ಕಲ್ಪ ಮೀಡಿಯಾ ಹೌಸ್
ಸೊರಬ: ಕೋವಿಡ್ ವಿಶೇಷ * ಭತ್ಯೆಯನ್ನು ನೀಡುವಂತೆ ಆಗ್ರಹಿಸಿ ಈ ಕರ್ನಾಟಕ ರಾಜ್ಯ ಆಯುಷ್ ಈ ಇಲಾಖೆ ವೈದ್ಯರು ತಾಲೂಕಿನಲ್ಲಿ ಇಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವ ಮೂಲಕ ಕರ್ತವ್ಯ ನಿರ್ವಹಿಸಿದರು.
ಕಳೆದ ಎರಡು ವರ್ಷಗಳಿಂದ ವಿಶೇಷ ಭತ್ಯೆ ಪಡೆಯದ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಭತ್ಯೆ ಸೌಲಭ್ಯ ನೀಡದಿರುವುದಕ್ಕೆ ಆಯುಷ್ ವೈದ್ಯಾಧಿಕಾರಿಗಳು ರಾಜ್ಯಾದ್ಯಂತ ಪ್ರತಿಭಟನೆ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿಯೂ ಪ್ರತಿಭಟನೆ ನಡೆಸಲಾಯಿತು.
ಕೋವಿಡ್ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸರ್ಕಾರ ನೀಡುವ ವಿಶೇಷ ಭತ್ಯೆಯಲ್ಲಿ ತಾರತಮ್ಯ ನೀತಿ ಎಸಗಲಾಗುತ್ತಿದೆ. ಪ್ರಸ್ತುತ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಲ್ಲಿ ಆಯುಷ್ ವೈದ್ಯರು ಮಂಚೂಣಿಯಲ್ಲಿದ್ದಾರೆ. ಆದರೆ ಈ ವೈದ್ಯರಿಗೆ ಎರಡು ವರ್ಷದಿಂದ ಕೋವಿಡ್ ಕರ್ತವ್ಯದ ಯಾವುದೇ ವಿಶೇಷ ಭತ್ಯೆ ಸಿಗುತ್ತಿಲ್ಲ. ಈ ಬಗ್ಗೆ ಆಯುಷ್ ವೈದ್ಯಾಧಿಕಾರಿಗಳ ಸಂಘವು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈಗಾಗಲೆ ಎಂಬಿಬಿಎಸ್ ಮತ್ತು ಬಿಡಿಎಸ್ ವೈದ್ಯಾಧಿಕಾರಿಗಳಿಗೆ ನೀಡಿರುವ ವಿಶೇಷ ಭತ್ಯೆಯನ್ನು ಅವರ ಸೇವಾವಧಿಗೆ ಅನುಗುಣವಾಗಿ 2020 ಸೆಪ್ಟೆಂಬರ್ 01 ರಿಂದ ಆದೇಶ ಹೊರಡಿಸಲಾಗಿದೆ. ಆದರೆ ಈ ಆದೇಶದಲ್ಲಿ ಆಯುಷ್ ವೈದ್ಯರನ್ನು ಹೊರತು ಪಡಿಸಿ ಎಂದು ನಮೂದಿಸಿರುವುದು ಎಲ್ಲಾ ಆಯುಷ್ ವೈದ್ಯರ ಅಸಮಧಾನಕ್ಕೆ ಕಾರಣವಾಗಿದೆ. ಎಲ್ಲಾ ಆಯುಷ್ ವೈದ್ಯಾಧಿಕಾರಿಗಳು ಕೋವಿಡ್ ಸೆಂಟರ್, ಟ್ರೈಯಾಜ್, ಹೋಮ್ ಐಸೋಲೇಷನ್ ಕೋವಿಡ್ ಆಸ್ಪತ್ರೆಗಳಲ್ಲಿ ಹಗಲು ರಾತ್ರಿ ಪಾಳೆಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲೋಪತಿ ವೈದ್ಯರಿಗಿಂತಲೂ ಹೆಚ್ಚಿನ ಕಾರ್ಯ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವ ಆಯುಷ್ ವೈದ್ಯರಿಗೆ ಮಾತ್ರ ಸರ್ಕಾರದಿಂದ ಯಾವುದೇ ವಿಶೇಷ ಭತ್ಯೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಜೂನ್ 7ರವರೆಗೂ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಆಯುಷ್ ವೈದ್ಯರಾದ ಡಾ. ಎಂ.ಕೆ. ಮಹೇಶ್, ಡಾ. ನದಾಫ್, ಡಾ. .ಸಿ, ಅರುಣ್ ಕುಮಾರ್, ಡಾ. ಜಿ.ಸಿ. ಕಲ್ಲೇಶ್, ಡಾ. ಸುಜಾತ ಬಂಟನೂರು, ಡಾ. ಸಿ.ವಿ. ಶ್ರೀನಿವಾಸನ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post