ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕಿನ ಎಲ್ಲ ಪೂರ್ವ ಪ್ರಾಥಮಿಕ ಶಾಲೆಗಳು ಈಗಾಗಲೇ ತೆರೆದಿದ್ದು, ಶಾಲೆಗಳಿಗೆ ಮಕ್ಕಳನ್ನು ಕರೆತರುವಲ್ಲಿ ಶಾಲೆಗಳು ಹಾಗೂ ಪೋಷಕರು ಉತ್ಸಾಹ ತೋರುತ್ತಿದ್ದರೂ ನಿರೀಕ್ಷಿತ ಸಂಖ್ಯೆಯ ಮಕ್ಕಳ ಹಾಜರಾತಿ ಆಗಿಲ್ಲ. ಈ ನಿಟ್ಟಿನಲ್ಲಿ ಕೆಲವು ಕಡೆ ಮಕ್ಕಳನ್ನು ಶಾಲೆಗೆ ಸೆಳೆಯುವ ಭೌತಿಕ ಪ್ರಕ್ರಿಯೆ ಅನುಸರಿಸಿದ್ದು ಬಲೂನ್, ಬಣ್ಣದ ಹೂ, ಸಿಹಿ, ವರ್ಣರಂಜಿತ ಪುಸ್ತಕ, ಆಟಿಕೆಗಳ ಮೂಲಕ ಕರೆತರಲಾಗುತ್ತಿದೆ.
ಪಟ್ಟಣದಲ್ಲಿ ಮೌಲ್ಯಾಧರಿತ ಶಿಕ್ಷಣದ ಮೂಲಕ ಹೆಸರು ಗಳಿಸಿರುವ ಸಮರ್ಪಣ ಸಂಸ್ಥೆಯವರ ಸ್ಮಾರ್‍ಟ್ ಕಿಡ್ಝ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬಣ್ಣಬಣ್ಣದ ಬಲೂನು, ಸಿಹಿ ನೀಡಿ ಬರ ಮಾಡಿಕೊಳ್ಳಲಾಯಿತು. ಎಲ್‌ಕೆಜಿ ಮಕ್ಕಳಿಗೆ ಅಕ್ಷರಭ್ಯಾಸ ಸಂಸ್ಕಾರ ನೀಡಿ ಅಕ್ಷರ ಬರೆಸಲಾಯಿತು.
ಗ್ರಾಮಾಂತರ ಪ್ರದೇಶದ ಸರ್ಕಾರಿ ಅಂಗನವಾಡಿ ಕೇಂದ್ರಗಳಲ್ಲೂ ಬಣ್ಣದ ಗಿಮಿಕ್ ಮೂಲಕ ಮಕ್ಕಳನ್ನು ಶಾಲೆಗೆ ಸೆಳೆಯುವ ಪ್ರಯತ್ನ ನಡೆಯುತ್ತಿದ್ದು ಒಂದು ತಾಸು ಮಕ್ಕಳ ಜೊತೆಗೆ ಪೋಷಕರೂ ಇದ್ದು ಕೂರಿಸುವ ಸಾಹಸವೂ ನಡೆದಿದೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post