ಕಲ್ಪ ಮೀಡಿಯಾ ಹೌಸ್ | ಉಡುಪಿ |
ಶಾಂತಿ, ಸಹಬಾಳ್ವೆಯ ಮಾತುಗಳು ಕೇವಲ ಮಾತಿನಲ್ಲಿದ್ದರೆ ಪ್ರಯೋಜನವಿಲ್ಲ. ಅದು ಕೃತಿಯಲ್ಲಿರಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು Shri Vishwaprasanna thirtha Shripadamgal ಹೇಳಿದ್ದಾರೆ.
ಮುಸ್ಲಿಂ ವ್ಯಾಪಾರಿಗಳಿಗೆ ದೇವಾಲಯಗಳ ಬಳಿಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಸ್ಲಿಂ ಮುಖಂಡರು ತಮ್ಮನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಹಿಂದೂ ಸಮಾಜದ ಮೇಲೆ ವಿವಿಧ ರೀತಿಯಲ್ಲಿ ನಿರಂತರವಾಗಿ ಅನ್ಯಾಯ ನಡೆಯುತ್ತಿದ್ದು, ಇದನ್ನು ಬಹಳಷ್ಟು ಸಹಿಸಿಕೊಳ್ಳಲಾಗಿದೆ. ನಿರಂತರವಾಗಿ ನಡೆಯುತ್ತಿರುವ ಅನ್ಯಾಯದಿಂದ ನೊಂದಿರುವ ಹಿಂದೂ ಸಮಾಜ ಈಗ ಸ್ಪೋಟಗೊಂಡಿದ್ದು, ಅದರ ಪ್ರತಿಫಲನವಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದರು.
Also read: ಕೇಸರಿ ಸಂತನ ಭಯ! ಉತ್ತರ ಪ್ರದೇಶದಲ್ಲಿ ಒಂದೇ ವಾರದಲ್ಲಿ ಶರಣಾದ ಕ್ರಿಮಿನಲ್’ಗಳ ಸಂಖ್ಯೆ ಎಷ್ಟು ಗೊತ್ತಾ?
ನಮ್ಮ ಸಮಾಜದಲ್ಲಿ ಶಾಂತಿ-ಸಹಬಾಳ್ವೆ ಮೊದಲಿನಿಂದಲೂ ಇದೆ. ಆದರೆ, ಇದು ಕೆಲವರಿಂದ ಕದಡುತ್ತಿದ್ದು, ಇದರ ಸರಿಯಾಗಬೇಕಿದೆ. ಶಾಂತಿ ಹಾಗೂ ಸಹಬಾಳ್ವೆ ಎನ್ನುವುದನ್ನು ಕೇವಲ ಮಾತಿನಲ್ಲಿ ಹೇಳಿದರೆ ಸಾಲದು. ಬದಲಾಗಿ ಅದನ್ನು ಕೃತಿಯಲ್ಲಿ ತಂದಾಗ ಮಾತ್ರ ಎಲ್ಲವೂ ಸರಿ ಹೋಗುತ್ತದೆ ಎಂದು ಸೂಕ್ಷ್ಮವಾಗಿ ಹೇಳಿದರು.
ಇದಕ್ಕೂ ಮುನ್ನ ಪೇಜಾವರ ಶ್ರೀಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿ ಚರ್ಚೆ ನಡೆಸಿದ ಮುಸ್ಲಿಂ ಮುಖಂಡರು, ಈಗಾಗಲೇ ಜಾತ್ರೆಗಳಲ್ಲಿ ನಮಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಲ್ಲ. ಈಗ ದೇವಾಲಯಗಳ ಬಳಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post