ಬೆಂಗಳೂರು: ಸೆ:22: ಕೊನೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಒತ್ತುವರಿಗೆ ಅಂತಿಮ ನಿಧರ್ಾರಕ್ಕೆ ಬರಲಾಗಿದೆ. ಒತ್ತುವರಿ ಸಂಬಂಧ ಜಿಲ್ಲಾಡಳಿತ ಕೊನೆಗೂ ವಶಕ್ಕೆ ತೆಗೆದುಕೊಳ್ಳುವ ತೀಮರ್ಾನದ ಮೂಲಕ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿ ಕಾಯರ್ಾಚರಣೆ ಆರಂಭವಾದ ನಂತರದಲ್ಲಿ ಆಗುತ್ತಿರುವ ಹೈಪ್ರೊಪೈಲ್ ಲೇಔಟ್ ಎಂದೇ ಬಿಂಬಿಸಲಾಗಿರುವ ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ನಲ್ಲಿರುವ ನಟ ದರ್ಶನ್ ನಿವಾಸ ಮತ್ತು ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ಎಸ್.ಎಸ್.ಆಸ್ಪತ್ರೆ ಸೇರಿದಂತೆ ಒಟ್ಟು 194 ಮನೆಗಳು ಜಿಲ್ಲಾಡಳಿತ ವಶಕ್ಕೆ ಪಡೆಯುತ್ತಿದೆ.
ದೊಡ್ಡವರಿಗೆ ಒಂದು ನ್ಯಾಯ, ನಮಗೊಂದು ನ್ಯಾಯವೇ ಎಂದು ಒತ್ತುವರಿ ಕಾಯರ್ಾಚರಣೆಯಲ್ಲಿ ಮನೆ ಕಳೆದುಕೊಂಡು ಪ್ರಶ್ನಿಸಿದ್ದವರಿಗೆ ಈ ಸುದ್ದಿ ನಿಜವಾಗಿಯೂ ಅಚ್ಚರಿಯನ್ನು ಮೂಡಿಸುತ್ತದೆ.
ಐಡಿಯಲ್ ಹೋಮ್ಸ್ನಲ್ಲಿರುವ ಏಳು ಎಕರೆ 31 ಗುಂಟೆ ಜಾಗ ಒತ್ತುವರಿ ಪ್ರದೇಶ ಎಂದು ಈಗಾಗಲೇ ಗುರುತಿಸಲಾಗಿದೆ. ಆ ಬಡಾವಣೆ ಜಾಗ ಬಿ ಖರಾಬು ಭೂಮಿ ಎಂದು ಖಾತ್ರಿಯಾಗಿದೆ. ಹಾಗಾಗಿ ಅಲ್ಲಿನ ಕಟ್ಟಡಗಳನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ವಿ.ಶಂಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಿ ಖರಾಬು ಭೂಮಿಯಲ್ಲಿ ಯಾವುದೇ ನಿಮರ್ಾಣ ಕಾಮಗಾರಿಯು ಕೈಗೊಳ್ಳುವಂತಿಲ್ಲ. ಈ ಪ್ರಕರಣವನ್ನು ದಾಖಲಿಸಿ ಒತ್ತುವರಿ ತೆರವು ಮಾಡುತ್ತೇವೆ ಎಂದ ಅವರು, ಭೂ ದಾಖಲೆಗಳ ಇಲಾಖೆಯ ಜಂಟಿ ಇಲಾಖೆ ನಿದರ್ೇಶಕ ಇತ್ತೀಚೆಗೆ ಮಾಡಿದ ಸವರ್ೆ ವರದಿಯನ್ನು ಈಗಾಗಲೇ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ಗೆ ರವಾನಿಸಲಾಗಿದೆ ಎಂದು ತಿಳಿಸಿದರು.
ಇಲ್ಲಿಯವರೆಗೂ ಒತ್ತುವರಿಯಾಗಿರುವ ಐಡಿಯಲ್ ಹೋಮ್ಸ್ ಕುರಿತು ಬಿಬಿಎಂಪಿಯಿಂದ ಯಾವುದೇ ದಾಖಲೆ ಬಂದಿಲ್ಲ. ಆದರೆ ಕಂದಾಯ ಇಲಾಖೆ ದಾಖಲೆ ಪ್ರಕಾರ ಒತ್ತುವರಿಯಾಗಿರುವುದು ಖಚಿತವಾಗಿದೆ. ಹಾಗಾಗಿ ಕಾನೂನು ಬದ್ಧವಾಗಿ 7 ಎಕರೆ 31 ಗುಂಟೆ ಜಾಗದಲ್ಲಿರುವ ಎಲ್ಲ ಕಟ್ಟಡಗಳನ್ನು ವಶಪಡಿಸಿಕೊಂಡು ಒತ್ತುವರಿ ಮಾಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಶಂಕರ್ ತಿಳಿಸಿದ್ದಾರೆ.















