ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಜಿಲ್ಲೆಯ ಎಸ್ ಟಿ ಮೀಸಲು ಕ್ಷೇತ್ರದಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ ಎಂದು ಮಾಜಿ ಸಂಸದ, ಚಿತ್ರನಟ ಶಶಿಕುಮಾರ್ ಇಂಗಿತ ವ್ಯಕ್ತಪಡಿಸಿದರು.
ನಗರದ ಕಾಟಪ್ಪನಹಟ್ಟಿ ವಳ್ಳಿ ಪ್ರಕಾಶ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಯಾವ ಪಕ್ಷದಿಂದ ಹಾಗೂ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎನ್ನುವ ಕುರಿತು ಶೀಘ್ರವೇ ತಿಳಿಸುತ್ತೇನೆ. ಈಗ ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದೇನೆ ಎಂದು ಹೇಳಿದರು.
ಕಳೆದ ಬಾರಿ ಹೀಗೆ ಹೇಳಿದ್ದೀರಿ ಆದರೆ ಸ್ಪರ್ಧೆ ಮಾಡಲಿಲ್ಲ ಎನ್ನುವ ಪತ್ರಕರ್ತಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಟಿಕೇಟ್ ಸಿಗಲಿಲ್ಲ ಆದ್ದರಿಂದ ಸ್ಪರ್ಧೆ ಮಾಡಲಿಲ್ಲ. ಈಬಾರಿ ಜಿಲ್ಲೆಯ ಎಸ್‌ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ತಾವು ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಕೇವಲ 2 ಕೋಟಿ ರೂ. ಅನುದಾನ ಬರುತ್ತಿತ್ತು. ಆದರಲ್ಲಿ ಜನರು ಗುರುತಿಸುವ ಕೆಲಸಗಳನ್ನು ಮಾಡಿದ್ದೇನೆ. ಸಂಸದರಿಗೆ ಎಷ್ಟು ಅನುದಾನ ಬರುತ್ತದೆ ಎಂದು ಜನರಿಗೆ ತಿಳಿಸಿ, ಅವರು ಹೇಳಿದ ಹಾಗೇ ಕೆಲಸ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ವಳ್ಳಿ ಪ್ರಕಾಶ್, ಮಾರುತಿ, ಜಾಕೀರ್ ಹುಸೇನ್, ಕಲ್ಯಾಣ, ರಂಗಸ್ವಾಮಿ, ಮಹಾಲಿಂಗಪ್ಪ ಸೇರಿದಂತೆ ಮುಂತಾದವರು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post