ಬೆಂಗಳೂರು: ಅ:24: ಹಿಂದೂ ನಾಯಕರ ಮೇಲೆ ಪದೇ ಪದೇ ದಾಳಿ ನಡೆಯುತ್ತಿದ್ದು, ಕಳೆದ 8 ದಿನದಲ್ಲೇ ಮತ್ತೋರ್ವ ಹಿಂದೂ ಕಾರ್ಯಕರ್ತನನ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ, ಬಿಜೆಪಿ ತನಿಖೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಬೆಂಗಳೂರಿನಲ್ಲಿ ರುದ್ರೇಶ್ ಕೊಲೆ ನಡೆದ 8 ದಿನದಲ್ಲೇ ಮಂಗಳೂರಿನಲ್ಲಿ ಭಾನುವಾರ ಯುವಕ ಕಾರ್ತಿಕ್ ರಾಜ್ ಅವರ ಹತ್ಯೆ ನಡೆದಿದ್ದು, ಇದೊಂದು ವ್ಯವಸ್ಥಿತ ಸಂಚಾಗಿದ್ದು, ಈ ಹತ್ಯೆಗಳೆಲ್ಲವೂ ಒಂದೇ ಮಾದರಿಯಲ್ಲಿ ಘಟಿಸುತ್ತಿವೆ. ಈ ಹಿಂದೆಯೂ ನಾನು ಈ ಕುರಿತಾಗಿ ಹೇಳಿದ್ದು ಇದೀಗ ಭಾನುವಾರ ನಡೆದ ಕಾರ್ತಿಕ್ ರಾಜ್ ಹತ್ಯೆಯು ನನ್ನ ಹೇಳಿಕೆಯನ್ನು ಮತ್ತಷ್ಟು ಪುಷ್ಟೀಕರಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಇತರ ಹತ್ಯೆಗಳಂತೆಯೇ ದುಷ್ಕರ್ಮಿಗಳು ಕಾರ್ತಿಕ್ ರಾಜ್ ಮೇಲೆ ಹಿಂದಿನಿಂದ ದಾಳಿ ನಡೆಸಿದ್ದಾರೆ. ಅಲ್ಲದೇ ಇದಕ್ಕೆ ಖಡ್ಗ ಬಳಕೆಯಾಗಿದೆ. ದುಷ್ಕರ್ಮಿಗಳು ದ್ವಿಚಕ್ರವಾಹನದಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಇಬ್ಬರು ದುಷ್ಕರ್ಮಿಗಳೂ ಪತ್ತೆಯಾಗಬಾರದು ಎನ್ನುವ ಕಾರಣಕ್ಕೆ ಮುಖವನ್ನು ಹೆಲ್ಮೆಟ್ ಮತ್ತು ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದರು. ಬೆಂಗಳೂರಿನ ಕಾಮರಾಜ್ ರಸ್ತೆಯಲ್ಲಿ ನಡೆದ ಶ್ರೀ ರುದ್ರೇಶ್ ಅವರ ಹತ್ಯೆಯಲ್ಲೂ ಇದೇ ರೀತಿಯ ವ್ಯವಸ್ಥಿತ ಸಂಚು ಇತ್ತು. ಈ ಹಿಂದಿನ ಬಹುತೇಕ ಎಲ್ಲಾ ಕೃತ್ಯಗಳಲ್ಲೂ ಒಂದೇ ರೀತಿಯ ತಂತ್ರವನ್ನು ಅನುಸರಿಸಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣಗಳನ್ನು ಗಮನಿಸಿದರೆ ಇವೆಲ್ಲದರ ಹಿಂದೆ ಒಂದೇ ಸಂಸ್ಥೆಗೆ ಸೇರಿದ ಶಕ್ತಿಗಳು ಷಾಮೀಲಾದಂತೆ ಕಾಣುತ್ತಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ಈ ಕೃತ್ಯಗಳ ಹಿಂದೆ ಇರುವುದು ಸ್ಪಷ್ಟ. ಆದರೆ ರಾಜ್ಯ ಸರ್ಕಾರ ಇಂತಹ ಸಂಸ್ಥೆಗಳ ಬಗ್ಗೆ ಮೃದು ಧೋರಣೆ ತಳೆದಿರುವುದೇ ಹತ್ಯಾ ಸರಣಿ ಮುಂದುವರಿಯಲು ಕಾರಣವಾಗಿದೆ.
ಕಾರ್ತಿಕ್ ರಾಜ್ ಅವರ ಹತ್ಯೆ ಪ್ರಕರಣವನ್ನು ಒಂದು ಮಾಮೂಲಿ ರಸ್ತೆ ಅಪಘಾತವೆಂದು ಬಿಂಬಿಸಲು ಮಂಗಳೂರು ಪೊಲೀಸರು ಯತ್ನಿಸಿದ್ದು ಇದು ಖಂಡನಾರ್ಹ. ಕಾಂಗ್ರೆಸ್ ಸರ್ಕಾರವನ್ನು ವೈಫಲ್ಯಗಳಿಂದ ರಕ್ಷಿಸಲು ಪೊಲೀಸರೂ ಹೇಗೆ ವರ್ತಿಸುತ್ತಿದ್ದಾರೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ. ಗೃಹ ಸಚಿವರು ಈ ಬಗ್ಗೆ ಜಾಣ ಮೌನ ವಹಿಸಿರುವುದು ತಾಳ್ಮೆಗೆಡಿಸಿದೆ, ಶೀಘ್ರದಲ್ಲೇ ಈ ಬಗೆಗ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
==















