ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೋವಿಡ್ ಮಹಾಮಾರಿ ಎಲ್ಲರನ್ನೂ ಕಾಡುತ್ತಿರುವ ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಕೈಗೊಂಡಿರುವ ಕಾರ್ಯ ಜಿಲ್ಲೆಗೇ ಮಾದರಿಯಾಗಿದೆ ಎಂದು ಶಾಸಕ ಸಂಗಮೇಶ್ವರ ಹೇಳಿದರು.
ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಹೊರತಂದಿರುವ ಉಚಿತ ಆರೋಗ್ಯ ಕಿಟ್’ನ್ನು ವಿತರಿಸಿ ಅವರು ಮಾತನಾಡಿದರು.
ನಾವು ಎಲ್ಲವನ್ನೂ ಸರ್ಕಾರವನ್ನೇ ಅವಲಂಭಿಸಲು ಸಾಧ್ಯವಿಲ್ಲ. ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಸಮಾಜಮುಖಿಯಾಗಿ ಪ್ರತಿಯೊಬ್ಬರೂ ಸ್ಪಂದಿಸಬೇಕು. ಪ್ರಮುಖವಾಗಿ ಆರೋಗ್ಯ ಕಾಪಾಡಿಕೊಳ್ಳಲು ಉಚಿತ ಆರೋಗ್ಯ ಕಿಟ್ ವಿತರಣೆ, ವೈದ್ಯಕೀಯ ಸಲಹೆ ಹಾಗೂ ಆಪ್ತ ಸಮಾಲೋಚನೆ ನಡೆಸುತ್ತಿರುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೋವಿಡ್ ಸೋಂಕು ಇರುವ ವ್ಯಕ್ತಿಗಳ ಬಳಿಯಲ್ಲಿ ಹೋಗಲು ಎಲ್ಲರೂ ಹೆದರುತ್ತಾರೆ. ಆದರೆ, ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್’ನ ಸದಸ್ಯರು ತಮ್ಮ ಸೋಂಕು ಹಾಗೂ ತಮ್ಮ ಜೀವವನ್ನೂ ಸಹ ಲೆಕ್ಕಿಸದೇ ಜನರಿಗೆ ನೆರವಾಗುತ್ತಲೇ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಮಾದರಿ ಕಾರ್ಯವಾಗಿದೆ. ಭದ್ರಾವತಿಯಲ್ಲೂ ಸಹ ಇವರ ಸೇವೆ ನಡೆಯುತ್ತಿದ್ದು, ಇದು ಹೀಗೇ ಮುಂದುವರೆಯಲಿ. ಈ ಕಾರ್ಯಕ್ಕೆ ನಾನು ಎಲ್ಲ ರೀತಿಯ ಸಹಕಾರವನ್ನು ನೀಡಲು ಸಿದ್ದನಿದ್ದೇನೆ ಎಂದು ಭರವಸೆ ನೀಡಿದರು.
ಇದೇ ವೇಳೆ ಯಾವುದೇ ಸಾರ್ವಜನಿಕರಿಗೆ ಕೋವಿಡ್ ಕುರಿತಂತೆ ಉಚಿತ ವೈದ್ಯಕೀಯ ಸಲಹೆ ಹಾಗೂ ಆಪ್ತ ಸಮಾಲೋಚನೆಯ ಅಗತ್ಯವಿದ್ದರೆ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್’ನ ಕೆ.ಸಿ. ಬಸವರಾಜ್(9483003823) ಹಾಗೂ 7795452442, 8318158200 ಸಂಖ್ಯೆಗೆ ಸಂಪರ್ಕಿಸಬಹುದು ಎಂದರು.
ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್ ಹಾಗೂ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ನೀಡುತ್ತಿರುವ ಉಚಿತ ಆರೋಗ್ಯ ಕಿಟ್’ನ್ನು ಶಾಸಕರು ವಿತರಣೆ ಮಾಡಿದರು.
ಸಂಸ್ಥೆಯ ಕೆ.ಸಿ. ಬಸವರಾಜ್, ಡಾ.ಎನ್. ಸುಧೀಂದ್ರ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post