ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಸೋಮವಾರ ಯುವರತ್ನನ ಯುವ ಸಂಭ್ರಮ ಜೋರಾಗಿತ್ತು.
ಸಿನಿಮಾ ಬಿಡುಗಡೆಗೂ ಮುನ್ನವೇ ರಾಜ್ಯದಾದ್ಯಂತ ಯುವರತ್ನನ ಕಾವು ಜೋರಾಗಿದ್ದು, ನಟ ಪುನೀತ್ ರಾಜಕುಮಾರ್ ನೇತೃತ್ವದಲ್ಲಿ ಯುವರತ್ನ ಟೀಂ ರಾಜ್ಯ ಪ್ರವಾಸವನ್ನು ಯಶಸ್ವಿಯಾಗಿ ನಡೆಸುತ್ತಿದೆ.
ಬಳ್ಳಾರಿಯಿಂದ ನೇರವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಯುವರತ್ನ ತಂಡವನ್ನು ಕೋಟೆನಾಡಿನ ಅಭಿಮಾನಿಗಳು ಭವ್ಯವಾಗಿ ಸ್ವಾಗತಿಸಿದರು. ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನಕ್ಕೆ ಅಪ್ಪು ಟೀಂ ಎಂಟ್ರಿ ಆಗುತ್ತಿದ್ದಂತೆ ಎಂಟು ಜೆಸಿಬಿಗಳಲ್ಲಿ ಹೂಮಳೆಗೆರೆದರು.
ಅಭಿಮಾನಿಗಳತ್ತ ಕೈ ಬಿಸುತ್ತಾ ಸುಡು ಬಿಸಿಲಲ್ಲೇ ತೆರೆದ ವೇದಿಕೆ ಏರಿದ ಪುನೀತ್ ರಾಜ್‌ಕುಮಾರ್ ತಂಡಕ್ಕೆ ಬೃಹತ್ ಸೇಬಿನ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು.
ಚಿತ್ರದುರ್ಗ ❤️#Yuvasambhrama #Yuvarathnaa #PowerInU pic.twitter.com/54qwTjZkjV
— Puneeth Rajkumar (@PuneethRajkumar) March 22, 2021
ಮೈದಾನಕ್ಕೆ ಸಾಗರದಂತೆ ನುಗ್ಗಿದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಈ ವೇಳೆ ಮಾತನಾಡಿದ ನಟ ಪುನೀತ್ ರಾಜ್‌ಕುಮಾರ್, ಯುವರತ್ನ ಚಿತ್ರ ಎ. 1 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಕಲಬುರ್ಗಿ, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿಯಲ್ಲಿ ಪ್ರಚಾರದ ವೇಳೆ ತೆರಳಿದಾಗ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಅದರಂತೆ ನನ್ನ ನೆಚ್ಚಿನ ಚಿತ್ರದುರ್ಗದಲ್ಲೂ ಸಹ ಉತ್ತಮ ಸ್ಪಂದನೆ ದೊರೆತಿದೆ. ಜನರು ನನ್ನನ್ನು ತುಂಬಾ ಪ್ರೀತಿ ಮಾಡುತ್ತಾರೆ, ಅವರಿಗೆ ಚಿರರುಣಿಯಾಗಿರುವೆ. ಕೋವಿಡ್ ನಿಯಮ ಪಾಲಿಸಿ ಚಿತ್ರವನ್ನು ವೀಕ್ಷಿಸಬೇಕು ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟರಾದ ಧನಂಜಯ ಹಾಗೂ ರವಿಶಂಕರ್ ಗೌಡ ಅವರು ಜೊತೆಯಲ್ಲಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post