ಕಲ್ಪ ಮೀಡಿಯಾ ಹೌಸ್
ಶಿರಸಿ/ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಮುಂದುವರೆದಿದ್ದು, ಜಿಲ್ಲೆಯ ಹಲವೆಡೆ ರಸ್ತೆಗೆ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು, ಭಾರೀ ಮಳೆಗೆ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ.
ಗಂಗಾವಳಿ, ಅಘನಾಶಿನಿ, ವರದಾ, ಶಾಲ್ಮಲಾ ನದಿಗಳೆಲ್ಲ ಉಕ್ಕಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರುವ ಮುನ್ಸೂಚನೆ ನೀಡುತ್ತಿದೆ. ಇದರಿಂದಾಗಿ ನದಿ ತೀರದ ಜನತೆಗೆ ಭಯ ಸೃಷ್ಟಿಯಾಗಿದ್ದು, ಮತ್ತೆ ನೆರೆ ಉಂಟಾಗುವ ಭೀತಿಯಲ್ಲಿದ್ದಾರೆ.
ಈಗಾಗಲೇ ದೇವರ ಹೊಳೆ, ಪಟ್ಟಣದ ಸೇತುವೆ ಮೇಲೆ, ಪ್ರಸಿದ್ದ ಸಹಸ್ರಲಿಂಗ ಮೆಟ್ಟಿಲುಗಳ ಮೇಲೆ ಹಳ್ಳ ತುಂಬಿ ಹರಿಯುತ್ತಿದೆ. ಇನ್ನು ಯಲ್ಲಾಪುರ-ಅಂಕೋಲಾ ಗಡಿಯ ಗುಳ್ಳಾಪುರ ಸೇತುವೆಗೆ ಸನಿಹದಲ್ಲಿ ಗಂಗಾವಳಿ ನದಿ ಬೋರ್ಗರೆಯುತ್ತ ಹರಿಯುತ್ತಿದ್ದಾಳೆ. ಹಾಗೂ ಈ ಭಾಗದ ರಸ್ತೆ- ತೋಟಗಳಿಗೆ ನೀರು ನುಗ್ಗಿ ವಾಹನ ಸಂಚಾರ ಬಂದ್ ಆಗಿದ್ದು, ಊರುಗಳ ನಡುವೆ ಸಂಪರ್ಕ ಕಡಿತಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post