ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, 5 ಕಡೆ ನಾಮಪತ್ರ ಸಲ್ಲಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಮೊದಲ ದಿನ 6 ನಾಮಪತ್ರಗಳು ಸಲ್ಲಿಕೆಯಾಗಿವೆ ಎನ್ನಲಾಗಿದೆ.
ವಾರ್ಡ್ ನಂ. 1, 2, 3, 4, 33, 34 ಮತ್ತು 35ರ ವ್ಯಾಪ್ತಿಯಲ್ಲಿ 2 ನಾಮಪತ್ರಗಳು, ವಾರ್ಡ್ ನಂ. 5, 6, 7, 8, 9, 10 ಮತ್ತು 11ರ ವ್ಯಾಪ್ತಿಯಲ್ಲಿ 1 ನಾಮಪತ್ರ, ವಾರ್ಡ್ ನಂ. 12, 13, 14, 15, 16, 17 ಮತ್ತು 18ರ ವ್ಯಾಪ್ತಿಯಲ್ಲಿ ಒಬ್ಬ ಅಭ್ಯರ್ಥಿಯಿಂದ 2 ನಾಮಪತ್ರ ಹಾಗೂ ವಾರ್ಡ್ ನಂ.26, 27, 28, 29, 30, 31 ಮತ್ತು 32ರ ವ್ಯಾಪ್ತಿಯಲ್ಲಿ 1 ನಾಮಪತ್ರ ಸಲ್ಲಿಕೆಯಾಗಿದ್ದು, ವಾರ್ಡ್ ನಂ. 19, 20, 21, 22, 23, 24 ಮತ್ತು 25ರ ವ್ಯಾಪ್ತಿಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post