ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಕಿರ್ಲೋಸ್ಕರ್ ಮತ್ತು ವಸುಂಧರಾ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ವಸುಂಧರಾ-ಅಂತಾರಾಷ್ಡ್ರೀಯ ಚಲನ ಚಿತ್ರೋತ್ಸವವು ಕಳೆದ ಹದಿನೈದು ವರ್ಷಗಳಿಂದ ದೇಶದ ಏಳು ವಿವಿಧ ರಾಜ್ಯಗಳ 30 ನಗರಗಳಲ್ಲಿ ಆಯೋಜಿಸಲಾಗುತ್ತಿದೆ.
ಅದೇ ರೀತಿ ಈ ಚಲನ ಚಿತ್ರೋತ್ಸವವನ್ನು ಕಳೆದ 12 ವರ್ಷಗಳಿಂದ ಕೊಪ್ಪಳ ಮತ್ತು ಹೊಸಪೇಟೆಯಲ್ಲಿಯೂ ಸಹ ಆಯೋಜಿಸಲಾಗಿದ್ದು, ಅದರಂತೆ ಈ ವರ್ಷವೂ ಸಹ ಈ ಚಲನಚಿತ್ರೋತ್ಸವನ್ನು ಅಂತರ್‌ಜಾಲದ (ಅನ್‌ಲೈನ್) ಮೂಲಕ ಡಿ.14ರಿಂದ 17ರವರೆಗೆ ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಈ ಚಲನ ಚಿತ್ರೋತ್ಸವವು ಆಯೋಜಿಸಲಾಗುತ್ತಿದೆ.
ಈ ಚಲನಚಿತ್ರೋತ್ಸವದ ಲಾಂಚನವನ್ನು ಮತ್ತು ಧ್ಯೇಯೆವಾಖ್ಯೆಯನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಆರ್.ವಿ. ಗುಮಾಸ್ತೆ ಮತ್ತು ಹಿರಿಯ ಅಧಿಕಾರಿಗಳು ಬಿಡುಗಡೆ ಮಾಡಿರುತ್ತಾರೆ. ಸಾರ್ವಜನಿಕರಲ್ಲಿ, ಮುಖ್ಯವಾಗಿ ವಿದ್ಯಾರ್ಥಿಗಳು, ಮತ್ತು ಯುವಕರಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಈ ಚಲನ ಚಿತ್ರೋತ್ಸವದ ಮುಖ್ಯ ಉದ್ದೇಶವಾಗಿದೆ.
ಈ ಕಾರ್ಯಕ್ರಮದ ಮುಖ್ಯ ಸಂದೇಶ – ಪೌಷ್ಠಿಕ ಆಹಾರ , ಪ್ರವರ್ಧಮಾನಕ್ಕೆ ಬರುವ ಪ್ರಕೃತಿ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ, (Nutritious Food, Flourishing Nature and Healthy Society) ಎಂಬ ವಿಷಯದ ಮೇಲೆ ಈ ವರ್ಷ ಬೆಳಕು ಚೆಲ್ಲುವುದಾಗಿದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದಾಗಿ ಆಚರಣೆಗೆ ಅಡ್ಡಿಯಾಗಿತ್ತು. ಈಗ ಇದರಿಂದ ಮುಕ್ತರಾಗಿ, ನೀತಿ ನಿಯಮದನ್ವಯ ಸಾರ್ವಜನಿಕರ ದಿನನಿತ್ಯದ ಜೀವನಕ್ಕೆ ಅನುಕೂಲವಾಗುವ ಪೌಷಿಕ ಆಹಾರ ಪದ್ದತಿಯನ್ನು ಇಟ್ಟುಕೊಂಡು ಜೀವನವನ್ನು ಸಾಗಿಸುವ ಮಾರ್ಗೋಪಾಯವನ್ನು ಮಾಡುವ ಉದ್ದೇಶದಿಂದ ಈ ವರ್ಷ ಇದರ ಬಗ್ಗೆ ಹೆಚ್ಚಿನ ಅರಿವನ್ನು ತಿಳಿಯಬಯಸುವ ಉದ್ದೇಶದಿಂದ ಕಿರ್ಲೋಸ್ಕರ್ ವಸುಂಧರಾ ಕ್ಲಬ್ ಸದಸ್ಯರು ಈ ಪ್ರಕೃತಿಯ ಅವನತಿ, ರೋಗ ನಿರೋಧಕ ಶಕ್ತಿ ಮತ್ತು ನಾವು ಸೇವಿಸುವ ದಿನನಿತ್ಯದ ಆಹಾರ ಪದ್ಧತಿಗಳಲ್ಲಿ ಪೌಷ್ಠಿಕಾಂಶ ತಿಳಿಸಲು ಆಸಕ್ತಿಹೊಂದಿದೆ. ಈ ನಿಟ್ಟಿನಲ್ಲಿ ಈ ವರ್ಷ ಆನ್‌ಲೈನ್ ಮೂಲಕ ಕಿರ್ಲೋಸ್ಕರ್ ವಸುಂಧರಾ- 2021 ಅಂತಾರಾಷ್ಡ್ರೀಯ ಚಲನ ಚಿತ್ರೋತ್ಸವ ಆಯೋಜಿಸಲಾಗಿದೆ.
ಈ ಬಾರಿಯ ಕಿರ್ಲೋಸ್ಕರ್ ವಸುಂಧರ ಅಂತಾರಾಷ್ಡ್ರೀಯ ಚಲನಚಿತ್ರೋತ್ಸವದ ಮುಖ್ಯಾಂಶಗಳು:
ನಾಲ್ಕು ದಿನದ ಚಲನಚಿತ್ರೋತ್ಸವ ಡಿ.14ರಿಂದ 17ರವರೆಗೆ ಆನ್‌ಲೈನ್ ಮೂಲಕ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 3:30ರವರೆಗೆ ಪ್ರಸಾರವಾಗಲಿದೆ ಮತ್ತು ಮರುಪ್ರಸಾರವನ್ನು ಪ್ರತಿ ದಿನ ಸಂಜೆ 6 ರಿಂದ ರಾತ್ರಿ 10.30ರವರೆಗೆ ಪ್ರಸಾರಗೊಳ್ಳಲಿದೆ.
ಈ ವರ್ಷ ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಡ್ರೀಯ ಚಲನಚಿತ್ರೋತ್ಸವವು ಆನ್‌ಲೈನ್ ಮೂಲಕ ಉದ್ಘಾಟನಾ ಸಮಾರಂಭ, ನುರಿತ ತಜ್ಙರ ಜೊತೆ ಮಾತುಕತೆ, ಪೋಟೋ ಪ್ರದರ್ಶನ, ವಸುಂಧರಾ ಐದು (5 ಜನರಿಗೆ) ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ, ಕಾರ್ಯಾಗಾರಗಳು, ಚರ್ಚೆಗಳು ಮತ್ತು ಆಡಿಯೋ ಮೂಲಕ ಉಪನ್ಯಾಸಗಳು, ವಸುಂಧರಾ ಅಂತರಾಷ್ಟ್ರೀಯ ಆಯ್ದ ಚಲನ ಚಿತ್ರಗಳು ಮತ್ತು ಸಮಾರೋಪ ಸಮಾರಂಭ ಇತ್ಯಾದಿ ಚಟುವಟಿಕೆಗಳು ಈ ಕಾರ್ಯಕ್ರಮದಲ್ಲಿ ಒಳಗೊಂಡಿರುತ್ತವೆ.
ಈ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳನ್ನು ತಿಳಿದುಕೊಳ್ಳುವವರು ಮತ್ತು ಭಾಗವಹಿಸುವವರು ತಮ್ಮ ಸುತ್ತಲಿನ ಪ್ರಕೃತಿಯನ್ನು ಸುಧಾರಿಸುವ ವಿಧಾನಗಳೊಂದಿಗೆ ತಮ್ಮನ್ನು ತಾವು ಪರಿಚಯಿಸಿಕೊಂಡು ಭಾಗವಹಿಸಬೇಕೆಂದು ತಿಳಿಸಲಾಗಿದೆ.
ಡಾ. ಗುರುದಾಸ್ ನೂಲ್ಕರ್, ಡಾ.ರಾಜಶ್ರೀ ಜೋಶಿ, ಶ್ರೀ ಸ್ವಪ್ನಿಲ್ ಕುಂಭೋಜಕರ್, ಶ್ರೀಮತಿ ಆರತಿ ಕುಕರ್ಣಿ, ಡಾ. ಮಂದಾರ ದಾತಾರ್, ಅನಿರುದ್ಧ ಚಾವೋಜಿ, ಡಾ.ಪ್ರೀಯದರ್ಶಿನಿ ಕಾರ್ವೆ ಅವರ ಮಾರ್ಗದರ್ಶನದಲ್ಲಿ ಕೆವಿಐಎಫ್‌ಎಫ್ ಸುಮಾರು 70 ಹೊಸ ಚಲನಚಿತ್ರಗಳನ್ನು ತಯಾರಿಸಿರುತ್ತಾರೆ.
ಈ ನಾಲ್ಕು ದಿನಗಳ ಚಲನಚಿತ್ರೋತ್ಸವಕ್ಕೆ ಉಚಿತ ನೋಂದಣೆ ಮಾಡುವುದರ ಮಾಲಕ ಪ್ರವೇಶವಿರುತ್ತದೆ. ಪಾಲ್ಗೊಳ್ಳಲು ಇಚ್ಚಿಸುವ ಪರಿಸರ ಪ್ರೇಮಿಗಳು ಈ ಕೆಳಗಿನ ಲಿಂಕ್‌ಗಳನ್ನು ಬಳಸಿ ನೋಂದಾಯಿಸಿಕೊಂಡು ಭಾಗವಹಿಸಬಹುದಾಗಿದೆ.
Registration Link : https://bit.ly/kviff2021
Facebook page : facebook.com/kirloskarvasundharafilmfest
KVIFF Websit : https://kirloskarvasundharafest.in
ಪ್ರತಿ ವರ್ಷವೂ ತಮ್ಮೆಲ್ಲರ ಸಹಕಾರದಿಂದ ಕೊಪ್ಪಳ ಮತ್ತು ಹೊಸಪೇಟೆ ಭಾಗದಲ್ಲಿ ಈ ಚಲನ ಚಿತ್ರೋತ್ಸವವು ತುಂಬಾ ಯಶಸ್ವಿಯಾಗಿ ನಡೆಯುತ್ತಾ ಬಂದಿರುತ್ತದೆ. ಪರಿಸರ ಜಾಗೃತಿ ಮೂಡಿಸುವ ಈ ನಮ್ಮ ಅಲ್ಪ ಪ್ರಯತ್ನಕ್ಕೆ ತಾವು ಜೊತೆಗೂಡಬೇಕೆಂದು ಆಶಿಸುತ್ತೆವೆ. ಈ ಚಲನಚಿತ್ರೋತ್ಸವಕ್ಕೆ ವ್ಯಾಪಕ ಪ್ರಚಾರ ನೀಡಿಬೇಕೆಂದು ಕೋರುತ್ತಿದ್ದೇವೆ.
ವರದಿ: ಮುರಳೀಧರ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post