Read - < 1 minute
ವಾಷಿಂಗ್ಟನ್, ಅ.4: ದಕ್ಷಿಣ ಏಷ್ಯಾವನ್ನು ಜಾಗತಿಕ ಬೆಳವಣಿಗೆಯ ಒಂದು ಮಹತ್ವದ ತಾಣ ಎಂದು ಬಣ್ಣಿಸಿರುವ ವಿಶ್ವಬ್ಯಾಂಕ್, ಭಾರತದ ಜಿಡಿಪಿ (ದೇಶೀಯ ಒಟ್ಟು ಲಾಭ) ಸದೃಢವಾಗಿಯೇ ಮುಂದುವರಿದಿದೆ ಎಂದು ಮೆಚ್ಚುಗೆ ಸೂಚಿಸಿದೆ.
ಭಾರತವು 2016ರಲ್ಲಿ ಶೇಕಡ 7.6 ಹಾಗೂ 2017ರಲ್ಲಿ ಶೇಕಡಾ 7.7ರಷ್ಟು ಜಿಡಿಪಿ ಪ್ರಗತಿಯಲ್ಲಿ ಮುಂದುವರಿದಿದೆ ಎಂದು ವಿಶ್ವಬ್ಯಾಂಕ್ ನಿನ್ನೆ ಬಿಡುಗಡೆ ಮಾಡಿದ ದಕ್ಷಿಣ ಏಷ್ಯಾ ಆರ್ಥಿಕ ಮುನ್ನೋಟ ಕುರಿತ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ.
ಕೃಷಿ ಪ್ರಗತಿ, ನಾಗರಿಕ ಸೇವಾ ಪಾವತಿ ಸುಧಾರಣೆ, ರಫ್ತು ವಹಿವಾಟುಗಳ ಪೂರಕ ಕೊಡುಗೆಗಳ ಹೆಚ್ಚಳ ಹಾಗೂ ಮಧ್ಯಾವಧಿಯಲ್ಲಿ ಖಾಸಗಿ ಬಂಡವಾಳ ಹೂಡಿಕೆ ಚೇತರಿಕೆ ಇವೇ ಮೊದಲಾದ ಕಾರಣಗಳಿಂದಾಗಿ ಭಾರತದಲ್ಲಿ ಜಿಡಿಪಿ ಸದೃಢವಾಗಿಯೇ ಮುಂದುವರಿದಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿದೆ.
ಆದಾಗ್ಯೂ, ಬೆಳವಣಿಗೆ ದೃಷ್ಟಿಯಿಂದ ಬಡತನ ನಿರ್ಮೂಲನೆ ಯೋಜನೆಯನ್ನು ಇನ್ನಷ್ಟು ತ್ವರಿತಗೊಳಿಸುವ ಸವಾಲನ್ನು ಭಾರತವು ಎದುರಿಸಬೇಕಿದೆ. ಜೊತೆಗೆ ಆರೋಗ್ಯ, ಪೋಷಣೆ, ಶಿಕ್ಷಣ ಮತ್ತು ಲಿಂಗ ತಾರತಮ್ಯ ಇವುಗಳಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆಯೂ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ದ್ವೈವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.
Discussion about this post