No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Sunday, March 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಜನರಿಕ್ ಔಷಧ: ಜನತೆಗೊಂದು ವರದಾನ!

ಜನರಿಕ್ ಔಷಧಗಳ ಬಗ್ಗೆಯೂ ವಿಶಿಷ್ಟವಾದ ಅಭಿಯಾನ ಆರಂಭವಾಗಬೇಕಿದೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 16, 2021
in Special Articles
0
ಜನರಿಕ್ ಔಷಧಿಗಳು ಕಳಪೆಯಲ್ಲ: ಬೆಲೆ ಕಡಿಮೆ. ಆದರೆ, ಗುಣಮಟ್ಟ ಮಾತ್ರ ಅತ್ಯುತ್ತಮ

Image Courtesy: Internet

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಇತ್ತೀಚೆಗಷ್ಟೇ ನನ್ನ ತಾಯಿಯವರ ಮಂಡಿನೋವಿಗೆ ಜನರಿಕ್ ಔಷಧ ಮಳಿಗೆಯಲ್ಲಿ ಒಂದು ಜೆಲ್ ಆಯಿಂಟ್ಮೆಂಟ್ ಖರೀದಿಸಿದೆ. ಅದಕ್ಕೆ ಇಪ್ಪತ್ತರಡು ರೂಪಾಯಿ ಕೊಟ್ಟೆ. ಕೆಲವು ವಾರಗಳು ಕಳೆದವು. ನನ್ನ ಮಡದಿಯ ಬೆನ್ನು ನೋವಿಗೆ ವೈದ್ಯರು ಆಯಿಂಟ್ಮೆಂಟ್ ಬರೆದು ಕೊಟ್ಟರು. ಅದನ್ನ ಕೊಳ್ಳಲು ಮೆಡಿಕಲ್ ಶಾಪಿಗೆ ಹೋದೆ. ನಾನು ಜನೌಷಧಿ ಮಳಿಗೆಯಲ್ಲಿ ಕೊಂಡಿದ್ದ ಆಯಿಂಟ್ಮೆಂಟ್ ಕೂಡ ಅದೇ ರಾಸಾಯನಿಕ ಒಳಗೊಂಡಿದ್ದು ತಿಳಿಯಿತು. ಮಾರುಕಟ್ಟೆ ಹೆಸರು ಬೇರೆ. ಬೆಲೆ ಎಪ್ಪತ್ತೈದು ರೂಪಾಯಿಗಳು. ಒಂದೇ ಔಷಧ ಬೇರೆ ಕಂಪೆನಿ ಉತ್ಪನ್ನ. ಬೇರೆಯದೇ ಹೆಸರುಗಳು. ಆದರೆ ಮುಖಬೆಲೆ ಅಜಗಜಾಂತರ ವ್ಯತ್ಯಾಸ!

ಹೀಗೆಯೇ ಜನರಿಕ್ ಜಾಡನ್ನು ಅರಸುತ್ತಾ ಹೋದೆ. ಅಂತರ್ಜಾಲದ ವಿಕಿಪೀಡಿಯ ವೀಕ್ಷಿಸಿದೆ. ಅಲ್ಲಿ ಒಂದು ಸಮಾಧಾನಕರ ವಿಚಾರ ಸಿಕ್ಕಿತು.

generic drug is a pharmaceutical drug that contains the same chemical substance as a drug that was originally protected by chemical patents. Generic drugs are allowed for sale after the patents on the original drugs expire.

ಏನಿದು ಜನರಿಕ್ ಅನಿವಾರ್ಯತೆ?
ಫೇಸ್ ಬುಕ್ ಮಿತ್ರರು, ಹಿರಿಯ ಪಶುವೈದ್ಯರಾಗಿರುವ ಡಾ. ಎನ್.ಬಿ. ಶ್ರೀಧರ್ ಅವರ ಲೇಖನವನ್ನು ಫೇಸ್ ಬುಕ್ ನಲ್ಲಿ ಕೂಡ ಓದಿದ್ದೆ. ಅವರೂ ಕೂಡ ಈ ಹಿನ್ನೆಲೆಯಲ್ಲಿಯೇ ವಿಸ್ತರಿಸಿ ಬರೆದಿದ್ದರು. ಜನರಿಕ್ ಅಥವಾ ಜನ ಔಷಧ ಈಗ ವ್ಯಾಪಕವಾಗಿ ಮನೆಮಾತಾಗುತ್ತಿದೆ. ಕಾಯಿಲೆಯೇ ಒಂದು ಸಮಸ್ಯೆ. ಅದಾದ ನಂತರ ವೈದ್ಯರ ಚಿಕಿತ್ಸೆ ಬಿಲ್ ಭರಿಸುವುದು ಇನ್ನೊಂದು. ಜೊತೆಗೆ ದೀರ್ಘಕಾಲೀನ ಔಷಧಗಳನ್ನು ಕೊಳ್ಳುವುದು ಮತ್ತೊಂದು ಸಮಸ್ಯೆ. ಇಂತಹ ಸನ್ನಿವೇಶ ಮಧ್ಯಮ ವರ್ಗ ಮತ್ತು ಕಡುಬಡವರನ್ನು ಕಾಡುತ್ತಿದೆ. ಔಷಧ ಕಂಪನಿಗಳು ಒಟ್ಟು ತಮ್ಮಉತ್ಪನ್ನಗಳ ದರವನ್ನ ಪ್ರತೀ ಉತ್ಪಾದನಾ ಹಂತದಲ್ಲೂ ಏರಿಕೆ ಮಾಡುತ್ತಲೇ ಇವೆ. ಅದಕ್ಕೆ ಸರಿಸಾಟಿಯಾಗಿ ತಮ್ಮ ಉತ್ಪನ್ನಗಳನ್ನ ಮಾರುಕಟ್ಟೆಯಲ್ಲಿ ರಭಸದಿಂದ ತಳ್ಳಲು ಕಂಪನಿಗಳು ವಿವಿಧ ತಂತ್ರಗಳನ್ನು ಅನುಸರಿಸುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿನಿರತರಿಗೆ ಪ್ರಲೋಭನೆಗಳನ್ನೂ ಒಡ್ಡುತ್ತಿದೆ. ಇದರ ಬಗ್ಗೆ ಅನೇಕ ವೈದ್ಯರು ವಿರೋಧ ವ್ಯಕ್ತಪಡಿಸುತ್ತಾರೆ.
ಇಂತಹ ಸನ್ನಿವೇಶ ನಮಗೆ ಯಾವಾಗಲೂ ಎದುರಾಗುತ್ತಿದೆ. ನಿಮಗೆ ನೆನಪಾಗಬಹುದು. ಕೇಂದ್ರ ಸಚಿವರಾಗಿದ್ದ ದಿ.ಅನಂತ ಕುಮಾರ್ ಅವರ ತೀವ್ರ ಒತ್ತಡದಿಂದ ಜನ ಔಷಧ ಕಲ್ಪನೆ ಮೂರ್ತ ಸ್ವರೂಪತಾಳಿತು. ಅಲ್ಲಿಯವರೆಗ ನೆನೆಗುದಿಯಲ್ಲೇ ಇತ್ತೇನೊ? ಗೊತ್ತಿಲ್ಲ. ಅಥವಾ ಅವರ ಕಾಲದಲ್ಲಿ ಜನಪ್ರಿಯವಾಯಿತೇನೊ?. ಏನೇ ಇರಲಿ. ಔಷಧಗಳಿಗೆ ತಮ್ಮ ಮಾಸಿಕ ಆದಾಯದ ಬಹುಪಾಲನ್ನು ಔಷಧಗಳಿಗೇ ಮೀಸಲಾಗಿಟ್ಟವರು ಅನೇಕರು. ಮಿಕ್ಕ ದೈನಂದಿನ ಖರ್ಚುವೆಚ್ಚಗಳಿಗೆ ಸಾಲಸೋಲ ಮಾಡುವ ಅನಿವಾರ್ಯತೆಯ ಸುಳಿಗೆ ಸಿಲುಕಿದ್ದಾರೆ. ಅಂಥವರಿಗೆ ಜನರಿಕ್ ಔಷಧಗಳು ಒಂದು ವರದಾನವೆಂದೇ ಹೇಳಬಹುದು.

ಕೈಗೆಟುಕುವ ದರ, ಶೀಘ್ರ ಪರಿಣಾಮ

ನನ್ನ ಆತ್ಮೀಯ ಮಿತ್ರರೊಬ್ಬರು ಜನೌಷಧಗಳ ಬಗ್ಗೆ ಅಭಿಪ್ರಾಯ ಕೇಳಿದರಂತೆ. ಅವರಿಗೆ ಸಕ್ಕರೆ ಕಾಯಿಲೆ ತೋದರೆ ಇದೆ. ಅದಕ್ಕೆ ವೈದ್ಯರು ಒಳ್ಳೆಯ ಪ್ರತಿಕ್ರಿಯೆ ನೀಡಿದರಂತೆ. ಅವತ್ತಿನಿಂದ ತಾವು ಜನರಿಕ್ ಔಷಧಗಳನ್ನೇ ಸೇವಿಸುತ್ತಿರುವೆ ಎಂದರು. ಅವರಿಗೀಗ ತಮ್ಮ ಆದಾಯದಲ್ಲಿ ಶೇ.30ರಷ್ಟು ಉಳಿಕೆಯಾಗುತ್ತಿದೆಯಂತೆ. ನಿವೃತ್ತರಿಗೆ ಈ ಉಳಿಕೆ ಒಂದು ಒಳ್ಳೆಯ ಮೊತ್ತವೆ!

ಜನರಿಕ್ ಔಷಧಗಳು ಮಾರುಕಟ್ಟೆ ಹೆಸರಿನ ಔಷಧಗಳಷ್ಟೇ ಸಮ. ಅದರಲ್ಲಿನ ಪ್ರಮಾಣ, ಬಳಕೆ, ಪರಿಣಾಮ, ಎಲ್ಲವೂ ಒಂದೇ ಎಂಬ ಮತ್ತೊಂದು ಅಭಿಪ್ರಾಯ ಅಂತರ್ಜಾಲದಲ್ಲಿದೆ.

Generic drugs are copies of brand-name drugs that have exactly the same dosage, intended use, effects, side effects, route of administration, risks, safety, and strength as the original drug. In other words, their pharmacological effects are exactly the same as those of their brand-name counterparts.

ಏನಿದು ಜನರಿಕ್ ಅನಿವಾರ್ಯತೆ?

ಇಷ್ಟೆಲ್ಲ ನಂಬಲರ್ಹ ಸಂಗತಿಗಳಿದ್ದರೂ ನಮ್ಮ ಬಹುತೇಕ ವೈದ್ಯರು ಯಾಕೆ ಜನರಿಕ್ ಔಷಧಗಳನ್ನು ಬರೆದು ಕೊಡುವುದಿಲ್ಲ? ಎಂಬ ಪ್ರಶ್ನೆ ನಮ್ಮನ್ನ ಕಾಡದೇ ಇಲ್ಲ. ಅದಕ್ಕೆ ವೈದ್ಯರಲ್ಲಿ ಹಾಗೂ ರೋಗಿಗಳಲ್ಲಿ ಜನರಿಕ್ ಔಷಧಗಳ ಬಗ್ಗೆ ವಿಶ್ವಾಸಮೂಡಿಲ್ಲ. ಇನ್ನೊಂದು ಕಾರಣವೆಂದರೆ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಬ್ರಾಂಡೆಡ್ ಕಂಪನಿಗಳ ದೈತ್ಯಬಲ. ಮಾರುಕಟ್ಟೆಯ ಮೇಲಿನ ಅವುಗಳ ಅವುಗಳ ದಾಳಿ ಮತ್ತು ಹಿಡಿತ. ಹೀಗಾಗಿ ಜನರಿಕ್ ಔಷಧಗಳ ಅಸ್ತಿತ್ವ ಕ್ಷೀಣವಾಗಿ ಕಾಣುತ್ತಿದೆ.

ಪ್ರಸ್ತುತ ಆಗಬೇಕಾಗಿರುವುದೇನು?

ಸರ್ಕಾರದ ಆಶಯ ಬಹಳ ನೇರ ಮತ್ತು ಸರಳ. ಶ್ರೀಸಾಮಾನ್ಯನ ಸಂಸಾರಕ್ಕೂ ಉತ್ತಮ ಔಷಧಗಳು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವುದು. ಆದರೆ ಅದರ ಜಾರಿಗೆ ಬಹಳ ದುರ್ಬಲ. ಏಕೆಂದರೆ ಸರ್ಕಾರಿ ಆಸತ್ರೆಗಳಲ್ಲಿ ಮೊದಲಿಗೆ ಜನರಿಕ್ ಔಷಧಗಳನ್ನು ಬರೆಯುವ ಬಗ್ಗೆ ವೈದ್ಯರಿಗೆ ಪ್ರೇರಣೆ ಹಾಗೂ ಜವಾಬ್ದಾರಿ ನೀಡಬೇಕು. ಅವುಗಳ ಬಗ್ಗೆ ರೋಗಿಗಳಲ್ಲಿ ಎರಡು ಮಾತು ಹೇಳಿ ವಿಶ್ವಾಸ ಮೂಡಿಸಬೇಕು. ಅಲ್ಲಿ ಜನರಿಕ್ ಔಷಧಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕಾರ್ಯ ನಡೆಯಬೇಕು. ಕೇವಲ ಜನ ಔಷಧ ಮಳಿಗೆಗಳನ್ನು ವೇಗವಾಗಿ ತೆರೆಯುವ ಕೆಲಸವಾದರೆ ಸಾಲದು. ಮಾಹಿತಿಯೂ ಕೂಡ ಮಿಂಚಿನಂತೆ ಜನತೆಯನ್ನು ತಲುಪಬೇಕು ಅಥವಾ ಜನರಿಕ್ ಮಳಿಗೆಯಲ್ಲಿ ಮಾರುಕಟ್ಟೆ ಹೆಸರು ಮತ್ತು ಅದಕ್ಕೆ ಸಮವಾಗಿರುವ ಜನರಿಕ್ ಉತ್ಪನ್ನಗಳ ಹೆಸರಿನ ಪಟ್ಟಿ ಜನರಿಕ್ ಮಳಿಗೆಗಳಲ್ಲಿ ಲಭ್ಯವಿರಬೇಕು.

ಮುಖ್ಯವಾಗಿ ಜಿಲ್ಲಾ ಮತ್ತು ತಾಲೂಕು, ಹೋಬಳಿ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರಿಗೆ ಜನರಿಕ್ ಔಷಧ ಬರೆಯಲು ಸರ್ಕಾರವೇ ಸೂಚನೆ ನೀಡಬೇಕು. ವೈದ್ಯರಿಗೆ ಜನರಿಕ್ ಉತ್ಪನ್ನಗಳ ಬಗ್ಗೆ ಮಾಹಿತಿ ಶಿಬಿರ ನಡೆಸಬೇಕು. ಸರ್ಕಾರ ಪ್ರಚಾರ ಮಾಧ್ಯಮಗಳ ಮೂಲಕ ಈ ಬಗ್ಗೆಯೂ ಜನತೆಯಲ್ಲಿ ಜಾಗೃತಿ ಮೂಡಿಸಬೇಕು.

ಕಾಸಿಗೆ ತಕ್ಕ ಕಜ್ಜಾಯವೇ?
ಕಾಸಿಗೆ ತಕ್ಕ ಕಜ್ಜಾಯ ಎಂಬ ಮಾತು ನಮ್ಮಲ್ಲಿ ಬಳಕೆಯಲ್ಲಿದೆ. ಆ ಇಂಗಿತವನ್ನೇ ಜನರಿಕ್ ಔಷಧಗಳ ಬಗ್ಗೆ ಸಹಜವಾಗೇ ಹೊಂದಿರುತ್ತೇವೆ. ಬಹಳ ಮಂದಿಗೆ ಜನರಿಕ್ ಔಷಧಗಳು ಕಡಿಮೆ ಬೆಲೆಗೆ ಸಿಗುತ್ತವೆಂದರೆ ಅಚ್ಚರಿಯ ಸಂಗಡ ಅದರ ಗುಣಮಟ್ಟದ ಬಗ್ಗೆ ಸಂದೇಹ ತಾಳುತ್ತಾರೆ. ಕಡಿಮೆ ದರ, ಕಡಿಮೆ ಸಾಮರ್ಥ್ಯ ಎಂಬ ಭಾವನೆ ಬರುತ್ತದೆ. ಆದರೆ ಅದು ಸಲ್ಲದು.

ಭದ್ರಾವತಿಯ ಜನಪ್ರಿಯ ಪ್ರಸೂತಿ ತಜ್ಞೆ, ವೈದ್ಯಕೀಯ ಬರಹಗಳ ಲೇಖಕಿ ಡಾ. ವೀಣಾ ಭಟ್ ಅವರ ಪ್ರತಿಕ್ರಿಯೆಯೂ ಜನರಿಕ್ ಔಷಧಗಳ ಮಹತ್ವ ಸಾರುತ್ತದೆ. For chronic illness I advise to go for generic drugs only ಅವರ ನಿಚ್ಚಳ ಅಭಿಪ್ರಾಯವಿದು.

ಏನಿದು ಜನರಿಕ್?
ಮಾರುಕಟ್ಟೆಯಲ್ಲಿ ಸಿಗುವ ಹೆಸರಾಂತ ಔಷಧ ಉತ್ಪನ್ನದ ಹಿಂದೆ ಸಂಶೋಧನೆ, ಅಭಿವೃದ್ಧಿ, ತಯಾರಿಕೆ, ಪ್ರಚಾರ ಮುಂತಾದ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಅದು ತನ್ನ ಉತ್ಪನ್ನದ ಹಕ್ಕನ್ನು ಹೊಂದಿ ಇಂತಿಷ್ಟು ವರ್ಷಗಳವರೆಗೆ ಏಕಮೇವತೆಯನ್ನು ಸ್ಥಾಪಿಸಿಕೊಂಡಿರುತ್ತದೆ. ಯಾರೂ ಆ ಔಷಧವನ್ನು ತಯಾರು ಮಾಡುವಂತಿಲ್ಲ. ಇಂತಿಷ್ಟು ವರ್ಷಗಳ ಗಡುವು ತೀರಿದ ನಂತರ ಅದರ ಮೇಲಿನ ಸ್ವಾಮ್ಯತೆ ಕಳೆದುಕೊಳ್ಳತ್ತದೆ. ಆಗ ಅದನ್ನು ಜನರಿಕ್ ಉತ್ಪನ್ನವಾಗಿ ಮಾರ್ಪಡಿಸಬಹುದು. ಖಾಸಗಿಯವರು ಮುಂದಾಗಿ ಅಂತಹ ಔಷಧ ತಯಾರಿಸಲು ಅನುಮತಿ ಪಡೆದುಕೊಳ್ಳುತ್ತಾರೆ. ಹಲವಾರು ಹಂತದ ವೆಚ್ಚಗಳು ಉಳಿದುಕೊಳ್ಳುತ್ತವೆ. ಕೇವಲ ತಯಾರಿಕೆ ಮತ್ತು ಮಾರಾಟ ಮಾತ್ರ. ಹೀಗಾಗಿ ಕಡಿಮೆ ದರ ವಿಧಿಸಲು ಸಾಧ್ಯವಾಗುತ್ತದೆ.

ಉದಾಹರಣೆಗೆ ಒಂದು ಮಾತ್ರೆಯ ಉತ್ಪಾದನಾ ವೆಚ್ಚ ಒಂದು ರೂಪಾಯಿ ಇದೆ ಅನ್ನೋಣ. ಅದರ ಪ್ರಚಾರಕ್ಕೇ ಕಂಪನಿಯು ಒಂಬತ್ತು ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಅಂದರೆ ಒಂದು ಮಾತ್ರೆಯ ಮುಖಬೆಲೆ ಲಾಭಾಂಶ ಸೇರಿಸಿ ಹತ್ತು ರೂಪಾಯಿ ಆಗುತ್ತದೆ..(ಉಲ್ಲೇಖ, ಡಾ.ಬಿ.ಎಚ್.ಮಂಜುನಾಥ್ ಅವರ ವಿಜಯವಾಣಿ ಕಳಕಳಿ ಅಂಕಣ). ಅವರೇ ಉಲ್ಲೇಖಿಸಿರುವಂತೆ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ನಂಥ ಕಾಯಿಲೆಗಳು ಸರ್ವೇ ಸಾಮಾನ್ಯವಾಗಿದೆ. ಈಗ ಖಾಸಗಿ ಔಷಧ ತಯಾರಕರ ಔಷಧ ಮಾತ್ರೆಗಳು ದುಬಾರಿ ಎನಿಸಿದರೂ ಕೊಳ್ಳುವುದು ಅನಿವಾರ್ಯವಾಗುವಂತೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ಜನೌಷಧ ಮಳಿಗೆಗಳಲ್ಲಿ ಈಗ 500ಕ್ಕೂ ಹೆಚ್ಚು ಬಗೆಯ ಔಷಧಗಳು ಸಿಗುತ್ತವೆ. 150 ಮಾದರಿಯ ವೈದ್ಯಕೀಯ ಪರಿಕರಗಳು ಲಭ್ಯವಿವೆ.

ಖಾಸಗಿ ಕಂಪನಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬಂದರೆ ನಾಗರಿಕರಿಗೆ ಮತ್ತಷ್ಟು ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಆದ್ದರಿಂದ ಕಡಿಮೆ ದರ ಎಂದಾಕ್ಷಣ ಔಷಧಗಳು ಪರಿಣಾಮಕಾರಿಯಲ್ಲ ಎಂಬ ಅಭಿಪ್ರಾಯ ತಾಳುವುದು ಬೇಡ. ಹೆಸರುವಾಸಿ ಕಂಪೆನಿಗಳು ತಮ್ಮ ಹಕ್ಕುಸ್ವಾಮ್ಯದಲ್ಲಿ ದುಬಾರಿ ಎನಿಸುವ ಔಷಧಗಳ ಉತ್ಪಾದನೆ ಈಗಾಗಲೇ ಮಾಡುತ್ತಿವೆ. ಜೊತೆಗೆ ಅರ್ಧಕ್ಕರ್ಧಷ್ಟು ಕಂಪನಿಗಳು ಜನರಿಕ್ ಉತ್ಪನ್ನಗಳನ್ನೂ ತಯಾರಿಸುತ್ತಿವೆ. ಜನರಿಕ್ ಔಷಧಗಳು ಪರಿಣಾಮದಲ್ಲಿ ಬಹಳ ನಿಧಾನ ಎನ್ನುವ ತಪ್ಪು ನಂಬಿಕೆಯಿದೆ.ಆದರೆ ಔಷಧ ನಿಯಂತ್ರಣ ಸಂಸ್ಥೆ ಅವುಗಳು ಹೆಸರಾಂತ ಉತ್ಪನ್ನಗಳಷ್ಟೇ ಶೀಘ್ರ ಪರಿಣಾಮ ಹೊಂದಿರಬೇಕೆಂದು ಆಶಿಸುತ್ತದೆ.

ಈ ಉತ್ಪನ್ನಗಳು ಯಾವುದೇ ನಿರ್ದಿಷ್ಟ ಕಂಪನಿಗಳ ಸಂಬಂಧ ಹೊಂದಿರುವುದಿಲ್ಲ. ಜನರಿಕ್ ಔಷಧಗಳು ಯಾವ ದೇಶದಲ್ಲಿ ಬಳಸಲ್ಪಡುತ್ತದೆಯೋ ಆಯಾ ದೇಶದ ನಿಯಂತ್ರಣದಲ್ಲಿರುತ್ತವೆ.

ನಮ್ಮ ದೇಶದಲ್ಲಿ ಔಷಧ ನಿಯಂತ್ರಕ ಸಂಸ್ಥೆಯಿದೆ. Drugs Standard Control Organization. ಈ ಸಂಸ್ಥೆಯು ಅಮೆರಿಕದ ಎಫ್ ಡಿ ಎ ಗೆ ಸಮವಾಗಿದೆ. ಭಾರತದಲ್ಲಿ ಔಷಧಗಳ ಮತ್ತು, ವೈದ್ಯಕೀಯ ಉಪಕರಣಗಳ ಕುರಿತು ಮಾರಾಟ ಹಾಗೂ ಅನುಮತಿ ನೀಡುತ್ತದೆ. ಈ ಸಂಸ್ಥೆಯ ಮೂಲಕವೇ ಅಧಿಕೃತವಾಗಿ ಜನರಿಕ್ ಔಷಧಗಳು ಅನುಮತಿ ಹೊಂದಿವೆ. ಹೀಗಿರುವಾಗ ಔಷಧ ಪರಿಣಾಮ ಮತ್ತು ಜನತೆಯ ಜೀವರಕ್ಷಣೆ ಸರ್ಕಾರದ್ದೇ ಆಗಿರುತ್ತದೆ. ಈ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ನಮ್ಮಲ್ಲಿ ಆಗಬೇಕಿದೆ. ಇಂತಹ ಸನ್ನಿವೇಶದಲ್ಲಿ ನಮ್ಮ ಸ್ವಯಂ ಸೇವಾ ಸಂಘಸಂಸ್ಥೆಗಳ ಪಾತ್ರವನ್ನೂ ಬಹಳ ಪ್ರಮುಖ ಎಂದು ಹೇಳಬಹುದು. ಅಷ್ಟೇ ನಮ್ಮ ಸೇವಾಮನೋಭಾವ ಹಾಗೂ ವೃತ್ತಿಪರ ವೈದ್ಯರ ಒಳಗೊಳ್ಳುವಿಕೆಯೂ ಅಗತ್ಯವಿದೆ.

ಅಭಿಯಾನದ ಅವಶ್ಯಕತೆ
ಮುಂದುವರೆದ ದೇಶವೆಂಬ ಹೆಗ್ಗಳಿಕೆಯ ಅಮೆರಿಕದ್ದು. ಅಲ್ಲಿ 2014ರ ಒಂದು ಅಧ್ಯಯನದ ಪ್ರಕಾರ ವೈದ್ಯರುಗಳು ಬರೆದ ಸುಮಾರು ನಾಲ್ಕು ಬಿಲಿಯನ್’ಗೂ ಅಧಿಕ ಸಲಹಾ ಚೀಟಿಗಳಲ್ಲಿ ಶೇ.88ರಷ್ಟು ಜನರಿಕ್ ಉತ್ಪನ್ನಗಳಿವೆ ಎಂದು ಅಲ್ಲಿ ಜನರಿಕ್ ಔಷಧ ಉತ್ಪನ್ನ ಸಂಸ್ಥೆ ತಿಳಿಸುತ್ತದೆ. ನಮ್ಮ ದೇಶದಲ್ಲೂ ಈಗಿನ ಜನರಿಕ್ ಔಷಧ ಬಳಸಿದ ರೋಗಿಗಳ ಪ್ರತಿಕ್ರಿಯೆ ಸಂಗ್ರಹಿಸಬೇಕು. ಸಾಕಷ್ಟು ಅನುಕೂಲಕರವಾಗಿದ್ದನ್ನೇ ಕೇಳಿದ್ದೇವೆ. ಈ ಬಗ್ಗೆ ನಮ್ಮಲ್ಲಿ ನಾವಿನ್ನೂ ಮೀನ ಮೇಷ ಎಣಿಸುತ್ತಿದ್ದೇವೇನೊ!

ಸ್ಯಾನಿಟರಿ ಪ್ಯಾಡ್’ಗಳ ಬಗ್ಗೆ, ರಕ್ತ ಗುಂಪುಗಳ ಕುರಿತು, ಮಕ್ಕಳಲ್ಲಿನ ಆಟಿಸಂ ಕಾಯಿಲೆ ಬಗ್ಗೆ, ಮಾನಸಿಕ ತೊಂದರೆಗಳು ಹಾಗೂ ಅನೇಕ ಸಮುದಾಯ ಕ್ಷೇಮಪರ ಸೇವೆ ಹಾಗೂ ಜಾಗೃತಿ ಆಂದೋಲನ ಮಾಡುತ್ತಿವೆ, ಸಂತೋಷ. ಈಗ ಜನರಿಕ್ ಔಷಧಗಳ ಬಗ್ಗೆಯೂ ವಿಶಿಷ್ಟವಾದ ಅಭಿಯಾನ ಆರಂಭಿಸಬೇಕೆನಿಸುತ್ತದೆ. ಜನರಿಕ್ ಔಷಧಗಳು ಮತ್ತು ಅದಕ್ಕೆ ಸಮವಾದ ಮಾರುಕಟ್ಟೆ ಹೆಸರುಗಳು, ಅವುಗಳಲ್ಲಿನ ರಾಸಾಯನಿಕ ಅಂಶ ಇತ್ಯಾದಿಗಳ ಬಗ್ಗೆ ಎಚ್ಚೆತ್ತ ಶ್ರೀಸಾಮಾನ್ಯರಲ್ಲಿ ಅರಿವು ಮೂಡಿಸಬಹುದು. ನಮ್ಮ ವೈದ್ಯರ ಸಂಘ ಅಂದರೆ ಐಎಂಎ ಉತ್ತಮ ಸೇವಾಕಾರ್ಯಗಳನ್ನು ಮಾಡುತ್ತಿರುತ್ತದೆ. ಈಗ ಜನೌಷಧ ಕುರಿತು ವೈದ್ಯ ಸಮೂಹ ಮತ್ತು ಔಷಧ ಮಾಹಿತಿ ಬಗ್ಗೆ ಸೇತುಬಂಧ ಆಂದೋಲನ ಹಮ್ಮಿಕೊಂಡರೆ ಬಡ ರೋಗಿಗಳಿಗೆ ಕಿಂಚಿತ್ ನೆರವು ನೀಡಿದ ಪುಣ್ಯ ಬರುತ್ತದೆ.

ನಮ್ಮ ದೇಶೀಯ ಮಾರುಕಟ್ಟೆಯಲ್ಲಿ ಬಟ್ಟೆ, ವಾಹನ, ಚಪ್ಪಲಿ, ಟಿವಿ, ಸೌಂದರ್ಯ ಸಾಧನಗಳು ಇತ್ಯಾದಿ ವಸ್ತುಗಳನ್ನು ಶೇ. ರಿಯಾಯ್ತಿಯಿಟ್ಟು ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಕ್ಷೇಮಲಾಭದ ಔಷಧ, ಮಾತ್ರೆಗಳ ಬಗ್ಗೆ ಅಷ್ಟು ಸಮನಾದ ತಂತ್ರಗಳಿಲ್ಲ ಎನ್ನುವುದು ದುರಾದೃಷ್ಟಕರ. ಪತಂಜಲಿ ಉತ್ಪನ್ನಗಳು ಹೇಗೆ ಒಂದು ಹರಿವನ್ನೇ ಹುಟ್ಟು ಹಾಕುತ್ತಿದೆಯೋ ಅದೇ ತೆರನಾಗಿ, ಸುಲಭ ದರದ ಪರಿಣಾಮಕಾರೀ (ಜನರಿಕ್)ಜನೌಷಧ ಬಗ್ಗೆ ಜಾಗೃತಿ ಅಭಿಯಾನ ರೂಪುಗೊಳ್ಳಬೇಕಾದದ್ದು ಈಗಿನ ಜರೂರು ಅನಿಸುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Generic medicineKannada News WebsiteLatest News KannadaLocal NewsMalnad NewsShimogaShivamogaShivamogga NewsSpecial Article by Dr N Sudheendraಉಕ್ಕಿನನಗರಿಭದ್ರಾವತಿಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್
Share229Tweet123Send
Previous Post

ಎಚ್.ವಿ.ನಂಜುಂಡಯ್ಯ ಪಾರಂಪರಿಕ ಕಟ್ಟಡ ಜೀರ್ಣೋದ್ಧಾರ: ಜರ್ಮನ್ ಕಾನ್ಸುಲೇಟ್ ಅಧಿಕಾರಿಗಳ ಮೆಚ್ಚುಗೆ

Next Post

ಎಂಐಎಫ್’ಎಸ್’ಇ ವತಿಯಿಂದ ರಸ್ತೆ ಸುರಕ್ಷತಾ ಅಭಿಯಾನ: ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಎಂಐಎಫ್’ಎಸ್’ಇ ವತಿಯಿಂದ ರಸ್ತೆ ಸುರಕ್ಷತಾ ಅಭಿಯಾನ: ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

ಎಂಐಎಫ್’ಎಸ್’ಇ ವತಿಯಿಂದ ರಸ್ತೆ ಸುರಕ್ಷತಾ ಅಭಿಯಾನ: ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಛಾಯಾಗ್ರಹಣ ಕ್ಷೇತ್ರದ ವಿಶ್ವಾಸಾರ್ಹ ಹೆಸರು ಕರಾವಳಿಯ ಉದಯ್‌ ಶಂಕರ್ ಪಡಿಯಾರ್

ಛಾಯಾಗ್ರಹಣ ಕ್ಷೇತ್ರದ ವಿಶ್ವಾಸಾರ್ಹ ಹೆಸರು ಕರಾವಳಿಯ ಉದಯ್‌ ಶಂಕರ್ ಪಡಿಯಾರ್

March 19, 2026
National Safety Week 2026 Observed at Carriage Repair Workshop, Hubballi

National Safety Week 2026 Observed at Carriage Repair Workshop, Hubballi

March 18, 2026
7 ತಿಂಗಳಲ್ಲಿ 355 ವಿಶೇಷ ರೈಲುಗಳ ಸಂಚಾರದಿಂದ ನೈಋತ್ಯ ರೈಲ್ವೆ ಗಳಿಸಿದ್ದು ಎಷ್ಟು ಕೋಟಿ ಆದಾಯ?

ಹುಬ್ಬಳ್ಳಿ | ರೈಲ್ವೆ ಇಲಾಖೆ ಪರೀಕ್ಷೆ ಮುಂದೂಡಿಕೆ

March 18, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಯುಗಾದಿ ಹಬ್ಬ ಹಿನ್ನೆಲೆ: ಯಶವಂತಪುರ ಮತ್ತು ಹೊಸಪೇಟೆ ನಡುವೆ ವಿಶೇಷ ರೈಲು ಸೇವೆ

March 18, 2026
ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

March 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL