ಕಲ್ಪ ಮೀಡಿಯಾ ಹೌಸ್ | ಸೊರಬ |
ಕುಡಿದ ಅಮಲಿನಲ್ಲಿ ಬಸ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ಸಂಜೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ನಡೆದಿದೆ.
ಆನವಟ್ಟಿಯಿಂದ ಸೊರಬಕ್ಕೆ ತೆರಳಬೇಕಿದ್ದ ಖಾಸಗಿ ಬಸ್ ಚಾಲಕ ಮದ್ಯ ಸೇವಿಸಿ ಚಾಲನೆ ಮಾಡುತ್ತಿದ್ದನ್ನು ಪ್ರಯಾಣಿಕರು ಗಮನಿಸಿದ್ದಾರೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡುತ್ತಿದ್ದ ಚಾಲಕನನ್ನು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಏಕಾಏಕಿ ಕುಪ್ಪಗಡ್ಡೆ ಸಮೀಪಿಸುತ್ತಿದ್ದಂತೆ ರಸ್ತೆ ಮಧ್ಯೆದಲ್ಲೆ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಘಟನೆ ನಡೆದ ಕೆಲ ಸಮಯದಲ್ಲೆ ಕುಪ್ಪಗಡ್ಡೆ ಹಾಗೂ ಗೆಂಡ್ಲ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ನಿರ್ವಾಹಕನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ ಬಿಟ್ಟು ಪರಾರಿಯಾದ ಚಾಲಕ ಹಾಗೂ ಬಸ್ ಮಾಲೀಕನ ವಿರುದ್ದ ಹಿಡಿಶಾಪ ಹಾಕಿದ್ದಾರೆ. ಇಂತಹ ಚಾಲಕನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ತಪ್ಪಿದ ಭಾರಿ ಅನಾಹುತ
ಹಾನಗಲ್ ತಾಲೂಕಿನ ತಿಳುವಳ್ಳಿಯಿಂದ ಶಿವಮೊಗ್ಗ ತೆರಳುತ್ತಿದ್ದ ಬಸ್ ಚಾಲಕನ ಎಡವಟ್ಟಿನಿಂದ ಭಾರಿ ಅನಾಹುತ ಸಂಭವಸಿತ್ತಿತ್ತು. ಆನವಟ್ಟಿ-ಸೊರಬ ಮಾರ್ಗ ಕಲ್ಪಿಸೋ ರಸ್ತೆಯಲ್ಲಿ ಹಲವು ಕಿರಿದಾದ ಸೇತುವೆಗಳು ಹಾಗೂ ತಿರುವುಗಳು ಇವೆ. ಅಲ್ಲದೆ ಸಂಜೆ 5 ರ ಹೊತ್ತಿಗೆ ಆನವಟ್ಟಿಯಿಂದ ಹೊರಡುವ ಬಸ್ ನಲ್ಲಿ ಹೆಚ್ಚಾಗಿ ವಿಧ್ಯಾರ್ಥಿಗಳು ಇದ್ದರು ಎನ್ನಲಾಗುತ್ತಿದೆ. ಅಲ್ಲದೆ ಹಾಯ ಗ್ರಾಮದ ಸಮೀಪವಿರುವ ಸೇತುವೆಯ ಕಾಮಗಾರಿ ಕೂಡ ನಡೆಯುತ್ತಿದ್ದು, ಸೇತುವೆ ಕಿರಿದಾಗಿದೆ. ಆ ಜಾಗದಲ್ಲಿ ಹೆಚ್ಚಾಗಿ ಅವಘಡ ಸಂಭವಿಸಿದ ನಿದರ್ಶನಗಳಿವೆ. ಇನ್ನು ಈ ಮಾರ್ಗ ಮಧ್ಯೆ ಹಲವು ತಿರುವುಗಳಿದ್ದು, ಸಂಭವಿಸಬೇಕಿದ್ದ ಅವಘಡ ತಪ್ಪಿದಂತಾಗಿದೆ.
ಪೊಲೀಸ್ ಇಲಾಖೆ ಗಮನಹರಿಸಬೇಕಿದೆ
ಅವಘಡ ಸಂಭವಿಸುವ ಮುಂಚೆ ಎಚ್ಚರ ವಹಿಸದರೆ ಒಳಿತು. ಬೈಕ್ ಸೇರಿದಂತೆ ಸ್ವಂತ ವಾಹನಗಳನ್ನು ಚಾಲನೆ ಮಾಡೋ ಅದೆಷ್ಟೋ ಚಾಲಕರನ್ನು ಪೊಲೀಸರು ಪರಿಶೀಲನೆ ಮಾಡುವುದೇನೋ ಸರಿ. ಆದರೆ ನೂರಾರು ಪ್ರಯಾಣಿಕರು ಪ್ರಯಾಣಿಸೋ ಬಸ್ ಚಾಲಕನನ್ನು ಪರಿಶೀಲನೆ ಮಾಡುವುದು ಮರೆತಂತಿದೆ. ಇನ್ನಾದ್ರು ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post