ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಪ್ರತಿವರ್ಷ ಮಾರ್ಚ್ ೮ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ವಿಶ್ವದಾದ್ಯಂತ ಮಹಿಳಾ ಹಕ್ಕುಗಳು ಮತ್ತು ಸಮಾನತೆಗಾಗಿ ಆಚರಣೆ ಮಾಡಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಕೇಕ್ ಕಟ್ ಮಾಡುವುದರ ಮೂಲಕ ಅಂತರಾಷ್ಟೀಯ ಮಹಿಳಾ ದಿನಾಚರಣೆಯನ್ನು ಆಚರಿಸಿ ಅವರು ಮಾತನಾಡಿದರು.
ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ, ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ ಎಂದು ಹೇಳಿದರು.
1975ರ ಮಾರ್ಚ್ 8 ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದವು. ಹೆಣ್ಣೆಂದರೆ ಭೂಮಿ ತೂಕದವಳು, ಕರುಣಾಮಯಿ, ಸಹನಾಮಯಿ, ಹೀಗೆ ಅವಳನ್ನು ಪರಿ ಪರಿಯಾಗಿ ಹೊಗಳುವುದಕ್ಕೇನು ಕಮ್ಮಿಯಿಲ್ಲ. ಮಹಿಳಾ ದಿನಾಚರಣೆ ಬಂದಾಗ ಎಲ್ಲರಿಗೂ ಹೆಣ್ಣು ನೆನಪಾಗುತ್ತಾಳೆ. ಮಾರ್ಚ್ ೮ರಂದು ವಿಶ್ವ ಮಹಿಳಾ ದಿನದಂದು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಮಹಿಳೆಯ ದಿನವನ್ನು ಕೇವಲ ಒಂದು ದಿನದ ಆಚರಣೆಗಾಗಿ ಆಚರಿಸಿದರೆ ಸಾಕೇ ಎಂದು ಪ್ರಶ್ನಿಸಿದರು.
ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಮರ್ಯಾದೆ ಹತ್ಯೆ, ಶಿಕ್ಷಣ ನಿರಾಕರಣೆ, ಹೆಣ್ಣು ಭ್ರೂಣ ಹತ್ಯೆ. ಹೀಗೆ ನಾನಾ ತರಹದ ಹಿಂಸೆಗಳಿಗೆ ಹೆಣ್ಣು ಜೀವಗಳು ಕ್ಷಣ ಕ್ಷಣವೂ ಬಲಿಯಾಗುತ್ತಿದೆ. ಇಷ್ಟೆಲ್ಲ ಅನಾಚಾರಗಳು ನಡೆಯುತ್ತಿದ್ದರೂ ಯಾವ ಅರ್ಥಕ್ಕಾಗಿ ಅವಳಿಗೊಂದು ದಿನ? ಹೆಣ್ಣಿಗೆ ಬೇಕಿರುವುದು ತೋರಿಕೆಯ ಗೌರವವಲ್ಲ. ಹೆಣ್ಣುಮಕ್ಕಳ ರಕ್ಷಣೆಗಾಗಿ ತಂದ ಕಾನೂನುಗಳು ಸಂವಿಧಾನದಲ್ಲಿದ್ದರೆ ಏನು ಪ್ರಯೋಜನ ಎಂದರು.
ನಗರಸಭೆ ಉಪಾಧ್ಯಕ್ಷೆ ಜೈತುನ್ಬಿ, ಸದಸ್ಯರಾದ ಕವಿತ, ಸುಜಾತ, ಮಂಜುಳ, ನಿರ್ಮಲ ಹಾಗೂ ಪೌರಯುಕ್ತ ಪಾಲಯ್ಯ ಕಂದಾಯ ಅಧಿಕಾರಿ ಈರಮ್ಮ ನಗರಸಭೆ ಮಹಿಳಾ ಸಿಬ್ಬಂದಿ ಇದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post