ಕಲ್ಪ ಮೀಡಿಯಾ ಹೌಸ್ | ಕಾರವಾರ |
ಕಾಳಿನದಿಯಲ್ಲಿ ಮೀನು ಹಿಡಿಯಲು ಹೋಗಿ ಮೊಸಳೆ ಪಾಲಾಗಿದ್ದ ದಾಂಡೇಲಿಯ ಮೆಹಬೂಬ್ (15)ನ ಶವವು ಎರಡು ದಿನದ ನಂತರ ಇಂದು ಪತ್ತೆಯಾಗಿದೆ.
ಪೊಲೀಸರು ,ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಾಯದಿಂದ ಆತನ ಶವವನ್ನು ಪತ್ತೆಹಚ್ಚಲಾಗಿದ್ದು, ಮೊಸಳೆ ದಾಳಿಯಿಂದ ಆತನ ಒಂದುಕೈ ಸಂಪೂರ್ಣ ತುಂಡಾಗಿದೆ ಎನ್ನಲಾಗಿದೆ.
ಭಾನುವಾರ ದಂದು ದಾಂಡೇಲಿಯ ಕಾಳಿ ನದಿ ದಡದಲ್ಲಿ ಮೀನು ಹಿಡಿಯುವಾಗ ಮೊಸಳೆ ಪಾಲಾಗಿದ್ದ ಬಾಲಕನನ್ನು ಹುಡುಕಲು ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಅವಿರತ ಶ್ರಮ ಕೈಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post