ಕಲ್ಪ ಮೀಡಿಯಾ ಹೌಸ್ | ಸೊರಬ |
ನಿಮ್ಮ ಪರಿಹಾರ ಯಾರಿಗೆ ಬೇಕ್ರಿ… ಮೊದಲು ನಮ್ಮಗಳ ಆರೋಗ್ಯ, ಮಾನಸಿಕ, ಆರ್ಥಿಕ ಸ್ಥಿತಿಯನ್ನು ಹಾಳು ಮಾಡುತ್ತಿರುವ ಕಲ್ಲುಕ್ವಾರಿಯನ್ನು ಮೊದಲ ನಿಲ್ಲಿಸಿ ಎಂದು ಬಸ್ತಿಕೊಪ್ಪ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Also Read: ಕೇಂದ್ರ-ರಾಜ್ಯದಲ್ಲಿ ಜನರಿಗೆ ಸ್ಪಂದಿಸುವ ಪಕ್ಷ ಅಧಿಕಾರಕ್ಕೆ ಬರಬೇಕು: ಶಾಸಕ ಸಂಗಮೇಶ್ವರ್
ತಾಲೂಕು ಚಂದ್ರಗುತ್ತಿ ಹೋಬಳಿ ಬಸ್ತಿಕೊಪ್ಪ ಗ್ರಾಮದಲ್ಲಿ ಕಲ್ಲುಕ್ವಾರೆ ಕೆಲಸದಿಂದ ಆಗುತ್ತಿರುವ ತೊಂದರೆಯನ್ನು ಗ್ರಾಮಸ್ಥರು ದೂರಿಕೊಂಡಿರುವ ಹಿನ್ನೆಲೆಯಲ್ಲಿ ವೃಕ್ಷಲಕ್ಷ ಆಂದೋಲನ ಹಾಗೂ ಗ್ರಾಮಸ್ಥರು ಈಚೆಗೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದು, ಅದರನ್ವಯ ನಡೆದ ಜಂಟಿ ಕಾರ್ಯಚರಣೆಯಲ್ಲಿ ಬಂದಂತಹ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.
ಅನುಮತಿಯ ನಿಯಮಗಳನ್ನು ಗಾಳಿಗೆ ತೂರಿ ಕಲ್ಲುಕ್ವಾರೆ ನಡೆಸುತ್ತಿದ್ದು, ಜನಸಾಮಾನ್ಯರು ಕೇಳಿದರೆ ಯಾಮಾರಿಸುತ್ತಾರೆ. ಗಣಿಗಾರಿಕೆಯ ಯಾವುದೇ ಕಾನೂನುಗಳು ಕೂಡ ಇಲ್ಲಿ ಅನುಷ್ಠಾನವಾಗಿಲ್ಲ. ಗ್ರಾಪಂ ಗೆ ಕ್ವಾರೆ ನಿಲ್ಲಿಸುವಂತೆ ಮನವಿ ಕೊಟ್ಟರೆ ಕೋಟಿಗಟ್ಟಲೆ ತೆರಿಗೆ ಕಟ್ಟುವ ಕ್ವಾರೆಯನ್ನು ಮುಚ್ಚಲು ಹೇಳಬೇಡಿ ಎನ್ನುತ್ತಾರೆ. ಯಾರಾದರೂ ಕಾಯಿಲೆಯಿಂದ ನರಳುತ್ತಿದ್ದರೆ ಅಂಬೂಲೆನ್ಸ್ ನವರು ಗ್ರಾಮಕ್ಕೆ ಬರುತ್ತಿಲ್ಲ, ನಾವೇ ಕಂಬಳಿಯಲ್ಲಿ ಮುಖ್ಯ ರಸ್ತೆಗೆ ಹೊತ್ತೊಯ್ದು ಸಾಗಿಸಬೇಕು. ಅಂತಹ ಸ್ಥಿತಿ ಗ್ರಾಮದ ರಸ್ತೆಗೆ ಬಂದಿದೆ. ಅದೂ ಕೂಡ ಈ ಕ್ವಾರೆಯ ಕಲ್ಲು ಸಾಗಣಿಕೆಯಿಂದ. ಹುಟ್ಟುವ ಮಕ್ಕಳು ತೂಕದಲ್ಲಿ ಹೀನತೆ, ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಸ್ತಮ, ಕೆಮ್ಮು ಇಲ್ಲಿ ಸಾಮಾನ್ಯ ಎನ್ನುವಷ್ಟರ ಮಟ್ಟಿಗಾಗಿದೆ. ಈ ಕ್ವಾರೆಯನ್ನು ನಿಲ್ಲಿಸದಿದ್ದರೆ ಮುಂದಿನ ಚುನಾವಣೆಗೆ ಬಹಿಷ್ಕಾರ ಹಾಕುತ್ತೇವೆ, ಶಾಸಕರ ಕಚೇರಿ, ತಾಲೂಕು ಕಛೇರಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಕೂರುತ್ತೇವೆ. ಕ್ವಾರೆಗೆ ತೆರಳುವ ಎಲ್ಲ ರಸ್ತೆಯನ್ನು ಮುಚ್ಚುತ್ತೇವೆ ಎಂದು ಒಕ್ಕೊರಲು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
Also Read: ಸ್ವತಃ ಪೊರಕೆ ಹಿಡಿದು ಹುಚ್ಚರಾಯ ಸ್ವಾಮಿ ದೇವಾಲಯ ಆವರಣ ಸ್ವಚ್ಛಗೊಳಿಸಿದ ಸಂಸದ ರಾಘವೇಂದ್ರ
ಕಾರ್ಯಾಚರಣೆಗೆ ಆಗಮಿಸಿದ್ದ ರಾಜ್ಯ ಭೂ ಗಣಿ ವಿಜ್ಞಾನ ಇಲಾಖೆಯ ಜಿಲ್ಲಾ ಹಿರಿಯ ಗಣಿ ವಿಜ್ಞಾನಿ ಪಿ.ಎಸ್. ನವೀನ್ ಮಾತನಾಡಿ, ಈಗಾಗಲೇ ಈ ಗಣಿಗೆ ಸರ್ಕಾರದಿಂದ ಅನುಮತಿ ದೊರಕಿದ್ದು ಅದರಂತೆ ಗಣಿಗಾರಿಕೆ ನಡೆಯುತ್ತಿದೆ. ಗಣಿ ಕಾಯಿದೆಗೆ ಅನುಗುಣವಾಗಿ ಕಾರ್ಯ ನಡೆಯುತ್ತಿದೆ. ಪ್ರತಿ ಆರು ತಿಂಗಳಿಗೊಮ್ಮೆ ಗಣಿಗಾರಿಕೆ ಪ್ರದೇಶದ ಜನರ ಆರೋಗ್ಯ ತಪಾಸಣೆ ನಡೆಯಬೇಕು. ಆದರೆ ಇಲಾಖೆಗೆ ಅನುದಾನದ ಕೊರತೆ ಇರುವುದರಿಂದ ತಪಾಸಣೆ ನಡೆಸಿಲ್ಲ, ಶೀಘ್ರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಎಂದ ಅವರು, ಕ್ವಾರೆಯಲ್ಲಿ ಬಳಸುವ ಡೈನಾಮೇಟ್ ತೀವ್ರತೆಯನ್ನು ಪರೀಕ್ಷಿಸಲಾಗುತ್ತದೆ ಅಲ್ಲಿಯವರೆಗೆ ಇಲ್ಲಿ ಡೈನಾಮೇಟ್ ಸಿಡಿಸದಂತೆ ಕ್ವಾರೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಜಿಯಾಲಜಿಸ್ಟ್ ಮಾನಸ, ಮಾಲಿನ್ಯ ನಿಯಂತ್ರಣಾಧಿಕಾರಿ ಶಿಲ್ಪಾ, ತಹಶೀಲ್ದಾರ್ ಮಂಜುಳ, ಆರ’ಎಫ್’ಒ ಪ್ರಭುರಾಜ್ ಪಾಟೀಲ್, ರಾಜ್ಯ ಜೀವವೈವಿಧ್ಯ ಮಂಡಳಿಯ ಉಪಸಮಿತಿಯ ತಜ್ಞ ಶ್ರೀಪಾದ ಬಿಚ್ಚುಗತ್ತಿ, ಅರಣ್ಯ, ಕಂದಾಯ, ಭೂಗಣಿ ವಿಜ್ಞಾನ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಗ್ರಾಮಸ್ಥರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post