ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಶಿವರಾತ್ರಿ ಪ್ರಯುಕ್ತ ಕಾಗದ ನಗರ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ಹಲವು ಮಂದಿ ಧರ್ಮಸ್ಥಳಕ್ಕೆ ಪಾದಯಾತ್ರೆ ಏರ್ಪಡಿಸಿದ್ದು, ಕಾಗದ ನಗರದಿಂದ ಸುಮಾರು 150 ಮಂದಿ ಭಕ್ತರು ಪಾಲ್ಗೊಂಡರು.
ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಉಮೇಶ್ ಸ್ನೇಹಜೀವಿ ಬಳಗದ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು. ಹಾಗೂ ಭಕ್ತಾದಿಗಳ ಆರೋಗ್ಯ ರಕ್ಷಣೆಗಾಗಿ ಆಂಬ್ಯುಲೆನ್ಸ್ ಕಳುಹಿಸಿಕೊಡಲಾಯಿತು.
ಪಾದಯಾತ್ರೆಯಲ್ಲಿ 30ಕ್ಕೂ ಹೆಚ್ಚು ಜನ ವೃದ್ಧರು ಭಾಗವಹಿಸಿದ್ದು, ಮೂರು ದಿನಗಳ ಕಾಲ ನಡೆಯುವ ಈ ಪಾದಯಾತ್ರೆಯಲ್ಲಿ ಭಕ್ತಾದಿಗಳಿಗೆ ತುರ್ತು ಅಗತ್ಯ ಎದುರಾದರೆ ಸಹಾಯವಾಗಲಿ ಎಂಬ ಕಾರಣದಿಂದ ಸ್ನೇಹ ಜೀವ ಬಳಗದ ಉಮೇಶ್ ಅವರು ಆಂಬುಲೆನ್ಸ್ ವ್ಯವಸ್ಥೆ ಮಾಡಿರುವುದು ಸಾರ್ವಜನಿಕ ವಲದಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post