನಾಥ, ಎ.ಕೆ. ಹನುಂಮತಪ್ಪ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post