ಕಲ್ಪ ಮೀಡಿಯಾ ಹೌಸ್
ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ನಿನ್ನ ಸನಿಹಕೆ ಚಿತ್ರ ಸೆನ್ಸಾರ್ ಮಂಡಳಿಯ ಪ್ರಶಂಸೆಯೊಂದಿಗೆ ಯು/ಎ ಸರ್ಟಿಫಿಕೆಟ್ ಪಡೆದುಕೊಂಡಿದೆ.
ದೊಡ್ಮನೆಯ ಕುಡಿ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನಿನ್ನ ಸನಿಹಕೆ ಯೂಥ್ ಫುಲ್ ಲವ್ ಸ್ಟೋರಿ ಹೊಂದಿರುವ ಚಿತ್ರವನ್ನು ನಟ ಸೂರಜ್ ಗೌಡ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿದ್ದಾರೆ.

ಸೆನ್ಸಾರ್ ಮಂಡಳಿಯ ಸದಸ್ಯರು ಈ ಚಿತ್ರತಂಡಕ್ಕೆ ಹಾಗೂ ನಿನ್ನ ಸನಿಹಕೆ ಸಿನಿಮಾ ಬಗ್ಗೆ ವಿಶೇಷವಾದ ಪ್ರಶಂಸೆಯನ್ನು ನೀಡಿದ್ದು, ಸ್ಯಾಂಡಲ್ ವುಡ್ ಅಂಗಳದಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ ಎನ್ನಲಾಗಿದೆ.

ಇತೀಚೆಗಷ್ಟೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಮಜಾಟಾಕೀಸ್ ಕಾರ್ಯಕ್ರಮದಲ್ಲಿ ನಿನ್ನ ಸನಿಹಕೆ ತಂಡ ಪಾಲ್ಗೊಂಡಿತ್ತು. ಸೃಜನ್ ಲೋಕೇಶ್ ನೇತೃತ್ವದ ಈ ಕಾರ್ಯಕ್ರಮದಲ್ಲಿ ಧನ್ಯಾ ರಾಮ್ ಕುಮಾರ್ ಅವರಿಗೊಂದು ಸರ್ಪೈಸ್ ಗಿಫ್ಟ್ ಸಿಕ್ಕಿದೆ. ತಮ್ಮ ಅಕ್ಕನ ಮಗಳ ಬಾಲ್ಯದ ದಿನಗಳನ್ನು ಹಾಗೂ ಅವರ ಪ್ರತಿಭೆಯ ಬಗ್ಗೆ ವಿಶೇಷವಾದ ಮಾತುಗಳನ್ನು ಹೇಳುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧನ್ಯಾರವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಪವರ್ ಸ್ಟಾರ್ ಜೊತೆಗೆ ಡಾ. ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ತಮ್ಮ ಸಹೋದರಿಯ ಮಗಳ ಈ ಪ್ರಯತ್ನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಒಂದಷ್ಟು ಸಲಹೆಗಳನ್ನ ಕೊಟ್ಟು, ಧನ್ಯಾರಿಗೆ ಹಾಗೂ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಧನ್ಯಾರ ತಂದೆ ರಾಮ್ ಕುಮಾರ್ ಇದೇ ಮೊದಲ ಬಾರಿಗೆ ಮಗಳ ಬಗ್ಗೆ ಹಾಗೂ ಅವರ ಚೊಚ್ಚಲ ಚಿತ್ರದ ಬಗ್ಗೆ ಭಾವುಕವಾಗಿ ಹೆಮ್ಮೆಯಿಂದ ಮಾತನಾಡಿದ್ದಾರೆ. ನಿನ್ನ ಸನಿಹಕೆ ಚಿತ್ರದ ಹಾಡುಗಳನ್ನ ನೋಡಿ, ಈ ಸಿನಿಮಾ ತುಂಬಾ ದೊಡ್ಡ ಯಶಸ್ಸು ಕಾಣುವ ಎಲ್ಲಾ ಲಕ್ಷಣಗಳು ಕಾಣಸುತ್ತಿದೆ ಎಂದು ಹೇಳುತ್ತಾ.. ತಮ್ಮ ಮುದ್ದಿನ ಮಗಳ ಚಿತ್ರರಂಗ ಪ್ರವೇಶವನ್ನು ಸಂತಸದಿಂದ ಸ್ವಾಗತಿಸಿದ್ದಾರೆ.
ಏಪ್ರಿಲ್ 16ರಂದು ತೆರೆಗೆ ಬರ್ತಿದೆ ನಿನ್ನ ಸನಿಹಕೆ.
ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿರುವ ಈ ಯೂಥ್ ಫುಲ್ ಎಂಟ್ರಟೈನರ್ ಚಿತ್ರ ನಿನ್ನ ಸನಿಹಕೆ ಇದೇ ಏಪ್ರಿಲ್ 16ರಂದು ವಿಶ್ವದಾದ್ಯಂತ ಕನ್ನಡದಲ್ಲಿ ಮಾತ್ರ ದೊಡ್ಡಮಟ್ಟದಲ್ಲಿ ಬಿಡುಗಡೆ ಆಗಲಿದ್ದು, ಶ್ರೀಘ್ರದಲ್ಲೇ ಟ್ರೈಲರ್ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post