ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಶಿವಮೊಗ್ಗ ಜಿಲ್ಲಾ ಪಂಚಾಯತ್ Shivamogga ZP ಕಾರ್ಯಕ್ರಮಕ್ಕಾಗಿ ಜಿಲ್ಲೆಯ ಹೊಳಲೂರಿಗೆ ಪ್ರಧಾನಿ ಮೋದಿ PM Modi ಬರ್ತಾರೆ ಎಂದು ಕಳೆದ ಒಂದೂವರೆ ತಿಂಗಳಿನಿಂದ ಭಾರೀ ತಯಾರಿ ಮಾಡಿಕೊಳ್ಳುತ್ತಿದ್ದ ಜಿಲ್ಲಾಡಳಿತ ಕನಸಿಗೆ ತಣ್ಣೀರು ಬಿದ್ದಿದೆ.
ಪ್ರಧಾನಿ ಮೋದಿ ಅವರು ಬರುವ ಏಪ್ರಿಲ್ 24 ರಂದು ಹೊಳಲೂರಿಗೆ ಬರುವ ಕಾರ್ಯಕ್ರಮ ನಿಗಧಿಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಕೆಎಸ್ ಈಶ್ವರಪ್ಪ, Minister Eshwarappa ಸಂಸದ ಬಿವೈ ರಾಘವೇಂದ್ರ MP B Y Raghavendra ನೇತೃತ್ವದಲ್ಲಿ ಜಿ.ಪಂ ಹಾಗೂ ಜಿಲ್ಲಾಡಳಿತವು ಹಗಲಿರುಳು ಎನ್ನದೇ ಹೊಳಲೂರಿನ ಸೌಂದರ್ಯವರ್ಧನೆಗೆ ಪೂರಕ ಕಾರ್ಯಕ್ರಮ ನಡೆಸುತ್ತಿತ್ತು.
ಗ್ರಾಮದ ಮುಖ್ಯರಸ್ತೆ ಅಗಲೀಕರಣ, ಶಾಲೆ, ಗ್ರಾಮಪಂಚಾಯಿತಿ ಮತ್ತಿತರೆ ಸರ್ಕಾರಿ ಕಟ್ಟಡಗಳಿಗೆ ಬಣ್ಣದ ಅಲಂಕಾರ ನೀಡಲಾಗುತ್ತಿತ್ತು.
ಹಾಗೇಯೆ, ಕಾರ್ಯಕ್ರಮ ನಡೆಯುವ ಸ್ಥಳ, ಪಾರ್ಕಿಂಗ್ ಜಾಗ ಗುರುತಿಸಿ ಅದನ್ನು ಸಿದ್ದ ಮಾಡಲಾಗುತ್ತಿತ್ತು.
ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಭೇಟಿ ರದ್ದು ಮಾಡಿ ಹೊರಟಿರುವುದು ಕಾಶ್ಮೀರಕ್ಕೆ. ಇದು ಪ್ರಧಾನಿ ಮನಸಿನ ನಿರ್ಧಾರ ಎನ್ನಲಾಗಿದೆ. ಅವರಿಗೆ ಹಾಗೂ ಅವರ ಕೇಂದ್ರದ ಆಡಳಿತಕ್ಕೆ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದ ಮೇಲಿನ ನಂಬಿಕೆ ಜಾಸ್ತಿ ಎನ್ನಲಾಗಿದೆ.
Also read: ಪಾವಗಡ ಬಳಿ ಭೀಕರ ಅಪಘಾತ, 15ಕ್ಕೂ ಅಧಿಕ ಸಾವು: ರಸ್ತೆ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿವೆ ಹೆಣಗಳು
ಏಪ್ರಿಲ್ 24ರಂದು ಶಿವಮೊಗ್ಗದ ಹೊಳಲೂರು ಗ್ರಾಮ ಪಂಚಾಯಿತಿಗೆ ಪ್ರಧಾನಿ ಮೋದಿ ಭೇಟಿ ನೀಡಬೇಕಾಗಿತ್ತು. ಈ ಗ್ರಾಮ ಸುವರ್ಣ ಗ್ರಾಮ ಯೋಜನೆಯಡಿ ಪ್ರಶಸ್ತಿ ಪಡೆದಿತ್ತು. ಇಲ್ಲಿಗ ಪ್ರಧಾನಿ ಬರುವ ಬಗ್ಗೆ ಗ್ರಾಮಸ್ಥರು ಭಾರಿ ಸಂತಸದಲ್ಲಿದ್ದರು. ಆದರೆ ಪ್ರಧಾನಿ ಧಿಡೀರ್ ಪ್ರವಾಸ ರದ್ದು ಮಾಡಿರುವುದರಿಂದ ಇಲ್ಲಿನ ಜನತೆ ನಿರಾಶೆ ಹೊಂದಿದ್ದಾರೆ. ಕೊನೆ ಕ್ಷಣದಲ್ಲಿ ಪ್ರಧಾನಿ ಕಾಶ್ಮೀರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post