ಶಿವಮೊಗ್ಗ, ಅ.4: ನಗರದ ಮ್ಯಾಕ್ಸ್‌ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಬೇಬಿ ಸೂಟ್ ಡೆಲಿವರಿ ಮಾಡಿಸಲಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗೇಂದ್ರ, ಆಸ್ಪತ್ರೆಯಲ್ಲಿ ಕಾಯ್ದಿರಿಸಿರುವ ಸುಸಜ್ಜಿತ ವೈಯಕ್ತಿಕ ಕೋಣೆಯಲ್ಲಿ ಕುಟುಂಬ ಸದಸ್ಯ ಸಮ್ಮುಖದಲ್ಲಿ ನೋವುರಹಿತ ಹೆರಿಗೆ ಜೊತೆಗೆ ಗರ್ಭಿಣಿ ಕೋಣೆಗೆ ನುರಿತ ಸ್ತ್ರೀ ಮತ್ತು ಪ್ರಸೂತಿ ತಜ್ಞರು, ಅರವಳಿಕೆ ತಜ್ಞ, ನವಜಾತ ಹಾಗೂ ಮಕ್ಕಳ ತಜ್ಞ, ದಾದಿಯರ ತಂಡ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಹೆರಿಗೆಯನ್ನು ಮಾಡಿಸಿದೆ ಎಂದರು.
ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಸೋನಾಲಿ ಮಂಜುನಾಥ್ ಮಾತನಾಡಿ, ಈ ಪದ್ಧತಿಯಿಂದ ಗರ್ಭಿಣಿ ಸ್ತ್ರೀಯಲ್ಲಿ ಧೈರ್ಯ ತುಂಬವ ಕೆಲಸ, ಕಡಿಮೆ ಸೋಂಕು, ಕೊಠಡಿಯಲ್ಲಿ ಕೀಟ ನಿಯಂತ್ರಣ ಕ್ರಮ, ಆತಂಕ ರಹಿತ ಹೆರಿಗೆ ಲಭಿಸುತ್ತದೆ. ನೋವು ರಹಿತ ಹೆರಿಗೆ ತಮ್ಮ ಆಸ್ಪತ್ರೆಯ ವಿಶೇಷತೆ ಎಂದು ಅವರು ಹೇಳಿದರು.
ಪಾಶ್ಚಾತ್ಯ ದೇಶಗಳಲ್ಲಿ ಈ ಪದ್ಧತಿ ಬಹು ಹಿಂದೆಯೇ ಇದೆ. ನಂತರ ಬಹುತೇಕ ಮೆಟ್ರೋ ನಗರಗಳಲ್ಲಿ ಇದು ಪ್ರಾರಂಭವಾಗಿತ್ತು. ಆದರೆ ಶಿವಮೊಗ್ಗದಲ್ಲಿ ಇದೇ ಮೊಲದ ಬಾರಿಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಈ ವ್ಯವಸ್ಥೆಯಲ್ಲಿ ಹೆರಿಗೆ ಒಳಗಾದ ನಿಶಿತಾ ಮಾತನಾಡಿ, ತಾನು ಬೆಂಗಳೂರಿನವಾನಗಿದ್ದು, ಶಿವಮೊಗ್ಗದಲ್ಲಿ ಈ ಸೌಲಭ್ಯ ಇದೆ ಎನ್ನುವುದನ್ನು ತಿಳಿದು, ಡಾ. ಸೋನಾಲಿ ಅವರೊಂದಿಗೆ ಮಾತನಾಡಿ ಹೆರಿಗೆ ಸಿದ್ಧನಾದೆ ಎಂದು ಹೇಳಿದರು.
ನಿಶಿತಾ ಅವರ ಪತಿ ಅರುಣ್ ಗುಂಡ್ಮಿಸ ಮಾತನಾಡಿ, ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳು ಅತ್ಯಂತ ಯಶಸ್ವಿಯಾಗಿ ಸಹಕಾರಿಸಿದ್ದಾರೆ. ಯಾವುದೇ ತೊಂದರೆ ಎದುರಾಗುವುದಿಲ್ಲ ಎಂಬ ಭರವಸೆಯನ್ನು ತನ್ನಲ್ಲಿ ತುಂಬಿದ್ದರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಲತಾ ನಾಗೇಂದ್ರ ಉಪಸ್ಥಿತರಿದ್ದರು.















