Read - < 1 minute
ಚೆನ್ನೈ: ಕಾವೇರಿ ವಿವಾದಕ್ಕೆ ಸಂಬಂಸಿ ತಮಿಳ್ನಾಡು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕೆಂಬ ಡಿಎಂಕೆ ನಾಯಕ ಎಂ.ಕರುಣಾನಿದಿ ಬೇಡಿಕೆಗೆ ಆಳುವ ಎಡಿಎಂಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಅಂತಾರಾಜ್ಯ ವಿವಾದದಲ್ಲಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಪದೆ ಪದೆ ಗೆಲುವು ಲಭಿಸುತ್ತಿರುವುದರಿಂದ ಕರುಣಾನಿಗೆ ಸಹಿಸಲಾಗುತ್ತಿಲ್ಲ. ಅವರು ಇಂತಹ ದ್ರೋಹಚಿಂತನೆಯನ್ನು ಬಿಡಬೇಕು ಎಂದು ಕಿಡಿಕಾರಿದೆ.
ಇಂತಹ ಬೇಡಿಕೆಯನ್ನಿಡುವ ಮೂಲಕ ಕರುಣಾನಿಯವರು ತನ್ನ ದ್ರೋಹಚಿಂತನೆಯನ್ನು ಮುಂದೂಡಲು ಯತ್ನಿಸುತ್ತಿದ್ದಾರೆ ಎಂದು ಎಡಿಎಂಕೆ ಮುಖವಾಣಿ `ನಮಧು ಎಂಜಿಆರ್’ನಲ್ಲಿ ಬರೆದ ಲೇಖನದಲ್ಲಿ ಕೆಂಡಕಾರಲಾಗಿದೆ.
ನಮ್ಮಮ್ಮ ಪದೆ ಪದೆ ಗೆಲುವು ಸಾಸುತ್ತಿರುವ (ಕಾವೇರಿ ವಿವಾದ) ಜೊತೆಗೆ ಈಗ ಸುಪ್ರೀಂಕೋರ್ಟಗೆ ಹೋಗಿರುವುದು ಕರ್ನಾಟಕಕ್ಕೆ ಕಿರಿಕಿರಿ ಉಂಟು ಮಾಡಿದೆ. ಕರುಣಾನಿದಿಯವರಿಗೂ ಇಂತಹುದೇ ಭಾವನೆ ಉಂಟಾಗಿದೆ ಎಂದು ಅದರಲ್ಲಿ ಟೀಕಿಸಲಾಗಿದೆ. ಜಯಲಲಿತಾರ ಎಡಿಎಂಕೆ ಸರಕಾರವು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿ 2007ರ ಕಾವೇರಿ ನ್ಯಾಯಮಂಡಳಿಯ ಆದೇಶದ ಪಾಲನೆಗೆ ಕರ್ನಾಟಕಕ್ಕೆ ನಿರ್ಧೇಶನ ನೀಡಬೇಕೆಂದು ಕೇಳಿತ್ತು. ಅಲ್ಲದೆ ಕಾವೇರಿಯಿಂದ ತಮಿಳ್ನಾಡಿಗೆ ನೀರು ಬಿಡುವಂತೆ ಆದೇಶಿಸಲೂ ಕೋರಿತ್ತು. ಇದರಂತೆ ಸುಪ್ರೀಂಕೋರ್ಟ್ ಎರಡರಲ್ಲೂ ತಮಿಳ್ನಾಡಿಗೆ ಪೂರಕವಾಗಿ ತೀರ್ಪು ನೀಡಿತ್ತು.
ಆದರೆ ಕರುಣಾನಿಯವರು ಈ ಸಂದರ್ಭ ವಿಶೇಷ ಅವೇಶನ ಅಥವಾ ಸರ್ವಪಕ್ಷ ಸಭೆ ಕರೆಯಲು ಬೇಡಿಕೆ ಮುಂದಿಟ್ಟಿರುವುದು ಅರ್ಥಹೀನವಾಗಿದೆ. ಕಾವೇರಿ ನೀರು ಹಂಚಿಕೆಯಲ್ಲಿ ಜಯಲಲಿತಾ ಅವರದು ಅತ್ಯಂತ ಬುದ್ಧಿವಂತ ನಡೆಯಾಗಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.
Discussion about this post