ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ರಾಮಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿರುವ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ಶ್ರೀಪಾದಂಗಳವರು ಕಾರ್ಮಿಕರನ್ನು ಮಾತನಾಡಿಸಿ ಉಭಯಕುಶಲೋಪರಿ ನಡೆಸಿದರು.
ಅಯೋಧ್ಯೆಗೆ ತೆರಳಿಸಿದ್ದ ಶ್ರೀಗಳು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಅದಕ್ಕೂ ಮೊದಲು ತಾತ್ಕಾಲಿಕ ಮಂದಿರದಲ್ಲಿರುವ ರಾಮಲಲ್ಲಾನ ದರ್ಶನಪಡೆದು ಚಾಮರಸೇವೆ, ಮಂಗಳಾರತಿ ಬೆಳಗಿ ದೇಶದ ಕ್ಷೇಮ ಸುಭಿಕ್ಷೆ ಶಾಂತಿಗೆ ಪ್ರಾರ್ಥಿಸಿದರು.
ಬಳಿಕ ಮಂದಿರ ನಿರ್ಮಾಣ ಸ್ಥಳಕ್ಕೆ ತೆರಳಿ ಕಾರ್ಮಿಕರೊಂದಿಗೆ ಉಭಯಕುಶಲೋಪರಿ ನಡೆಸಿ ಉತ್ಸಾಹ ತುಂಬಿದರು. ನಿರ್ಮಾಣ ಕಾಮಗಾರಿ ನಿವೇಶನ ಪೂರ್ತಿ ಶ್ರೀಗಳು ಸಂಚರಿಸಿ ಅವಲೋಕಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















