ಕಲ್ಪ ಮೀಡಿಯಾ ಹೌಸ್
ಸೊರಬ: ಚಾಲಕನ ಅಜಾಗರೂಕತೆ ಚಾಲನೆಯಿಂದ ಪಾದಾಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಅಂಕರವಳ್ಳಿಯಲ್ಲಿ ಇಂದು ನಡೆದಿದೆ.
ಅಂಕರವಳ್ಳಿ ಗ್ರಾಮದ ಕೆ. ಹನೀಫ್ ಸಾಬ್ (55) ಮೃತ ದುರ್ಧೈವಿ. ಬೆಲ್ಲದ ಸಾಗಾಣಿಕೆಯ ಖಾಲಿ ಟ್ಯಾಂಕರ್ ಚಂದ್ರಗುತ್ತಿಯಿಂದ ಸೊರಬ ಮಾರ್ಗವಾಗಿ ಆಗಮಿಸುವ ವೇಳೆ ದುರ್ಘಟನೆ ಜರುಗಿದೆ.
ಲಾರಿಯು ಪಾದಾಚಾರಿಗೆ ಡಿಕ್ಕಿ ಹೊಡೆದ ತರುವಾಯ ಮತ್ತೆ ಎರಡು ಮರಗಳಿಗೆ ಡಿಕ್ಕಿ ಹೊಡೆದಿದ್ದು, ಒಂದು ಮರ ಧರೆಗೆ ಉರುಳಿರುವುದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.
ಗಾಯಾಳುಗಳಾದ ಲಾರಿ ಚಾಲಕ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಿರಣ ಮತ್ತು ಚಂದ್ರಗುತ್ತಿಯ ಮಹೇಶ್ ಎಂಬುವವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















