ಕಲ್ಪ ಮೀಡಿಯಾ ಹೌಸ್
ಮಾರುತಿಪುರ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹೊಸನಗರ ತಾಲೂಕಿನ ಜನತೆ ನಲುಗಿ ಹೋಗಿದ್ದು, ಎಡಬಿಡದೆ ಹೊಯ್ಯುತ್ತಿರುವ ಮಳೆಗೆ ಅಡಿಕೆ, ಭತ್ತ ಗದ್ದೆಗಳು ಸಂಪೂರ್ಣ ಜಲಾವೃತವಾಗಿ ರೈತರು ಕಂಗಾಲಾಗಿದ್ದಾರೆ.
ಮಾರುತಿಪುರ ಪಂಚಾಯತ್ ವ್ಯಾಪ್ತಿಯ ಬಡೇನಕೊಪ್ಪ, ಇಟ್ಟಿನಕೊಪ್ಪ, ಕಚ್ಚಿಗೆಬೈಲ್, ಮತ್ತಿಕೊಪ್ಪ, ವಿಜಾಪುರ, ಮೇಲಿನಸಂಪಳ್ಳಿ, ಸುತ್ತಮುತ್ತಲಿನಲ್ಲಿ ಸುರಿದ ಬಾರಿ ಮಳೆಗೆ, ಜನ ಜೀವನ ಅಸ್ತವಸ್ತ್ಯವಾಗಿದ್ದು ರೈತರು ಹೈರಾಣಾಗಿದ್ದಾರೆ.
ಬಡೇನಕೊಪ್ಪದಲ್ಲಿ ಮಳೆ ಸೃಷ್ಟಿಸಿದ ಅವಾಂತರಕ್ಕೆ ಗುಡ್ಡ ಕುಸಿದು ಇನ್ನಷ್ಟು ಆತಂಕ ಸೃಷ್ಟಿಸಿದೆ. ಹಾಗೂ ಕಳೆದ ೨೪ ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ, ಮಾವಿನಹೊಳೆ, ಮುಡುಬಾ ಹೊಳೆಗಳ ಹರಿವು ಗರಿಷ್ಟ ಮಟ್ಟಕ್ಕೆ ಬಂದು ತಲುಪಿದೆ.
ಈಗಾಗಲೇ ತಾಲೂಕು ಆಡಳಿತ ಹೊಸನಗರ ಸುತ್ತ ಮುತ್ತ ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಅಗತ್ಯ ನೆರವಿಗೆ ತುರ್ತು ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದ್ದು ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿರುತ್ತಾರೆ.
ಹೊಸನಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿದ್ದು ಯಾವುದೇ ಹಾನಿಯಾದಲ್ಲಿ ತೊಂದರೆಯಾದಲ್ಲಿ ತಕ್ಷಣ ತಹಶೀಲ್ದಾರ್ 9986624119, ತಹಶೀಲ್ದಾರ್ ಗ್ರೇಡ್-2 9900827292, ಶಿರಸ್ತೇದಾರ್ 9611692401 ಅಥವಾ ಹೋಬಳಿವಾರು ಉಪ ತಹಶೀಲ್ದಾರ್ , ಹುಂಚಾ 9945948289, ನಗರ 9482682666, ಕೆರೆಹಳ್ಳಿ 9972748709 ರವರಿಗೆ ಹಾಗೂ ರಾಜಸ್ವನಿರೀಕ್ಷಕರು ಕಸಬಾ 9448629223, ನಗರ 9880907915, ಕೆರೆಹಳ್ಳಿ 7892621106, ಹುಂಚಾ 8548990455 ಮಾಹಿತಿ ನೀಡಲು ಸಾರ್ವಜನಿಕರಲ್ಲಿ ವಿನಂತಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post