ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಚಿತ್ರರಂಗದ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್’ನ ಟೀಸರ್ ಇಂದು ಹೊರಗಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈಲರ್ ಆಗಿದೆ.
ಪಿಆರ್’ಕೆ ಪ್ರೊಡಕ್ಷನ್ ಯೂಟ್ಯೂಬ್ ಚಾನಲ್’ನಲ್ಲಿ ಇಂದು ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ರಾಜ್ಯದಾದ್ಯಂತ ಭಾರೀ ಸದ್ದು ಮಾಡುತ್ತಿದೆ.
ಪುನೀತ್’ಗೆ ಶಿವಣ್ಣ ವಾಯ್ಸ್ ನೀಡಿರುವ ‘ನಂಗೆ ಮೊದಲಿಂದಾನು ರೆಕಾರ್ಡ್ ಬ್ರೇಕ್ ಮಾಡಿನೇ ಅಭ್ಯಾಸ’ ಡೈಲಾಗ್ ಟೀಸರ್’ನಲ್ಲಿದ್ದು, ಪವರ್’ಫುಲ್ ಆಗಿ ಬಂದಿದೆ.
ಅಪ್ಪು ಅಭಿನಯದ ಕೊನೆ ಸಿನಿಮಾ ಜೇಮ್ಸ್ ಬಗ್ಗೆ ನಿರೀಕ್ಷೆಗಳು ಬಹಳಷ್ಟಿವೆ. ಅಭಿಮಾನಿಗಳು ಕೊನೆಯ ಬಾರಿ ಪುನೀತ್ ಅವರನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.
ಪುನೀತ್ ಹುಟ್ಟುಹಬ್ಬದ ದಿನವಾದ ಮಾರ್ಚ್ 17ರಂದು ಜೇಮ್ಸ್ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post