No Result
View All Result
English Articles

Record Budget: Chief Minister Must Fulfill Hometown Demands, Urges Dr. Shushrutha Gowda

by ಕಲ್ಪ ನ್ಯೂಸ್
March 2, 2026
0

Kalpa Media House  |  Mysuru | BJP leader and noted neurologist Dr. Shushrutha Gowda has urged Chief Minister Siddaramaiah to...

Read moreDetails
Hotel Management Students Participate in Tree Census

Hotel Management Students Participate in Tree Census

March 2, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
  • Advertise With Us
  • Grievances
  • About Us
  • Contact Us
Wednesday, March 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಸೇನಾ ಹೆಲಿಕಾಪ್ಟರ್ ಪಥನ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಿಧನ

ಭಾರತೀಯ ವಾಯು ಸೇನೆ ಅಧಿಕೃತ ಘೋಷಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 8, 2021
in ರಾಷ್ಟ್ರೀಯ
0
ಸೇನಾ ಹೆಲಿಕಾಪ್ಟರ್ ಪಥನ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಿಧನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಚೆನ್ನೈ  |

ಇಂದು ಮಧ್ಯಾಹ್ನ ತಮಿಳುನಾಡಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪಥನದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಿಧನರಾಗಿದ್ದಾರೆ.

ಇಲ್ಲಿನ, ಕೊಯಂಬತ್ತೂರಿನ ಸೇನಾ ಕಾಲೇಜಿನಲ್ಲಿ ಮಧ್ಯಾಹ್ನ 3 ಗಂಟೆಗೆ ಉಪನ್ಯಾಸ ನೀಡುವ ಸಲುವಾಗಿ ಬಿಪಿನ್ ರಾವತ್ ಅವರು ತಮ್ಮ ಪತ್ನಿ ಮಧುಲಿಕಾ ಹಾಗೂ 14 ಅಧಿಕಾರಿಗಳೊಂದಿಗೆ ಸೇನಾ ಹೆಲಿಕಾಪ್ಟರ್’ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಊಟಿ ಸನಿಹದ ಕೂನೂರು ಬಳಿಯಲ್ಲಿ ಹೆಲಿಕಾಪ್ಟರ್ ಪಥನಗೊಂಡಿದ್ದು, ಘಟನೆಯಲ್ಲಿ ರಾವತ್ ಬಲಿಯಾಗಿದ್ದಾರೆ.

Legends never die🙏 pic.twitter.com/RhABHoipo1

— 𝐆𝐚𝐮𝐫𝐚𝐯 (@ImGaurav137) December 8, 2021


ಘಟನೆ ನಡೆದ ಸ್ಥಳದಲ್ಲಿ ಹಲವು ಮೃತದೇಹಗಳು ಪತ್ತೆಯಾಗಿದ್ದು, ಸುಟ್ಟು ಕರಕಲಾದ ಸ್ಥಿತಿಯಲ್ಲಿವೆ ಎಂದು ವರದಿಯಾಗಿದೆ.

ಈ ಅವಘಡದ ನಂತರ ಗಾಯಾಳುಗಳಿಗೆ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಅಫಘಾತವಾಗ ಹೆಲಿಕಾಪ್ಟರ್‍ನಲ್ಲಿ ಎಲ್ಲರೂ ಮೃತರಾಗಿದ್ದಾರೆ. ಬಿಪಿನ್ ರಾವತ್ ಚೇತರಿಕೆಗೆ ಇಡೀ ದೇಶವೇ ಪ್ರಾರ್ಥಿಸುತ್ತಿತ್ತು. ಆದರೆ ಬಿಪಿನ್ ರಾವತ್ ಅವರು ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ್ದಾರೆ.

2015ರಲ್ಲಿ ಸಂಭವಿಸಿದ ನಾಗಾಲ್ಯಾಂಡ್‍ನ ದೀಮಾಪುರ್ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸ್ವಲ್ಪದ್ರಲ್ಲೇ ಪ್ರಾಣಾಪಾಯದಿಂದ ಬಿಪಿನ್ ರಾವತ್ ಪಾರಾಗಿದ್ದರು. ಆಗ ಬಿಪಿನ್ ರಾವತ್ ಲೆಫ್ಟಿನೆಂಟ್ ಜನರಲ್ ಆಗಿದ್ದರು. ದಿಮಾಪುರದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ಎಂಜಿನ್ ವೈಫಲ್ಯದಿಂದ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಪೈಲಟ್‍ಗಳು ಮತ್ತು ಕರ್ನಲ್ ಕೂಡ ಬದುಕುಳಿದಿದ್ದರು. ಆದರೆ ಇವತ್ತು ಸಂಭವಿಸಿದ ದುರಂತದಲ್ಲಿ ಬಿಪಿನ್ ರಾವತ್ ಸಾವನ್ನಪ್ಪಿದ್ದಾರೆ.

ಬಿಪಿನ್ ರಾವತ್ ಯಾರು?:
ಬಿಪಿನ್ ರಾವತ್ ಉತ್ತರಾಖಂಡನ್‍ನ ಪೌರಿಯಲ್ಲಿ 1958ರಲ್ಲಿ ಜನಿಸಿದ್ದರು. ತಂದೆ ಲಕ್ಷ್ಮಣ್ ಸಿಂಗ್, ನಿವೃತ್ತ ಲೆಫ್ಟಿನೆಂಟ್ ಜನೆರಲ್ ಆಗಿ ಸೇವೆಸಲ್ಲಿಸಿದ್ದಾರೆ. ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (2020ರ ಜನವರಿ1 ) ಭಾರತೀಯ ಸೇನೆಯ ಟಾಪ್ ಮೋಸ್ಟ್, 4 ಸ್ಟಾರ್ ಸೈನ್ಯಾಧಿಕಾರಿ, ಲಡಾಖ್ ಬಿಕ್ಕಟ್ಟಿನ ವೇಳೆ ಚೀನಾ ವಿರುದ್ಧ ವ್ಯೂಹ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ರಕ್ಷಣಾ ರಂಗದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದವರು. ತ್ರಿವಿಧ ದಳಗಳ 17 ಕಮಾಂಡ್‍ಗಳನ್ನು ಸೇರಿಸುವ ಗುರುತರ ಹೊಣೆ ಹೊತ್ತಿದ್ದರು. (ಇಂಟಿಗ್ರೇಟೆಡ್ ಥೇಟರ್ ಕಮಾಂಡ್). ತ್ರ್ರಿವಿಧ ದಳಗಳು ಮತ್ತು ಸರ್ಕಾರದ ನಡುವೆ ಕೊಂಡಿಯಂತೆ ಕೆಲಸ ಮಾಡಿದ್ದರು.

1987ರಲ್ಲಿ ಸಮ್‍ದೊರಂಗ್ ಚು ಕಣಿವೆಯಲ್ಲಿ ಚೀನಾ ಎದುರಿಸಿದ್ದ ರಾವತ್ ನೇತೃತ್ವದ ಪಡೆ, 2015ರಲ್ಲಿ ಮಯನ್ಮಾರ್ ಗಡಿಗೆ ನುಗ್ಗಿ ರಾವತ್ ನೇತೃತ್ವದ 3 ಕಾಪ್ರ್ಸ್ ಕಾರ್ಯಾಚರಣೆ ನಡೆಸಿದ್ದರು. ಬಿಪಿನ್ ಪತ್ನಿ ಮಧುಲಿಕಾ ಸೈನಿಕರ ಮಕ್ಕಳ ಅಭಿವೃದ್ಧಿಗಾಗಿ, ಸೈನಿಕರ ಶ್ರೇಯೋಭಿವೃದ್ಧಿಗಾಗಿ ಎಡಬ್ಲ್ಯೂಡಬ್ಲ್ಯೂಎ ಎನ್ನುವ ಸರ್ಕಾರೇತರ ಸಂಸ್ಥೆ ನಡೆಸ್ತಿದ್ರು. ಈ ಮೂಲಕ ಯೋಧರ ಕುಟುಂಬಗಳಿಗೆ ಮಧುಲಿಕಾ ನೆರವಿನ ಹಸ್ತ ಚಾಚಿದ್ದರು. ಯೋಧರ ಪತ್ನಿಯರಿಗೆ ಸ್ವಯಂ ಉದ್ಯೋಗದ ತರಭೇತಿ ನೀಡುತ್ತಿದ್ದರು.

ದುರಂತ ಹೇಗಾಯ್ತು?:
ದೆಹಲಿಯಿಂದ ಸೇನಾ ವಿಮಾನದಲ್ಲಿ ತಮಿಳುನಾಡಿಗೆ ಬಿಪಿನ್ ರಾವತ್ ವೆಲ್ಲಿಂಗ್ಟನ್‍ನ ಮಿಲಿಟರಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಹೊರಟಿದ್ದರು. ಸೂಳೂರಿನಿಂದ ಊಟಿಯ ವೆಲ್ಲಿಂಗ್ಟನ್‍ಗೆ ಸೇನಾ ಹೆಲಿಕಾಪ್ಟರ್‍ನಲ್ಲಿ 14 ಮಂದಿ ಪಯಣ ಆರಂಭಿಸಿದ್ದರು. ಮಧ್ಯಾಹ್ನ 12.22ಕ್ಕೆ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ವೆಲ್ಲಿಂಗ್ಟನ್‍ಗೆ ಏಳು ಕಿ.ಮೀ ದೂರದ ಕಟ್ಟೇರಿ ಪರ್ವತ ಪ್ರದೇಶದ ಟೀ ಎಸ್ಟೇಟ್‍ನಲ್ಲಿ ದೊಡ್ಡ ಶಬ್ಧದೊಂದಿಗೆ ಸೇನಾ ಹೆಲಿಕಾಪ್ಟರ್ ಪತನವಾಗಿದೆ.

ಸೇನೆ ಹೆಲಿಕಾಪ್ಟರ್‌ನಲ್ಲಿ ಇದ್ದವರು ಯಾರು?:
ಬಿಪಿನ್ ರಾವತ್, ಸಿಡಿಎಸ್, ಮಧುಲಿಕಾ ರಾವತ್, ಬಿಪಿನ್ ರಾವತ್ ಪತ್ನಿ, ಬ್ರಿಗೇಡಿಯರ್ ಎಲ್‍ಎಸ್ ಲಿದ್ದರ್ * ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿತೇಜಾ, ಹವಾಲ್ದಾರ್ ಸತ್ಪಾಲ್ ಸಿಂಗ್, ಐವರು ಸೂಳೂರಿನವರು ಹುತಾತ್ಮರಾಗಿದ್ದಾರೆ.
ಹೆಲಿಕಾಪ್ಟರ್ ವಿಶೇಷತೆ ಏನು?:
ಭಾರತೀಯ ವಾಯುಪಡೆ ಹೆಚ್ಚಾಗಿ ಬಳಸುವ ಎಂಐ-17ವಿ5 ಆಧುನಿಕ ಸಾರಿಗೆ ಹೆಲಿಕಾಪ್ಟರ್ ಆಗಿದೆ. ಪ್ರಯಾಣಿಕರು, ಸರಕು ಹಾಗೂ ವಸ್ತುಗಳನ್ನು ಸಾಗಿಸಲು ಪೂರಕವಾಗಿ ಈ ಹೆಲಿಕಾಪ್ಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಯುದ್ಧತಂತ್ರದ ವಾಯುಪಡೆ ಹಾಗೂ ಸೈನಿಕರ ತಂಡಗಳನ್ನು ಸಾಗಿಸಿ ಯಾವುದೇ ಸ್ಥಳದಲ್ಲೂ ಅವರನ್ನು ಇಳಿಸುವ ಸಾಮಥ್ರ್ಯವನ್ನು ಈ ಹೆಲಿಕಾಪ್ಟರ್ ಹೊಂದಿದೆ. ಆಧುನಿಕ ಏವಿಯಾನಿಕ್ಸ್ ನೊಂದಿಗೆ ಸಜ್ಜುಗೊಂಡಿರುವ ಎಂಐ-17ವಿ5 ಹೆಲಿಕಾಪ್ಟರ್ ಯಾವುದೇ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿ, ಹಗಲು-ರಾತ್ರಿ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದೆ. ಸೋವಿಯತ್ ರಾಷ್ಟ್ರ ರಷ್ಯಾ ವಿನ್ಯಾಸಗೊಳಿಸಿರುವ ಹೆಲಿಕಾಪ್ಟರ್ ಇದಾಗಿದೆ. ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ನಿಗದಿತವಲ್ಲದ ಪ್ರದೇಶಗಳಲ್ಲೂ ಲ್ಯಾಂಡಿಂಗ್ ಆಗುವ ಸಾಮಥ್ರ್ಯವನ್ನು ಹೊಂದಿದೆ. ಸುಮಾರು 1,300 ಕೆಜಿಯಷ್ಟು ತೂಕದ ವಸ್ತುಗಳನ್ನು ಹೊತ್ತು ಸಾಗಿಸಲು ಸಮರ್ಥವಾಗಿದೆ. ಅಲ್ಲದೇ ಗಂಟೆಗೆ ಸುಮಾರು 250 ಕಿ.ಮೀ.ನಷ್ಟು ವೇಗವಾಗಿ ಹಾರುವ ಸಾಮಥ್ರ್ಯವನ್ನು ಹೊಂದಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Army Helicopter CrashBipin RawathChennaiKannada NewsKannada News LiveKannada News OnlineKannada News WebsiteKannada WebsiteLatest News KannadaNational NewsNews in KannadaNews KannadaTamilNaduಚೆನ್ನೈಬಿಪಿನ್ ರಾವತ್ಸೇನಾ ಹೆಲಿಕಾಪ್ಟರ್ ಪಥನ
Share197Tweet123Send
Previous Post

ಗಮನಿಸಿ! ಡಿ.9ರಂದು ಶಿವಮೊಗ್ಗದ ಮಂಡ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ

Next Post

ಭದ್ರಾವತಿಯ 24 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೋನಾ: ಹಾಸ್ಟೆಲ್ ಸೀಲ್‌ಡೌನ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭದ್ರಾವತಿಯ 24 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೋನಾ: ಹಾಸ್ಟೆಲ್ ಸೀಲ್‌ಡೌನ್

ಭದ್ರಾವತಿಯ 24 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೋನಾ: ಹಾಸ್ಟೆಲ್ ಸೀಲ್‌ಡೌನ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಯುವತಿಗೆ ಉಪಟಳ | ಅಕ್ಕ ಪಡೆ ಸಿಬ್ಬಂದಿಯಿಂದ ಆರೋಪಿ ವಶಕ್ಕೆ | ಪ್ರಕರಣ ದಾಖಲು

ಯುವತಿಗೆ ಉಪಟಳ | ಅಕ್ಕ ಪಡೆ ಸಿಬ್ಬಂದಿಯಿಂದ ಆರೋಪಿ ವಶಕ್ಕೆ | ಪ್ರಕರಣ ದಾಖಲು

March 4, 2026
​ಹುಬ್ಬಳ್ಳಿ | ಬಂಜಾರ ಕಾಲೋನಿಯಲ್ಲಿ ಸಡಗರದ ಹೋಳಿ ಆಚರಣೆ

​ಹುಬ್ಬಳ್ಳಿ | ಬಂಜಾರ ಕಾಲೋನಿಯಲ್ಲಿ ಸಡಗರದ ಹೋಳಿ ಆಚರಣೆ

March 4, 2026
ಬಿಜೆಪಿ ಮುಖಂಡ ಸತೀಶ್ ಪ್ರಭು ನಿಧನಕ್ಕೆ ಸಂಸದ ಕ್ಯಾ. ಚೌಟ ಸಂತಾಪ

ಬಿಜೆಪಿ ಮುಖಂಡ ಸತೀಶ್ ಪ್ರಭು ನಿಧನಕ್ಕೆ ಸಂಸದ ಕ್ಯಾ. ಚೌಟ ಸಂತಾಪ

March 4, 2026
ಡಿಸೆಂಬರ್ ನಲ್ಲಿ ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಲೋಕಾರ್ಪಣೆ: ಐಕಳ ಹರೀಶ್ ಶೆಟ್ಟಿ

ಡಿಸೆಂಬರ್ ನಲ್ಲಿ ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಲೋಕಾರ್ಪಣೆ: ಐಕಳ ಹರೀಶ್ ಶೆಟ್ಟಿ

March 4, 2026
ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರದೊಂದಿಗೆ ಮಾತುಕತೆ: ವಿಜಯೇಂದ್ರ ಭರವಸೆ

ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರದೊಂದಿಗೆ ಮಾತುಕತೆ: ವಿಜಯೇಂದ್ರ ಭರವಸೆ

March 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL