ಕಲ್ಪ ಮೀಡಿಯಾ ಹೌಸ್
ಕುಂದಾಪುರ: ಸದಾ ಕಾರ್ಯ ನಿರ್ವಹಿಸುವ ಮೆಸ್ಕಾಂ ಸಿಬ್ಬಂದಿಗಳೊಂದಿಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಸಭೆ ನಡೆಸಿದರು.

ತಾಲೂಕು ಪಂಚಾಯತ್ ಕಛೇರಿಯಲ್ಲಿ ನಡೆದ ಈ ಸಭೆಯಲ್ಲಿ, ಮಳೆಗಾಲದಲ್ಲಿ ಮೆಸ್ಕಾಂ ಸಿಬ್ಬಂದಿಗಳಿಗೆ ಉಂಟಾಗುವ ಸಮಸ್ಯೆಗಳನ್ನು ಬಗ್ಗೆ ಮಾಹಿತಿ ಪಡೆಯಲಾಯಿತು. ಹಾಗೂ ಕೊರೋನ, ಲಾಕ್‌ಡೌನ್ ನಡುವೆಯೂ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದರು.
ಕೊರೋನ ಹಿನ್ನೆಲೆ ಮಕ್ಕಳಿಗೆ ಆನ್‌ಲೈನ್ ಕ್ಲಾಸ್, ಉದ್ಯೋಗಸ್ಥರಿಗೆ ಮನೆಯಲ್ಲಿಂದಲೇ ಕೆಲಸ ಮಾರುವ ಪರಿಸ್ಥಿತಿ ಇರುವುದರಿಂದ ವಿದ್ಯುತ್ ವ್ಯತ್ಯಯ ಆಗದಂತೆ ಎಚ್ಚರವಹಿಸುವಂತೆ ಮೆಸ್ಕಾಂ ಸಿಬ್ಬಂದಿಗಳಲ್ಲಿ ಶಾಸಕರು ಮನವಿ ಮಾಡಿದರು.
ಆಕ್ಸಿಮೀಟರ್ ಹಸ್ತಾಂತರ:
ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮೂಲಕ 15 ಲಕ್ಷ ರೂ.ಗಳ ಸುಮಾರು 1032 ಆಕ್ಸಿಮೀಟರ್‌ಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.

ಮುಖ್ಯವಾಗಿ ಕೊರೋನ ಸೋಂಕಿತರಾಗಿ ಹೋಮ್ ಐಸೋಲೇಷನ್‌ನಲ್ಲಿರುವವರ ಉಸಿರಾಟವನ್ನು ಚೆಕ್ ಮಾಡಲು ಇದನ್ನು ಆಶಾ ಕಾರ್ಯಕರ್ತರು ಉಪಯೋಗಿಸುತ್ತಿದ್ದು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಇದನ್ನು ಹಂಚಿಕೆ ಮಾಡಲಾಗುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















