ನವದೆಹಲಿ: ಸೆ:30: ಉರಿ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ 40ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡಿದ ನಂತರ ಎರಡೂ ದೇಶಗಳ ಗಡಿ ಭಾಗದಲ್ಲಿ ಸಮರ ಸದೃಶ ವಾತಾವರಣ ನೆಲೆಗೊಂಡಿದೆ. ಯುದ್ಧದ ಕಾರ್ಮೋಡಗಳು ದಟ್ಟೈಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದೆ. ಇದೇ ವೇಳೆ ಇಂದು ಕಂಡು ಬಂದ ಮಹತ್ವದ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ.
* ಭಾರತದ ಕಮಾಂಡೋಗಳ ಸೇನಾ ಕಾರ್ಯಾಚರಣೆ ನಂತರ ಗಡಿ ನಿಯಂತ್ರಣ ರೇಖೆ (ಎಲ್ಓಸಿ) ಮತ್ತು ಅಂತಾರಾಷ್ಟ್ರೀಯ ಗಡಿ (ಐಬಿ) ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಪರಿಸ್ಥಿತಿ ಪರಾಮರ್ಶಿ.
* ಪ್ರಕ್ಷುಬ್ಧಮಯ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ನಲ್ಲಿ ಗಡಿಭಾಗದ 10 ಕಿ.ಮೀ. ವ್ಯಾಪ್ತಿಯೊಳಗಿರುವ ನೂರಾರು ಗ್ರಾಮಗಳಿಂದ ಲಕ್ಷಾಂತರ ಜನರ ಸ್ಥಳಾಂತರ.
* ಪಾಕಿಸ್ತಾನದ ಸೆರೆಯಲ್ಲಿರುವ 22 ವರ್ಷದ ಭಾರತೀಯ ಯೋಧ ಚಂದು ಬಾಬುಲಾಲ್ ಚೌಹಾಣ್ ಸುರಕ್ಷಿತ ಬಿಡುಗಡೆಗೆ ಅಗತ್ಯ ಕ್ರಮ, ಪಾಕ್ ಜೊತೆ ಗೃಹ ಸಚಿವ ರಾಜನಾಥ್ ಸಿಂಗ್ ಚರ್ಚೆ.
* ಕಾಶ್ಮೀರದ ಅಕ್ನೂರ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಯೋಧರಿಂದ ಮತ್ತೆ ಕದನ ವಿರಾಮ ಉಲ್ಲಂಘನೆ, ಗುಂಡಿನ ದಾಳಿ.
* ಗಡಿ ನಿಯಂತ್ರಣ ರೇಖೆಯಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಭಾರತ-ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ವಕ್ರಾರ ಸ್ಟಿಫಾನೆ ಡುಜಾರಿಕ್ ಮನವಿ.
* ಪಾಕಿಸ್ತಾನದಲ್ಲಿರುವ ಮಾರಕ ಅಣ್ವಸ್ತ್ರಗಳು ಜಿಹಾದಿಗಳ ಕೈ ಸೇರುವ ಸಾಧ್ಯತೆ ಬಗ್ಗೆ ಡೆಮೊಕ್ರಾಟಿಕ್ ಪಕ್ಷದ ಅಮೆರಿಕ ಅಧ್ಯಕ್ಷೀಯ ಅಭ್ಯಥರ್ಿ ಹಿಲರಿ ಕ್ಲಿಂಟನ್ ಆತಂಕ. ವ್ಯಕ್ತಪಡಿಸಿದ್ದಾರೆ.
* ಗಡಿ ಪರಿಸ್ಥಿತಿ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಧ್ಯಕ್ಷ ನವಾಜ್ ಷರೀಫ್ ಅಧ್ಯಕ್ಷತೆಯಲ್ಲಿ ಇಸ್ಲಾಮಾಬಾದ್ನಲ್ಲಿ ಮಹತ್ವದ ಸಭೆ.
* ಗಡಿಯಲ್ಲಿ ಅಣ್ವಸ್ತ್ರ ಸಿಡಿ ತಲೆಗಳನ್ನು ಹೊತ್ತೊಯ್ಯುವ ಸಾಮಥ್ರ್ಯದ ರಸಾಲ್ ಸಮರ ವಿಮಾನಗಳನ್ನು ನಿಯೋಜಿಸಲು ಭಾರತದ ಚಿಂತ















