ಕಲ್ಪ ಮೀಡಿಯಾ ಹೌಸ್
ಸಾಗರ: ನಗರಸಭೆ ವತಿಯಿಂದ ಗಾಂಧಿ ಮೈದಾನದಲ್ಲಿ ಕೊರೋನಾ ಸಂಕಷ್ಟದಲ್ಲಿರುವವರಿಗೆ ಶಾಸಕ ಹಾಲಪ್ಪ ಆಹಾರದ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಸಿವು ಎಲ್ಲರಿಗೂ ಒಂದೆ. ದಾನಿಗಳು ಸಹ ಈ ಸಮಯದಲ್ಲಿ ಮುಂದೆ ಬಂದು ಬಡವರ ಕಷ್ಟಕ್ಕೆ ನೆರವಾಗಬೇಕು ಎಂದರು.
ಬಡವರು, ಶ್ರಮಿಕರ ನಡುವೆಯೇ ನಾನು ಬೆಳೆದು ಬಂದವನು. ಆಹಾರ ಇಂದಿನ ಅಗತ್ಯ. ಅದಕ್ಕೆ ಸಾಗರ ನಗರಸಭೆ ಜಿಲ್ಲೆಯಲ್ಲೇ ಮೊದಲ ಬಾರಿಗೆ ಹಣ ಮೀಸಲಿಟ್ಟು ಬಡ ಮತ್ತು ಮಧ್ಯಮ ವರ್ಗದವರ ಹಿತ ಕಾಪಾಡುವತ್ತ ಗಮನ ಹರಿಸಿದೆ. ಅನ್ನ ನೀಡುವುದು ಮಹತ್ಕಾರ್ಯದ ಕೆಲಸ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನಗರಸಭೆ ನೆರವಾಗಿದೆ ಎಂದರು.
ನಗರಸಭಾ ಸದಸ್ಯ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್. ಗಣೇಶ್ ಪ್ರಸಾದ್ ಮಾತನಾಡಿ, ಕೊರೋನಾದ ಈ ಸಂಧರ್ಭದಲ್ಲಿ ಬಡ ಮತ್ತು ಮಧ್ಯಮ ವರ್ಗ ಸಂಕಷ್ಟದಲ್ಲಿದೆ. ಕೂಲಿಕಾರರು ಕೆಲಸವಿಲ್ಲದೇ, ಆದಾಯವಿಲ್ಲದೇ ಜೀವನ ನಡೆಸುವುದು ಕಷ್ಡವಾಗಿದೆ. ಆದರೆ ಶಾಸಕ ಹಾಲಪ್ಪ ಸಾಗರ-ಹೊಸನಗರ ಕ್ಷೇತ್ರದ ವಿಧಾನ ಸಭಾ ಪ್ರತಿನಿಧಿಯಾಗಿ ನಗರಸಭೆಗೆ ಕೂಡಲೇ ಅನುದಾನವನ್ನು ತಂದು ಊರಿನ ಬಡವರಿಗೆ ಆಹಾರ ನೀಡುವ ಈ ಮಾನವೀಯ ನೆಲೆಯ ಕೆಲಸಕ್ಕೆ ಮುಂದಾಗಿರುವುದು ಅವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿ ಎಂದು ಹೇಳಿದರು.
ನಗರಸಭಾ ಸದಸ್ಯೆ ಭಾವನಾ ಸಂತೋಷ್ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಜನರ ಬಗ್ಗೆ ನಗರಸಭೆ ಮತ್ತು ಶಾಸಕರು ಕಾಳಜಿ ವಹಿಸಿರುವುದು ಸಂತೋಷದ ವಿಷಯ. ದೇಶವೇ ಇಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸಾಗರವೂ ಇದಕ್ಕೆ ಹೊರತಲ್ಲ. ಜನರ ಜೀವನ ಸಂಕಷ್ಟದಲ್ಲಿದೆ. ಆದರೆ ನಗರಸಭೆ ಅವರ ಕಷ್ಡಕ್ಕೆ ಸ್ವಲ್ಪ ಮಟ್ಟಿನ ಆಸರೆಯಾಗಿದೆ ಹೇಳಿದರು.
ನಗರಸಭಾ ಸದಸ್ಯೆ ಮತ್ತು ಕಾಂಗ್ರೆಸ್ ಮಹಿಳಾ ನಗರ ಅಧ್ಯಕ್ಷೆ ಮಧುಮಾಲತಿ ಕಲ್ಲಪ್ಪ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಕೆಲಸವಿಲ್ಲದ ಸಮಯದಲ್ಲಿ ಹಸಿವಿನಿಂದ ಇರಬಾರದೆಂಬ ಕಾರಣಕ್ಕೆ ನಗರಸಭೆ ಮತ್ತು ಶಾಸಕರು ಒಂದಿಷ್ಟು ಸಹಾಯ ಮಾಡುತ್ತಿದ್ದಾರೆ. ನಗರಸಭೆ ವತಿಯಿಂದ ಇಂದು ಆಹಾರದ ಕಿಟ್ ನೀಡುತ್ತಿರುವುದು ಉತ್ತಮ ಕೆಲಸ. ಕೆಲಸವಿಲ್ಲದೇ ಮನೆಯಲ್ಲಿ ಜೀವನ ನಡೆಸುವುದು ಕಷ್ಡವಾದಾಗ ಆಹಾರ ಕಿಟ್ ನೀಡುವ ಕಾರ್ಯ ಹೆಚ್ಚು ಮಹತ್ವ ಪಡೆಯುತ್ತದೆ. ಹಾಗೆಯೇ ಸಾಗರದ ಶಾಸಕ ಹಾಲಪ್ಪ ಅವರು ತಾಲೂಕಿನ ಜನರ ಹಿತವನ್ನು ಕಾಪಾಡುವತ್ತ ಹೆಜ್ಜೆ ಹಾಕಿದ್ದಾರೆ ಎಂದು ಹೇಳಿದರು.
ನಗರಸಭಾ ಸದಸ್ಯ ಬಿ.ಹೆಚ್. ಲಿಂಗರಾಜ್ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದವರ ಬದುಕು ಹಸನಾಗಿಸಬೇಕಿದೆ. ಕೊರೋನಾ ಕಷ್ಟಕಾಲದಲ್ಲಿ ಎಲ್ಲರ ನೆರವಿಗೆ ನಗರಾಡಳಿತ ಮುಂದಾಗಿದೆ. ನಗರಸಭೆ ವತಿಯಿಂದ ಆಹಾರದ ಕಿಟ್ ನೀಡುತ್ತಿರುವುದು ಉತ್ತಮ ಕೆಲಸ ಅದು ಪ್ರಚಾರಕ್ಕಲ್ಲ. ಬದಲಿಗೆ ಆಹಾರ ಇಲ್ಲದೇ ಯಾರೂ ಉಪವಾಸವಿರಬಾರದು ಎಂಬ ಕಾರಣಕ್ಕೆ. ಈ ಸಮಯದಲ್ಲಿ ಕೆಲಸವಿಲ್ಲದೇ ಮನೆಯಲ್ಲಿ ಜೀವನ ನಡೆಸುವುದು ಕಷ್ಡವಾದಾಗ ಆಹಾರ ಕಿಟ್ ನೀಡುವ ಕಾರ್ಯ ಹೆಚ್ಚು ಮಹತ್ವ ಪಡೆಯುತ್ತದೆ. ಹಾಗೇಯೆ ಸಾಗರದ ಶಾಸಕ ಹಾಲಪ್ಪ ಊರಿನ ಜನರ ಹಿತವನ್ನು ಕಾಪಾಡುವತ್ತ ಹೆಜ್ಜೆ ಹಾಕಿದ್ದಾರೆ ಎಂದು ಹೇಳಿದರು.
ನಗರಸಭಾ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿಸಮಿತಿ ಅಧ್ಯಕ್ಷ ಡಿ. ತುಕಾರಾಮ, ಸುಧಾ, ಸರೋಜಾ ಭಂಡಾರಿ, ಅರವಿಂದ ರಾಯ್ಕರ್, ಪೌರಾಯುಕ್ತ ನಾಗಪ್ಪ, ನಾಮನಿರ್ದೇಶನ ಸದಸ್ಯ ಬಿ. ಪುರುಷೋತ್ತಮ, ರಾಜೇಂದ್ರ ಪೈ ಹಾರಾಡಿ, ದೀಪಕ್ ಮರೂರು, ಎಸ್.ಎಂ. ಬಾಷಾ ಸಾಬ್, ಸಯ್ಯದ್ ಜಾಕಿರ್ ಇನ್ನಿತರರು ವೇದಿಕೆಯಲ್ಲಿ ಹಾಜರಿದ್ದರು. ಸತೀಶ್ ಮೊಗವೀರ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕೋವಿಡ್‌ನಂತಹ ಮಹಾಮಾರಿ ರೋಗದಿಂದ ಲಾಕ್ ಡೌನ್ ಸಂದರ್ಭದಲ್ಲಿ ನಿರಂತರವಾಗಿ ಸಾಮಾಜಿಕ ಸೇವೆ ಗೈದ ಛಾಯಾಗ್ರಾಹಕ ಸತೀಶ್ (ಸತೀಶ್ ಸ್ಟುಡಿಯೋ), ಕೆ. ಅಶೋಕ್ ಕುಮಾರ್ (ನಿವೃತ್ತ ಜಲ ಸಂಪನ್ಮೂಲ) ಉದಯಕುಮಾರ್ ಕುಂಸಿ (ನಿವೃತ್ತ ಉಪಾದ್ಯಾಯರು) ಈ ಮೂವರಿಗೆ ಶಾಸಕ ಹಾಗೂ ನಗರಸಭೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post