ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಕ್ರೂಸರ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಗೋಪನಹಳ್ಳಿ ಗರಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೀರಸಾಬಿಹಳ್ಳಿ ಗ್ರಾಮದ ರಾಜಣ್ಣ (50) ಮತ್ತು ಅದೇ ಗ್ರಾಮದ ಬೋಜ (24) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕ್ರೂಸರ್‌ನಲ್ಲಿದ್ದ ಬಳ್ಳಾರಿಯ ಕೌಲ್ ಬಜಾರ್ ನಿವಾಸಿಗಳಾದ ಗಣೇಶ್, ವೆಂಕಟೇಶ್, ಈಶ್ವರಿ, ಶ್ಯಾಮಲ, ನಿತೀನ್, ಕೀರ್ತಿ ಗಾಯಗೊಂಡಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಾಗಿದೆ.

ಮೃತ ರಾಜಣ್ಣ ಅವರ ಅಣ್ಣನ ಮಗಳ ವಿವಾಹ ಗುರುವಾರ ಹಾಲುರಾಮೇಶ್ವರದಲ್ಲಿ ನಿಗದಿಯಾಗಿತ್ತು ಹೀಗಾಗಿ ಬುಧವಾರ ರಾತ್ರಿ ಖಾಸಗಿ ಬಸ್ಸ್‌ನಲ್ಲಿ ಗ್ರಾಮಸ್ಥರೆಲ್ಲರನ್ನೂ ಮದುವೆಗೆ ಕಳುಹಿಸಿ, ತಾವು ಭೋಜ ಎನ್ನುವವರ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಧರ್ಮಸ್ಥಳದಿಂದ ಬಳ್ಳಾರಿಗೆ ತೆರಳುತ್ತಿದ್ದ ಕ್ರೂಸರ್ ವಾಹನ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಮೃತ ರಾಜಣ್ಣ ಪತ್ನಿ ಮೂವರು ಪುತ್ರಿಯರು ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ. ಈ ಘಟನೆಯಿಂದ ಸುಮಾರು ಒಂದು ಗಂಟೆ ಮುಖ್ಯ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಚಳ್ಳಕೆರೆ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ, ಸಾಣಿಕೆರೆ ಎಎಸ್‌ಐ ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ, ಅಪಘಾತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















