ಇಸ್ಲಾಮಾಬಾದ್, ಅ.28: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪದಿಂದಾಗಿ ಜಾಗತಿಕ ಮಟ್ಟದಲ್ಲಿ ಹಲವು ಬಾರಿ ಅವಮಾನ ಅನುಭವಿಸಿರುವ ಪಾಕಿಸ್ಥಾನಕ್ಕೆ ಅಲ್ಲಿನ ಮಾಜಿ ಅಧ್ಯಕ್ಷ ಮತ್ತೊಮ್ಮೆ ಅವಮಾನ ಮಾಡಿದ್ದಾರೆ.
ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಕುರಿತಂತೆ ಮಾತನಾಡಿರುವ ಅವರು, ಜೈಶ್ ಎ ಮೊಹಮದ್ ಸಂಘಟನೆಯ ಮುಖ್ಯಸ್ಥ ಮುಸೂದ್ ಅಜರ್ ಓರ್ವ ಅಪಾಯಕಾರಿ ಉಗ್ರನಾಗಿದ್ದು, ನಮ್ಮ ದೇಶದಲ್ಲಿಯೂ ನಡೆದ ಸ್ಫೋಟ ಸೇರಿದಂತೆ ಹಲವು ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಸೂದ್‌ನಲ್ಲಿ ಅಂತರ‌್ರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವಂತೆ ವಿಶ್ವಸಂಸ್ಥೆಗೆ ಒತ್ತಾಯಿಸಲಾಗಿರುವ ಪ್ರಸ್ತಾಪಕ್ಕೆ ಚೀನಾ ಬೆಂಬಲ ನೀಡದೇ ಇರುವ ವಿಚಾರದಲ್ಲಿ ಮುಷ್ರಫ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಆದರೆ, ಚೀನಾ ವಿಚಾರದಲ್ಲಿ ಯಾವುದೇ ಘಟನೆಯಲ್ಲಿ ಸಂಬಂಧ ಪಡೆದೇ ಇರುವ ಹಿನ್ನೆಲೆಯಲ್ಲಿ ಮಸೂದ್ ಕುರಿತಾಗಿ ಚೀನಾ ಏಕೆ ಪ್ರತಿಕ್ರಿಯೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.
ಉಗ್ರ ಮಸೂದ್‌ನಲ್ಲಿ ಅಂತರ‌್ರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂಬ ಪ್ರಸ್ತಾವನೆ ವಿಶ್ವಸಂಸ್ಥೆ ಭದ್ರತಾ ಮಂಡಳಯ ಮುಂದೆ ಬಾಕಿ ಉಳಿದಿದ್ದು, ಈ ಕುರಿತಂತೆ ಎಲ್ಲ ರಾಷ್ಟ್ರಗಳು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿತ್ತು. ಈ ವಿಚಾರದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದ ಚೀನಾ, ಮಸೂದ್‌ನಲ್ಲಿ ಭಯೋತ್ಪಾದಕ ಎಂದು ಸಾಬೀತು ಮಾಡಲು ಯಾವುದೇ ರೀತಿಯ ನಿಖರ ಸಾಕ್ಷಿಗಳಿಲ್ಲ ಹಾಗೂ ಈಗ ಹೇಳಲಾಗಿರುವ ಸಾಕ್ಷಿಗಳಿಂದ ಅದನ್ನು ಸಾಬೀತುಮಾಡಲು ಸಾಧ್ಯವಿಲ್ಲ ಎಂದು ತಕರಾರು ತೆಗೆದಿದೆ.
ಪಾಕಿಸ್ಥಾನ ಸರ್ಕಾರದ ವಿಚಾರದಲ್ಲಿ ಮಾತನಾಡಿರುವ ಮುಷ್ರಫ್, ಪಾಕ್ ಸರ್ಕಾರ ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ವಿಚಾರವನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಹಾಗೆಂದು ಪಾಕ್ ವಿಚಾರದಲ್ಲಿ ಟೇಕನ್ ಫಾರ್ ಗ್ರಾಂಟೆಡ್ ಆಗುವ ಹಾಗಿಲ್ಲ ಎಂದಿದ್ದಾರೆ.
ಪಾಕಿಸ್ಥಾನದ ಹಿತ ಹಾಗೂ ಅಭಿವೃದ್ಧಿ ದೃಷ್ಠಿಯಿಂದ ದೇಶದಲ್ಲಿ ಸೇನಾಡಳಿತ ಜಾರಿಯಲ್ಲಿದ್ದರೆ ಒಳ್ಳೆಯದು ಎಂದಿರುವ ಮುಷ್ರಫ್, ಪಾಕ್‌ನಲ್ಲಿ ಸೇನಾಡಳಿತ ಜಾರಿಯಲ್ಲಿದ್ದಾಗ ಅಭಿವೃದ್ಧಿ ಹೊಂದಿದ್ದನ್ನು ಗಮನಿಸಬಹುದು ಎಂದಿದ್ದಾರೆ.
11-Year-Old Mysuru Girl Writes Children’s Ramayana in Just 15 Days
Kalpa Media House | Mysuru | In a remarkable literary achievement, an 11-year-old girl from Mysuru has written a 36-page...
Read moreDetails




