ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶ್ರೀರಾಮ ನವಮಿಯನ್ನು ನಗರದ ವಿವಿಧೆಡೆ ಅದ್ದೂರಿಯಾಗಿ ಆಚರಿಸಿ, ಮರ್ಯಾದಾ ಪುರುಷೋತ್ತಮನ ಆದರ್ಶಗಳನ್ನು ಕೊಂಡಾಡಲಾಯಿತು.
Also Read: ಸ್ವತಃ ಪೊರಕೆ ಹಿಡಿದು ಹುಚ್ಚರಾಯ ಸ್ವಾಮಿ ದೇವಾಲಯ ಆವರಣ ಸ್ವಚ್ಛಗೊಳಿಸಿದ ಸಂಸದ ರಾಘವೇಂದ್ರ
ಹಳೇನಗರದ ಶ್ರೀರಾಮೇಶ್ವರ-ಸುಬ್ರಹ್ಮಣ್ಯ ದೇವಾಲಯದಲ್ಲಿ ಶ್ರೀರಾಮ, ಈಶ್ವರ ಹಾಗೂ ಸುಬ್ರಹ್ಮಣ್ಯ ದೇವರಿಗೆ ಅಭಿಷೇಕ ನಡೆಸಲಾಯಿತು. ಆನಂತರ ಶ್ರೀರಾಮನ ರಾಜಬೀದಿ ಉತ್ಸವ ನಡೆಸಲಾಯಿತು. ಆನಂತರ ಭಕ್ತಾದಿಗಳಿಗೆ ಪಾನಕ ಕೋಸಂಬರಿ ವಿತರಿಸಲಾಯಿತು.
ಅಧ್ಯಕ್ಷರಾದ ಆನಂದ್ ರಾವ್, ಸಿ.ಕೆ. ರಾಮಣ್ಣ ಮಧು ಹಾಗೂ ಮಹಿಳಾ ಮಂಡಳಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ
ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಅಂಗವಾಗಿ ಪ್ರಾಕಾರೋತ್ಸವ ನಡೆಸಲಾಯಿತು.
ವೇದ ಪಾಠ ಶಾಲೆಯ ವಿದ್ಯಾರ್ಥಿಗಳು, ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಆನಂತರ ಶ್ರೀಸ್ವಾಮಿಯವರಿಗೆ ಮಹಾಮಂಗಳಾರತಿ ನಡೆಸಿ, ತೀರ್ಥಪ್ರಸಾದ ವಿತರಿಸಲಾಯಿತು.
Also Read: ದೆಹಲಿ ಜೆಎನ್’ಯು ಗಲಾಟೆ: ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಎಫ್’ಐಆರ್
ಕಾರ್ಯಕ್ರಮದಲ್ಲಿ ಪ್ರಧಾನ ರಂಗನಾಥಶರ್ಮ ಹಾಗೂ ಶ್ರೀನಿವಾಸ, ರಮಾಕಾಂತ್, ಸುಧೀಂದ್ರ, ಶರತ್, ಪ್ರದೀಪ, ಕೃಷ್ಣಪ್ಪ, ಶ್ರೀಕಾಂತ್, ರವಿ ಮಾಸ್ಟರ್ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post