ನವದೆಹಲಿ, ಅ.8: ಭಾರತೀಯ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧರು ಹಾಗೂ ಅವರ ಕುಟುಂಬಸ್ಥರ ತ್ಯಾಗ ಎಂದಿಗೂ ಅಜರಾಮರ. ನಿಮ್ಮಗಳ ಧೈರ್ಯ ಹಾಗೂ ಶೌರ್ಯಕ್ಕೆ ಭಾರತ ಹೆಮ್ಮೆ ಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ವಾಯುಪಡೆ ಇಂದು 84 ರ ಸಂಭ್ರಮಾಚರಣೆಯಲ್ಲಿರುವ ಇಂದು ಟ್ವೀಟ್ ಮಾಡಿರುವ ಮೋದಿ, ವಾಯುಪಡೆ ಯೋಧರ ತ್ಯಾಗವನ್ನು ಕೊಂಡಾಡಿದ್ದಾರೆ.
ಇದೇ ವೇಳೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ದೇಶದ ರಕ್ಷಣೆಯಲ್ಲಿ ವಾಯುಪಡೆ ಯೋಧರ ಸಾಹಸ ಎಂದಿಗೂ ಮನನೀಯ ಎಂದಿದ್ದಾರೆ.
ಗಾಜಿಯಾಬಾದ್‌ನ ಹಿಂದೋನ್‌ನಲ್ಲಿ ವಾಯುಪಡೆ ದಿನಾಚರಣೆ ಸಂಬಂಧವಾಗಿ ಬೃಹತ್ ಪರೇಡ್ ಹಾಗೂ ವಾಯುಶಕ್ತಿ ಪ್ರದರ್ಶನಗಳು ನಡೆಸಲಾಯಿತು. ಪ್ರಖ್ಯಾತ ಆಕಾಶ್ ಗಂಗಾ ತಂಡದ ಸ್ಕೈ ಡೈವರ್‌ಗಳು ತ್ರಿವರ್ಣ ಧ್ವಜಧಾರಿಗಳಾಗಿ ವಾಯುಶಕ್ತಿ ಪ್ರದರ್ಶನ ಆರಂಭಿಸಿದರು. ಎಎನ್-೩೨ ವಿಮಾನದ ಮೂಲಕ ಇವರು ತಮ್ಮ ವರ್ಣರಂಜಿತ ಕೆನೋಪಿಗಳೊಂದಿಗೆ ಹೊರ ಧುಮುಕಿದರು.
ಈ ವಾಯಶಕ್ತಿ ಪ್ರದರ್ಶನದಲ್ಲಿ ಹಳೇ ಕಾಲದ ವಿಮಾನಗಳು, ಆಧುನಿಕ ವಿಮಾನಗಳು ಹಾಗೂ ಮುಂಚೂಣಿ ಸಮರ ವಿಮಾನಗಳು ತಮ್ಮ ಹೆಚ್ಚುಗಾರಿಕೆಗಳನ್ನು ಪ್ರದರ್ಶಿಸಿದವು. ಅತ್ಯಂತ ರೋಮಾಂಚಕ ಏರೋಬ್ಯಾಟಿಕ್ ಪ್ರದರ್ಶನದೊಂದಿಗೆ ಈ ಕಾರ್ಯಕ್ರಮವು ಮುಕ್ತಾಯಗೊಂಡಿತು.
Silent Skin Damage in Winter: Children at Higher Risk Than Adults, Doctors Warn
Kalpa Media House | Bengaluru, Whitefield | Although winter is considered a comfortable season, doctors warn that cold weather can...
Read moreDetails














