ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ನಗರಸಭೆ ಸದಸ್ಯ ರಾಮಕೃಷ್ಣೆ ಗೌಡರು (ಕ್ಯಾಂಟೀನ್ ಗೌಡರು, ತಾಲೂಕ ಪಂಚಾಯತಿ) ನಿಧನರಾಗಿದ್ದು, ಶಾಸಕ ಬಿ.ಕೆ. ಸಂಗಮೇಶ್ವರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಹನುಮಂತನಗರ ನಿವಾಸಿಯಾಗಿದ್ದ ಇವರು ಎಂಪಿಎಂ ಕಾರ್ಮಿಕರಿಗೆ ಚಿರಪರಿಚಿತರು. 1980ರ ಕಾರ್ಖಾನೆಯ ಲಾಕ್‌ಔಟ್ ಸಮಯದಲ್ಲಿ ಕಾರ್ಮಿಕರ ವಿಷಯದಲ್ಲಿ ಅತಿ ಹೆಚ್ಚು ಸಹಕಾರ ನೀಡಿದ್ದರು.
ಮೃತರ ನಿಧನದಿಂದ ತಾಲೂಕಿಗೆ ತುಂಬಲಾರದ ನಷ್ಟವಾಗಿದ್ದು, ನಮ್ಮ ನೌಕರರ ಸಂಘವು ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post