ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸಂಗೊಳ್ಳಿ ರಾಯಣ್ಣ, ಕನಕದಾಸರು ಒಂದು ಸಮೂಹಕ್ಕೆ ಸೀಮಿತವಾದ ಸಾಮಾನ್ಯ ನಾಯಕರಲ್ಲ ಅವರ ಧೈರ್ಯ ಭಕ್ತಿ ಇಡೀ ಮಾನವ ಕುಲಕ್ಕೆ ಮಾದರಿಯಾಗಿದ್ದು ಅದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕನಕ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್. ರಘು ಹೇಳಿದರು.
ಪಟ್ಟಣದಲ್ಲಿ ನಡೆದ ಕನಕ ಕೆಡ್ರಿಟ್ ಕೋ ಆಪರೇಟಿವ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಯಣ್ಣ ದೇಶಕ್ಕಾಗಿ ತನ್ನ ಪ್ರಾಣವನ್ನೆ ನೀಡಿದ ಅವರು, ಯುವ ಸಮೂಹಕ್ಕೆ ಧೈರ್ಯದ ಸಂಕೇತ. ಕನಕದಾಸರ ಭಕ್ತಿ ಇಂದಿಗೂ ಚೈತನ್ಯವಾಗಿ ಹರಿಯುತ್ತಿದೆ. ತಮ್ಮ ಕೀರ್ತನೆ ಮೂಲಕ ಸಮಾಜದ ಅಂಕು ಡೊಂಕು ತಿದ್ದುವ ಜತೆ ದೇವರ ಸಾಕ್ಷಾತ್ಕಾರಕ್ಕೆ ಮಾರ್ಗವನ್ನು ನೀಡಿದ್ದಾರೆ ಎಂದರು.
ಕೋವಿಡ್ ಸಂಕಷ್ಟದ ನಡುವೆ ಕನಕ ಬ್ಯಾಂಕ್ 14.53ಲಕ್ಷ ರೂ. ಲಾಭಗಳಿಸಿದೆ ಅದಕ್ಕೆ ಸದಸ್ಯರು, ಗ್ರಾಹಕರ ಸಹಕಾರ ಕಾರಣ. ಸಾಲ ಪಡೆದ ಕಾರಣಕ್ಕೆ ಹಣ ಬಳಕೆ ಮಾಡಿದಲ್ಲಿ ಮರುಪಾವತಿ ಸುಲಭವಾಗುತ್ತದೆ. ಸಹಕಾರಿ ಕ್ಷೇತ್ರ ಬಲಗೊಂಡರೆ ಅದು ಇಡೀ ಸಮುದಾಯಕ್ಕೆ ಅದರ ಪ್ರಯೋಜನ ಸಿಗಲಿದೆ. ಸಂಘವು ಆರ್ಥಿಕ ಚಟುವಟಿಕೆ ಜತೆ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಸಾಧನೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಪ್ರಗತಿ ಸಾಸಿದ ಮಕ್ಕಳಿಗೆ ಗೌರವಿಸಲಾಯಿತು. ಸಹಕಾರ ಸಂಘದ ಉಪಾಧ್ಯಕ್ಷೆ ಶುಭಾ ಮಂಜಪ್ಪ, ನಿರ್ದೇಶಕರಾದ ಎ.ಎಸ್.ಮಂಜಪ್ಪ, ಎಚ್.ಜಿ.ಗಿಡ್ಡಪ್ಪ, ಆರ್.ಎಸ್.ಸತೀಶ್, ಕೊಟ್ರಪ್ಪ, ಡಿ.ಪ್ರಶಾಂತ್, ಸಿ.ಎಸ್.ಗಿಡ್ಡೇಶ್, ವಿ.ರಮೇಶ್‌ಬಾಬು, ಲಕ್ಷ್ಮಮ್ಮ ನಾಗರಾಜ್, ನಗರದ ಅಶೋಕ್, ಎಸ್.ಎಲ್. ಲಕ್ಕಪ್ಪ, ವ್ಯವಸ್ಥಾಪಕ ಮಹೇಶ್‌ಕುಮಾರ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post