ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ Uttara Pradesha Vidhana Sabha Election ಮತ ಎಣಿಕೆ ನಡೆಯುತ್ತಿದ್ದು ಆರಂಭಿಕ ಹಂತದಿಂದಲೇ ಭಾರೀ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿಯ ಅಬ್ಬರದ ಮುಂದೆ ಕಾಂಗ್ರೆಸ್’ನ ಪ್ರಿಯಾಂಕಾ ವಾದ್ರಾ ಅವರ ತಂತ್ರಗಾರಿಕೆ ಅಡ್ಡಡ್ಡ ಮಲಗಿದೆ.
11.30ರ ವೇಳೆಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ 263 ಸ್ಥಾನಗಳಿಂದ ಮುನ್ನಡೆ ಸಾಧಿಸಿದ್ದರೆ, ಎಸ್’ಪಿ 123 ಸ್ಥಾನ ಪಡೆದು ಎರಡನೆಯ ಸ್ಥಾನದಲ್ಲಿದ್ದು, ಕಾಂಗ್ರೆಸ್ 6 ಸ್ಥಾನಗಳಿಂದ ಹೀನಾಯವಾಗಿ ಹಿನ್ನಡೆ ಅನುಭವಿಸಿದ್ದು, ಬಿಎಸ್’ಪಿ 7 ಹಾಗೂ ಇತರೆ 1 ಸ್ಥಾನಗಳಲ್ಲಿದೆ.
Also read: ಉತ್ತರ ಪ್ರದೇಶದಲ್ಲಿ ಅಡ್ಡಡ್ಡ ಮಲಗಿದ ಪ್ರಿಯಾಂಕಾ ವಾದ್ರಾ ತಂತ್ರಗಾರಿಕೆ
ಈ ಬಾರಿಯ ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವದೊಂದಿಗೆ ಹೈಕಮಾಂಡ್ ನಾಯಕತ್ವದ ತಂತ್ರಗಾರಿಕೆ ಹೆಣೆದಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ Priyanka Gandhi Vadra ಅವರ ಐಡಿಯಾ ಮುಗ್ಗರಿಸಿ ಬಿದ್ದಿದ್ದು, ಈ ಮೂಲಕ ಕೈ ಪಕ್ಷ ಭಾರೀ ಮುಖಭಂಗ ಅನುಭವಿಸಿದೆ. ಇಡಿಯ ರಾಜ್ಯದಲ್ಲಿ ನಿರಂತರವಾಗಿ ಪ್ರಚಾರ ನಡೆಸಿದರೂ ಅಲ್ಲಿನ ಮತದಾರ ಇವರ ಕೈ ಬಿಟ್ಟಿರುವುದು ಕಾಂಗ್ರೆಸ್ ಪಾಳಯಕ್ಕೆ ಭಾರೀ ಆಘಾತ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post