Read - < 1 minute
ನವದೆಹಲಿ: ಸೆ:26: ಕಾಶ್ಮೀರದ ಉರಿ ವಲಯದಲ್ಲಿ ನಡೆದ ಭಯೋತ್ಪಾದಕರ ದಾಳಿ ಸಂಬಂಧ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಮುಂದಾಗಿರುವಾಗಲೇ ಪಾಕ್ನೊಂದಿಗಿನ ಸಿಂಧೂ ಜಲ ಒಪ್ಪಂದದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಸಿಂಧೂನದಿ ನೀರು ಹಂಚಿಕೆ ಒಪ್ಪಂದ ಮರುಪರಿಶೀಲನೆಯ ಸಾಧಕ-ಬಾಧಕಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿ ಮಹತ್ವದ ಚರ್ಚೆ ನಡೆಸಿರುವ ಬೆನ್ನಲ್ಲೇ ಸರ್ವೋಚ್ಚ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಲಾಗಿದೆ.
ಅತ್ಯಂತ ಉದಾರ ಮನೋಭಾವದಿಂದ ಕೈಗೊಂಡಿರುವ ಯಶಸ್ವಿ ಒಪ್ಪಂದ ಎಂದೇ ಪ್ರಶಂಸೆಗೆ ಒಳಗಾಗಿರುವ ಸಿಂಧೂ ನದಿ ನೀರು ಹಂಚಿಕೆಗೆ ಈಗ ಕರಿ ನೆರಳು ಆವರಿಸಿದ್ದು, ಪಾಕಿಸ್ತಾನದ ಮೇಲೆ ಕರಿನೆರಳು ಆವರಿಸಿದ್ದು, ಪಾಕಿಸ್ತಾನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ.
Discussion about this post