ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಒಂದು ತಿಂಗಳ ಅವಧಿಯಲ್ಲಿ ಎಲ್’ಪಿಜಿ ಅಡುಗೆ ಸಿಲಿಂಡರ್ ದರ ಮೂರನೆಯ ಬಾರಿ ಏರಿಕೆಯಾಗಿದ್ದು, ಇಂದು ಒಂದೇ ದಿನ 25 ರೂ. ಹೆಚ್ಚಳವಾಗಿದೆ.
ಇದೇ ಫೆ.4 ಹಾಗೂ 14ರಂದು ಸಿಲಿಂಡರ್ ದರ ಹೆಚ್ಚಳವಾಗಿತ್ತು. ಈಗ ಮತ್ತೆ ಮೂರನೆಯ ಬಾರಿ ಏರಿಕೆಯಾಗಿದೆ. ಇದರಂತೆ 14.2 ಕೆಜಿ ತೂಕದ ಗೃಹ ಬಳಕೆಯ ಸಿಲಿಂಡರ್ ದರ 769 ರೂ.ಗಳಿಂದ 794 ರೂ.ಗಳಿಗೆ ಹೆಚ್ಚಾಗಿದೆ.
ಡಿಸೆಂಬರ್ 1ರಂದು ಸಿಲಿಂಡರ್ ದರವನ್ನು 594 ರೂ.ಗಳಿಂದ 644 ರೂ.ಗೆ ಹೆಚ್ಚಿಸಲಾಗಿತ್ತು. ನಂತರ ಡಿಸೆಂಬರ್ 15 ರಂದು ಮತ್ತೆ ಪ್ರತಿ ಸಿಲಿಂಡರ್‌ಗೆ 694 ರೂ.ಗೆ ಹೆಚ್ಚಿಸಲಾಯಿತು. ಹೀಗಾಗಿ, ಎಲ್‌ಪಿಜಿಯ ಬೆಲೆ ಒಂದು ತಿಂಗಳಲ್ಲಿ 100 ರೂ. ಆದರೆ ಜನವರಿಯಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿಲ್ಲ. ಜನವರಿಯಲ್ಲಿ, ಸಬ್ಸಿಡಿ ರಹಿತ ಎಲ್‌ಪಿಜಿ (14.2 ಕೆಜಿ) ಬೆಲೆ ಪ್ರತಿ ಸಿಲಿಂಡರ್‌ಗೆ 694 ರೂ.ಗೆ ಏರಿಕೆಯಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















