ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಿಪ್ಪನ್ ಪೇಟೆ, ಅರಸಾಲು, ಬೆಳ್ಳೂರು, ಬಾಳುರು, ಕೆಂಚನಾಳ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳ ಜೊತೆ ವಿಧಾನಪರಿಷತ್ ಅಭ್ಯರ್ಥಿ ಡಿ.ಎಸ್. ಅರುಣ್ ಅವರು ಸಭೆ ನಡೆಸಿ ಮತಯಾಚನೆ ಮಾಡಿದರು.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಹೊಸನಗರ ಮಂಡಲ ಅಧ್ಯಕ್ಷ ಗಣಪತಿ ಬೆಳಗೊಡು, ಮಂಡಲ ಪ್ರಭಾರಿ ಮೋಹನ್, ಅಭ್ಯರ್ಥಿ ಪ್ರಮುಖ್ ಎನ್.ಜೆ. ನಾಗರಾಜ್, ಜಿಲ್ಲಾ ಪ್ರಮುಖರು, ಮಂಡಲ ಪ್ರದಾನ ಕಾರ್ಯದರ್ಶಿ ಹಾಗೂ ಪ್ರಮುಖರು, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು,ಪ್ರಮುಖರು,ಚುನಾಯಿತ ಪ್ರತಿನಿಧಿಗಳು, ಪಕ್ಷದ ಪ್ರಮುಖ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ಹೊಸನಗರದಲ್ಲಿ ಮತಯಾಚನೆ:
ಹೊಸನಗರದಲ್ಲಿ, ಮುಂಬಾರು, ಎಂ. ಗುಡ್ಡೆಕೊಪ್ಪ, ಮೇಲಿನಬೇಸಿಗೆ, ಜೇನಿ ಗ್ರಾ.ಪಂ ಹಾಗೂ ಹೊಸನಗರ ಪ.ಪಂ ಸದಸ್ಯರ ಸಭೆ ನೆಡೆಸಿ, ಅಭ್ಯರ್ಥಿ ಡಿ.ಎಸ್ ಅರುಣ್ ರವರ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸ್ವಾಮಿರಾವ್, ತಾ. ಬಿಜೆಪಿ ಅಧ್ಯಕ್ಷರು, ಪ್ರಭಾರಿಗಳು, ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು, ಪಕ್ಷದ ವಿವಿಧ ಹಂತದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















