ಕಲ್ಪ ಮೀಡಿಯಾ ಹೌಸ್ | ಸೊರಬ |
ಮಾಧ್ಯಮಗಳನ್ನು ಗ್ರಂಥಾಲಯ ಎಂದು ಭಾವಿಸಿದರೆ ಜ್ಞಾನದ ಮೌಲ್ಯ ವೃದ್ಧಿಯಾಗುತ್ತದೆ. ಮಾಧ್ಯಮಗಳನ್ನು ಕೇವಲ ಮನೋರಂಜನೆಯ ಅಂಗ ಎಂದು ಪರಿಗಣಿಸಬಾರದು ಎಂದು ಡಾ.ಎಂ.ಕೆ. ಭಟ್ ಹೇಳಿದರು.
ಪಟ್ಟಣದಲ್ಲಿ ತಾಲೂಕಿನ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡಿದ್ದ ಕ್ಷೌರದ ಎರಡು ಅಂಗಡಿ ಗಳಲ್ಲಿ ಪುಸ್ತಕ ಭಂಡಾರ ಉದ್ಘಾಟನಾ ಸಮಾರಂಭದಲ್ಲಿ ಅವರು ಕುವೆಂಪು ಹೆಸರಿನಲ್ಲಿ ರಚಿಸಿರುವ ಫ್ರೆಂಡ್ಸ್ ಹೇರ್ ಡ್ರೆಸಸ್ ಮಳಿಗೆಯ ಪುಸ್ತಕ ಭಂಡಾರವನ್ನು ಉದ್ಘಾಟಿಸಿ ಮಾತನಾಡಿದರು.
ಸ್ನೇಹ ಹೇರ್ ಡ್ರ್ರೆಸಸ್ ಆವರಣದಲ್ಲಿ ಡಾ. ಶಿವರಾಮ ಕಾರಂತ ಅವರ ಹೆಸರಿನ ಪುಸ್ತಕ ಭಂಡಾರವನ್ನು ಮಾಜಿ ಶಸಾಪ ಅಧ್ಯಕ್ಷ ಕೃಷ್ಣಾನಂದ ಅವರು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮವನ್ನು ಎರಡೂ ಸಂಸ್ಥೆಗಳ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಉದ್ಘಾಟಿಸಿ ಸೆಲೂನ್‌ಗಳು ಜ್ಞಾನದ ಭಂಡಾರವಾಗಿದ್ದು, ಇಂತಹ ಪ್ರಕ್ರಿಯೆ ಸ್ವಾಗತಾರ್ಹ ಎಂದರು.
ತಾಲ್ಲೂಕು ಕ.ಸಾ. ಸಾಂ. ವೇದಿಕೆಯ ಅಧ್ಯಕ್ಷ ಎನ್. ಷಣ್ಮುಖಾಚಾರ್ ಅಧ್ಯಕ್ಷತೆ ವಹಿಸಿದ್ದರು. ತಾ. ಕಜಾಪ ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಶಿಕಾರಿಪುರ ತಾ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ. ಎಸ್. ಹುಚ್ಚರಾಯಪ್ಪ, ಹಿರಿಯ ಪತ್ರಕರ್ತ ಲಕ್ಷ್ಮೀಕಾಂತ, ಉಪನ್ಯಾಸಕ ನೀಲೇಶ್, ಕೆ. ಎಸ್. ಸವಿತಾ ಎಂ. ಕೆ. ಭಟ್, ಹಾಲೇಶ್ ನವುಲೆ, ಮೃತ್ಯುಂಜಯ ಗೌಡ, ಸುಜಾತ ಜೋತಾಡಿ, ರೇಣುಕಾ ಗೌಳಿ ವೇದಿಕೆಯಲ್ಲಿದ್ದರು.
ಗ್ರಂಥಭಂಡಾರದ ರೂವಾರಿ ಸುರೇಶ್ ಭಂಡಾರಿ, ನಾಗರಾಜ್ ವೈ ಅವರನ್ನು ಸನ್ಮಾನ ಮಾಡಲಾಯಿತು. ವೇದಿಕೆ ವತಿಯಿಂದ ಹಾಗೂ ಡಾ.ಎಂ.ಕೆ.ಭಟ್, ಕೃಷ್ಣಾನಂದ್, ನೇಕಾರ ಪ್ರಕಾಶನದ ರಾಮಕೃಷ್ಣ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಕೊಡುಗೆ ನೀಡಿದರು.
ಪ್ರಮುಖರಾದ ಶಂಕರಶೇಟ್, ಗುತ್ತಿ ನಾಗರಾಜ್, ಸಿ.ಪಿ.ಈರೇಶಗೌಡ, ವೀಣಾ ಶ್ರೀಧರ್, ಗಾಯತ್ರಿ ಗೋಖಲೆ, ನೆಮ್ಮದಿ ಶ್ರೀಧರ್, ಮಹೇಶಖಾರ್ವಿ, ವಿಜಯಗೌಳಿ, ಜಗದೀಶ್ ಕಕ್ಕರಸಿ, ನವೀನ್ ಸಿರ್ಸಿ, ಸಿ.ಕೆ.ಬಲೀಂದ್ರಪ್ಪ ಇನ್ನೂ ಅನೇಕರಿದ್ದರು.
ಸಾಹಿತಿ ಬಿದರಗೆರೆ ರೇವಣಪ್ಪ ನಿರೂಪಿಸಿದರು. ಚುಟುಕು ಕವಿ ಮಂಜಪ್ಪ ಹುಲ್ತಿಕೊಪ್ಪ ಸ್ವಾಗತಿಸಿದರು. ಬಿ. ರಮೇಶ್ ವಂದಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post