ಕಲ್ಪ ಮೀಡಿಯಾ ಹೌಸ್
ಟೋಕಿಯೊ ಒಲಂಪಿಕ್ಸ್ ಟೂರ್ನಿಯಲ್ಲಿ ವಿಫಲರಾದ ಭಾರತೀಯ ಮಹಿಳಾ ತಂಡದ ಕ್ಯಾಪ್ಟನ್ ರಾಣಿ ರಾಂಪಾಲ್ ಬಳಿ ಪ್ರಧಾನಿ ಮೋದಿ ಮಾತನಾಡಿ, ಪದಕ ಗೆಲ್ಲದಿದ್ದರೂ ಜನರ ಮನಸ್ಸು ಗೆದ್ದಿದ್ದೀರಿ. ಬೇಸರ ಪಡಬೇಡಿ ಎಂದು ಸಾಂತ್ವನ ಹೇಳಿದ್ದಾರೆ.
ಇಷ್ಟು ವರ್ಷಗಳಿಂದ ನೀವು ಶ್ರಮ ಪಟ್ಟು, ಬೆವರು ಹರಿಸಿದ್ದೀರಿ. ನೀವು ಪಟ್ಟಿರುವ ಶ್ರಮ ಪ್ರತಿ ಮಹಿಳೆಗೂ ಸ್ಫೂರ್ತಿ ನೀಡಿದೆ. ಸೋಲು ಗೆಲುವು ಆಟದಲ್ಲಿ ಸಾಮಾನ್ಯವಾಗಿದ್ದು, ಮನಸಿಗೆ ನೋವು ಮಾಡಿಕೊಳ್ಳಬೇಡಿ ಎಂದು ಸಮಾಧಾನ ಹೇಳಿದ್ದಾರೆ.
#WATCH | Indian Women’s hockey team breaks down during telephonic conversation with Prime Minister Narendra Modi. He appreciates them for their performance at #Tokyo2020 pic.twitter.com/n2eWP9Omzj
— ANI (@ANI) August 6, 2021
ಆಟದ ಸಂದರ್ಭದಲ್ಲಿ ಗಾಯಗೊಂಡಿದ್ದ ತಂಡದ ಆಟಗಾರರ ಬಗ್ಗೆ ಪ್ರಧಾನಿ ಮೋದಿ ವಿಚಾರಿಸಿದ್ದು, ಮನಸ್ಸು ಚಿಕ್ಕದು ಮಾಡಿಕೊಳ್ಳಬೇಡಿ. ನಿಮ್ಮಂತಹ ತಂಡದಿಂದ ಭಾರತದ ಪದಕ ಗೆಲ್ಲುವ ಕನಸು ಮತ್ತೆ ಚಿಗುರೊಡೆದಿದೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.
ಕೆಲ ಸಮಯ ಪ್ರಧಾನಿ ಮೋದಿ ಅವರು ಸಂತೈಸಿದ ರೀತಿಗೆ ಆಟಗಾರರಿಗೆ ಮಾತೇ ಹೊರಬರಲಿಲ್ಲ. ನೀವೆಲ್ಲರೂ ಅಳುವ ಸದ್ದು ನನಗೆ ಕೇಳುತ್ತಿದೆ. ಮೊದಲು ಅದನ್ನು ನಿಲ್ಲಿಸಿ ಎಂದು ಹೇಳಿದರು. ನಂತರ ಕೋಚ್ ಜಾರ್ಡ್ ಮರೀನ್ ಮಾತನಾಡಿ, ಹುಡುಗಿಯರು ಈ ಸಮಯದಲ್ಲಿ ತುಂಬಾನೇ ಭಾವುಕರಾಗಿದ್ದಾರೆ. ನಿಮ್ಮ ನುಡಿಗಳಿಂದ ಅವರು ಸ್ಫೂರ್ಥಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post