ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಇಓ ಶ್ರೀಧರ್ ಐ ಬಾರುಕೇರ್ ಗ್ರಾಮಪಂಚಾಯಿತಿ ಅಧಿಕಾರಿಯಿಂದ ಲಂಚ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.
ಬೆಳಗೆರೆ ಪಿಡಿಓ ಗುಂಡಪ್ಪ ಇವರಿಗೆ 14ನೇ ಹಣಕಾಸಿನ ಉಳಿಕೆ ಬಡ್ಡಿಮೊತ್ತ ಕ್ರೀಯಾ ಯೋಜನೆ ಮಾಡಿಕೊಡವ ವಿಚಾರಕ್ಕೆ 20,000 ಹಣ ಲಂಚದ ಬೇಡಿಕೆ ಇಟ್ಟಿದ್ದರು. ಅದರಂತೆ ಪಿಡಿಓ ಗುಂಡಪ್ಪ ಅವರು ಚಳ್ಳಕೆರೆ ತಾಲ್ಲೂಕು ಕಚೇರಿ ಮಂದೆ ಹಣ ನೀಡಿದ್ದಾರೆ. ಹಣ ಪಡೆದು ಚಿತ್ರದುರ್ಗದ ಕಡೆ ಹೊರಟಾಗ ತಾಲ್ಲೂಕು ಪಂಚಾಯಿತಿ ಮಂದೆ ಎಸಿಬಿ ತಂಡ ದಾಳಿ ನಡೆಸಿ ಇಓ ಶ್ರೀಧರ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಇಓ ಶ್ರೀಧರ್‌ಗೆ ಸಂಬಂಧಿಸಿದ ಚಿತ್ರದುರ್ಗದ ಮನೆಯ ಮೇಲೂ ಸಹ ದಾಳಿ ನಡೆಸಲಾಗಿದ್ದು, ಅವರ ಮನೆಯನ್ನು ಪರಿಶೀಲನೆ ನಡೆಸಿದಾಗ 9 ಲಕ್ಷರೂ. ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ದಾವಣಗೆರೆ ಎಸಿಬಿ ಎಸ್‌ಪಿ ಜಯಪ್ರಕಾಶ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬಸವರಾಜ್ ಮಗುದಮ್, ಪಿಐಗಳಾದ ಪ್ರವೀಣ್ ಕುಮಾರ್, ಆಂಜನೇಯ, ಡಿ.ಎಸ್. ಹರೀಶ, ಮಾರುತಿ, ಯತಿರಾಜ್, ಓಬಣ್ಣ, ಫಕ್ರುದ್ದಿನ್ ಪಾಯಾಜ್, ಪ್ರಭಾಕರ್, ಶ್ರೀಪತಿ ತಂಡ ದಾಳಿಯಲ್ಲಿ ಭಾಗವಹಿಸಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post