ಉಡುಪಿ, ಅ.9: ಹಿಂದೂಗಳಿಂದ ದಬ್ಬಾಳಿಕೆ, ಆಹಾರದ ಹಕ್ಕಿನ ಮೇಲಿನ ದಾಳಿ ಸಹಿಸೆವು ಎಂಬ ಪ್ರಮುಖ ಘೋಷಣೆಯನ್ನು ಇಟ್ಟುಕೊಂಡಿದ್ದ ಚಲೋ ಉಡುಪಿ ಕಾರ್ಯಕ್ರಮ ಬಡಾಯಿ ಕೊಚ್ಚಿಕೊಳ್ಳುವುದಕ್ಕೆ ಹಾಗೂ ನಿಜವಾದ ಸಾಮಾಜಿಕ ಸೇವಕರನ್ನು ಹೀಗಳೆಯುವ ವೇದಿಕೆಯಾಗಿ ಪ್ರದರ್ಶನವಾಗಿದ್ದು, ಒಟ್ಟಾರೆ ಕಾರ್ಯಕ್ರಮ ಫೇಲ್ ಆಗಿದೆ.
ದಲಿತ, ದಮನಿತರ ಸ್ವಾಭಿಮಾನಿ ಜಾಥಾವನ್ನು ದಲಿತ ಸಂಘರ್ಷ ಸಮಿತಿಯ ನಾಯಕ ಲಕ್ಷ್ಮೀ ನಾರಾಯಣ ಉದ್ಘಾಟಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ನಿರೀಕ್ಷಿತ ಸಂಖ್ಯೆಯನ್ನು ಜನರು ಸೇರಿರಲಿಲ್ಲ. ಸಾವಿರಾರು ಮಂದಿ ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತಾರೂ, ಕೇವಲ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಮೆರವಣಿಗೆ ಸಾಗಿದ ರಸ್ತೆ ಖಾಲಿ ಖಾಲಿಯಾಗಿದ್ದು, ಮೆರವಣಿಗೆ ಬಿಕೋ ಎನ್ನುತ್ತಿದ್ದುದು ಜಾಥಾ ಯಶಸ್ವಿಯಾಗಲಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿತ್ತು.

ಇನ್ನು ವೇದಿಕೆಯಲ್ಲಿ ಮಾತನಾಡಿದವರೆಲ್ಲರೂ ದಲಿತರ ಉದ್ದಾರ ಹೇಗೆ ಮಾಡಬೇಕು, ದಲಿತನ್ನು ಮುಖ್ಯವಾಹಿಗೆ ಹೇಗೆ ತರಬೇಕು ಎನ್ನುವು ವಿಚಾರಕ್ಕಿಂತಲೂ ಮೇಲ್ವರ್ಗವನ್ನು ದೂಷಿಸುವ ವೇದಿಕೆಯನ್ನಾಗಿ ಮಾಡಿಕೊಂಡಿದ್ದು ವಿಪರ್ಯಾಸ. ವೇದಿಕೆ ಕಾರ್ಯಕ್ರಮದಲ್ಲಿ ಒಂದಷ್ಟು ಜನ ಸೇರಿದ್ದರು ಎನ್ನುವುದನ್ನು ಬಿಟ್ಟರೆ ಆಯೋಜಕರು ಹೇಳಿಕೊಂಡಷ್ಟು ಜನ ಸೇರಿರಲಿಲ್ಲ ಎನ್ನುವುದು ಗಮನಾರ್ಹ.
ಒಟ್ಟಾರೆ, ಬಾರೀ ಮಟ್ಟದಲ್ಲಿ ಪ್ರಚಾರ ಪಡೆದುಕೊಂಡಿದ್ದ ಚಲೋ ಉಡುಪಿ ಕಾರ್ಯಕ್ರಮ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಗಿ, ದಲಿತರನ್ನು ಉದ್ದಾರ ಮಾಡಬೇಕು ಎಂಬ ಯಾವುದೇ ವೈಜ್ಞಾನಿಕ ಹಾಗೂ ಪ್ರಾಯೋಗಿನ ನಿರ್ಣಗಳನ್ನು ಕೈಗೊಳ್ಳದೇ ಸಂಪೂರ್ಣ ವಿಫಲವಾಯಿತು ಎಂದು ವರದಿಯಾಗಿದೆ.














