ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ವಿವೇಕಾನಂದ ಯೋಗ ಟ್ರಸ್ಟ್ನ ಡಿ. ನಾಗರಾಜ್ ಪ್ರಾಸಾರಿತ ಪಾದೋತ್ತಾಸನದ ಯೋಗ ಭಂಗಿಯಲ್ಲಿ 5 ನಿಮಿಷ ಮಾಡಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಮಾಡಿದ್ದು, ಯೋಗ ಕ್ಷೇತ್ರದಲ್ಲಿನ ನಾಗರಾಜ್ ಅವರ ೪ ದಶಕದ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಯೋಗಿ-ಯೋಗ ಅವಾರ್ಡ್ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ನಾಗರಭಾವಿಯ ಸೆಂಟ್ ಸೋಫಿಯಾ ಕಾನ್ವೆಂಟ್ ಹೈಸ್ಕೂಲ್ನಲ್ಲಿ ಆನ್ಲೈನ್ ಮೂಲಕ ನಡೆದ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಹಾಗು ರಾಷ್ಟ್ರೀಯ ಯೋಗಿ-ಯೋಗ ಆವಾರ್ಡ್-2021 ಸ್ಪರ್ಧೆಯಲ್ಲಿ ಭಾಗವಹಿಸಿ ದಾಖಲೆ ಮಾಡಿದ್ದಾರೆ.
ಸ್ಪರ್ಧೆಯಲ್ಲಿ ಭಾರತ, ಥೈಲ್ಯಾಂಡ್, ಮಲೇಷಿಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಸುಮಾರು 477 ಯೋಗಪಟುಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಡೈರೆಕ್ಟರ್ ಡಾ. ಸುಬ್ರಮಣಿ, ಸಂಯೋಜಕ ಡಾ. ಕಮಲ್ಕಣ್ಣನ್, ಉಪಾಧ್ಯಕ್ಷ ಡಾ. ಮುರುಗನ್, ಯೋಗ ಮಹಾದೇವಾ ಹಾಗೂ ಡಾ. ಶಿವಪ್ರಕಾಶ್ ಮತ್ತು ಸೋಪಿಯಾ ಕಾನ್ವೆಂಟ್ ಹೈಸ್ಕೂಲ್ ಪ್ರಾಂಶುಪಾಲೆ ಡಾ. ಕಲ್ಪನಾ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post