ಕಲ್ಪ ಮೀಡಿಯಾ ಹೌಸ್
ಉಡುಪಿ: ಉಡುಪಿಯ ಕೃಷ್ಣಾಪುರ ಮಠದ ಪರ್ಯಾಯದ ಪೂರ್ವಭಾವಿಯಾಗಿ ಕಟ್ಟಿಗೆಗಳನ್ನು ಹೊತ್ತು ಶ್ರೀ ಕೃಷ್ಣ ಮಠದ ಸುತ್ತು ಪ್ರದಕ್ಷಿಣೆ ಬಂದು ಬಳಿಕ ಭೋಜನ ಶಾಲೆಯ ಹಿಂಭಾಗದಲ್ಲಿ ಜೋಡಿಸುವ ಮೂಲಕ ಕಟ್ಟಿಗೆ ಮುಹೂರ್ತ ನಡೆಸಲಾಯಿತು. ನಂತರ ಮಠದ ಆಸ್ಥಾನ ಪುರೋಹಿತರು ತಂತ್ರಿಗಳು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು.
ನೂತನ ಪರ್ಯಾಯಕ್ಕೂ ಮುನ್ನ ನಾಲ್ಕು ಮುಹೂರ್ತಗಳು ನಡೆಯಲಿದ್ದು, ಭಾಳೆ ಭತ್ತ ನಂತರ ಕಟ್ಟಿಗೆ ಮುಹೂರ್ತ ನಡೆಸಲಾಗುತ್ತದೆ. ಕಟ್ಟಿಗೆಯನ್ನು ರಥದಂತೆ ಜೋಡಿಸಿ ಕಟ್ಟಲಾಗುತ್ತದೆ.

ಕೃಷ್ಣ ಮಠಕ್ಕೆ ಆಗಮಿಸುವ ಪ್ರವಾಸಿಗರಿಗೆ ಕಟ್ಟಿಗೆ ರಥ ಆಕರ್ಷಣೆಯ ಬಿಂದುವಾಗಿದೆ. ಮುಂದಿನ ಪರ್ಯಾಯ ಪೀಠವೇರುವ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥರು ಮುಹೂರ್ತದ ಬಳಿಕ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಠದ ಶಿಷ್ಯವೃಂದ ಅತಿಥಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















