ಬೆಂಗಳೂರು: ಸೆ:22: ಕೆಜೆ ಜಾರ್ಜ್ ಮತ್ತೆ ಸಂಪುಟ ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ಬಗ್ಗೆ ಹೈಕಮಾಂಡ್ ಕೂಡ ಗ್ರೀನ್ ಸಿಗ್ನಲ್ ನಿಡಿದ್ದು, ಕಾವೇರಿ ವಿಚಾರ ಮುಗಿದ ಕೂಡಲೇ ಜಾರ್ಜ್ ಸಂಪುಟಕ್ಕೆ ಮರುಸೇರ್ಪಡೆಯಾಗಲಿದ್ದಾರೆ.
ಮುಂದಿನ ವಾರದಲ್ಲಿ ಪ್ರಮಾಣ ವಚನವೂ ಸ್ವೀಕರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಗಣಪತಿ ಪ್ರಕರಣದಲ್ಲಿ ಕ್ಲೀನ್ ಚೀಟ್ ದೊರೆತ ಹಿನ್ನಲೆಯಲ್ಲಿ ಈ ತೀಮರ್ಾನ ಕೈಗೊಳ್ಳಲಾಗಿದೆ.
ಇನ್ನು ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆಜೆ ಜಾರ್ಜ್ ಮೊದಲ ಆರೋಪಿಯಾಗಿದ್ದರು. ನಾಳೆ ಅಧಿವೇಶನ ಬಳಿಕ ಸೇರ್ಪಡೆ ದಿನ ನಿಗದಿಯಾಗಲಿದೆ.
Discussion about this post