ಹಾಸನ: ತಮ್ಮ ತಾಯಿಯ ಮೇಲೆ ಎರಗಿದ ಚಿರತೆಯೊಂದಿಗೆ ಸೆಣಸಾಡಿ, ಅದನ್ನು ಕೊಂದು ತನ್ನ ತಾಯಿಯ ಜೀವವನ್ನು ಯುವಕನೊಬ್ಬ ಉಳಿಸಿದ ಘಟನೆ ಅರಸೀಕೆರೆ ತಾಲೂಕಿನ ಬೈರಗೊಂಡನಹಳ್ಳಿಯಲ್ಲಿ ನಡೆದಿದೆ.
ಕಿರಣ್ ಎಂಬಾತ ತನ್ನ ತಾಯಿ ಚಂದ್ರಮ್ಮ ಅವರೊಂದಿಗೆ ನಿನ್ನೆ ಬೆಳಗ್ಗೆ 7 ಗಂಟೆಗೆ ತಮ್ಮ ಜಮೀನಿಗೆ ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಚಂದ್ರಮ್ಮನ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಆಗ ಅಲ್ಲೇ ಇದ್ದ ಕಿರಣ್ ಕೂಡಲೇ ಚಿರತೆ ಮೇಲೆ ಎರಗಿ, ಅದರ ಜೊತೆ ಸೆಣಸಾಡಿ ತನ್ನ ತಾಯಿಯನ್ನು ಕಾಪಾಡಿದ್ದಾನೆ. ಅಮ್ಮನ ಮೇಲೆರಗಿದ ಚಿರತೆಯ ಕುತ್ತಿಗೆಯನ್ನು ಬಿಗಿ ಹಿಡಿದು ಸೆಣಸಾಡಿದ ಕಿರಣ್ ಬರೋಬ್ಬರಿ 15 ನಿಮಿಷಗಳ ಕಾಲ ಸೆಣಸಾಡಿ ಚಿರತೆಯನ್ನು ಹೊಡೆದು ಸಾಯಿಸಿದ್ದಾನೆ.
ಈ ಘಟನೆಯಲ್ಲಿ ಕಿರಣ್ ಹಾಗೂ ಚಂದ್ರಮ್ಮ ಅವರುಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಾಯಿಯನ್ನು ಉಳಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿ ಗೆದ್ದ ಮಗನ ಕುರಿತಾಗಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Discussion about this post